ರಾಜ್ಯ

ಕರ್ನಾಟಕದ ಅತೀ ಹಿರಿಯ ಹುಲಿ 19 ವರ್ಷದ ಕೃತಿಕಾ ಇನ್ನಿಲ್ಲ

Vishwanath S

ಶಿವಮೊಗ್ಗ: ಕರ್ನಾಟಕದ ಅತ್ಯಂತ ಹಿರಿಯ ಹುಲಿ ಎಂಬ ಖ್ಯಾತಿಗೆ ಹೆಸರಾಗಿದ್ದ 19 ವರ್ಷದ ಕೃತಿಕಾ ಹುಲಿ ಭಾನುವಾರ ಬೆಳಗ್ಗೆ ಮೃತಪಟ್ಟಿದೆ.

ಕೆಲ ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಹುಲಿ ಶಿವಮೊಗ್ಗದ ತಾವರೆಕೊಪ್ಪ ಹುಲಿಸಿಂಹಧಾಮದಲ್ಲಿ ಮೃತಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹುಲಿಸಿಂಹಧಾಮದ ಸಫಾರಿಯಲ್ಲಿಯೇ ಕೃತಿಕಾ ಜನಿಸಿ ಸಾವಿರಾರು ಪ್ರಾಣಿಪ್ರಿಯರ ಮಚ್ಚುಗೆಯನ್ನು ಗಳಿಸಿಕೊಂಡಿತ್ತು. ತನ್ನ ಜೀವಿತಾವಧಿಯಲ್ಲಿ 10 ಮರಿಗಳಿಗೆ ಜನ್ಮ ನೀಡಿತ್ತು.

SCROLL FOR NEXT