ರಾಜ್ಯ

ಬಿಬಿಎಂಪಿ ನಂತರ, ಸೂರು ಕಳೆದುಕೊಂಡ ನಿವಾಸಿಗಳ ಬೆನ್ನು ಬಿದ್ದ ಬ್ಯಾಂಕ್ ಗಳು

Shilpa D

ಬೆಂಗಳೂರು: ರಾಜಕಾಲುವೆಗಳ ಮೇಲೆ ಕಟ್ಟಿದ್ದ ಮನೆಗಳನ್ನು ಬಿಬಿಎಂಪಿ ತೆರವುಗೊಳಿಸಿ ಅಲ್ಲಿನ ನಿವಾಸಿಗಳಿಗೆ ಶಾಕ್ ನೀಡಿದೆ.

ಈ  ಆಘಾತದಿಂದ ಮನೆ ಕಳೆದುಕೊಂಡಿರುವ ನಿವಾಸಿಗಳು ಇನ್ನೂ ಹೊರ ಬಂದಿಲ್ಲ, ಅದಾಗಲೇ ಬ್ಯಾಂಕ್ ಗಳು ಮನೆ ಕೊಂಡು ಕೊಳ್ಳಲು ತಾವು ನೀಡಿರುವ ಸಾಲದ ಹಣವನ್ನು ವಾಪಸ್ ನಡುವಂತೆ ದುಂಬಾಲು ಬಿದ್ದಿವೆ.

ಬನ್ನೇರುಘಟ್ಟ ರಸ್ತೆಯ ಅವನಿ ಶೃಂಗೇರಿ ನಗರ, ಬೊಮ್ಮನಹಳ್ಳಿ, ಮಹದೇವಪುರ, ಯಲಹಂಕ, ವಿದ್ಯಾರಣ್ಯಪುರ ಮತ್ತು ರಾಜ ರಾಜೇಶ್ವರಿ ನಗರದ ಸುಮಾರು ಅರ್ಧ ಪ್ರದೇಶಗಳಲ್ಲಿ ಬಿಬಿಎಂಪಿ ಮನೆಗಳನ್ನು ಧ್ವಂಸಗೊಳಿಸಿದೆ. ಹಾಗಾಗಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಅಧಿಕಾರಿಗಳು ಸಾಲ ನೀಡಿರುವ ಹಣವನ್ನು ರಿಕವರಿ ಮಾಡಲು ನಿರ್ಧರಿಸಿದ್ದಾರೆ.

ನಾವು ಗ್ರಾಹಕರು ಡೆಪಾಸಿಟ್ ಇಟ್ಟ ಹಣವನ್ನು ಮನೆ ಸಾಲವಾಗಿ ನೀಡಿದ್ದೇವೆ. ಮನೆ ಸಾಲ ಪಡೆದ ಗ್ರಾಹಕರು ನೀಡುವ ಇಎಂಐ ಹಣದಿಂದ ನಾವು ಡಿಪಾಸಿಟ್ ಇಟ್ಟಿರುವ ಗ್ರಾಹಕರ ಹಣಕ್ಕೆ ಬಡ್ಡಿ ನೀಡಬೇಕು. ಇವರು ನೀಡಿಲ್ಲಾ ಎಂದದಾದರೇ ನಾವು ಎಲ್ಲಿಂದ ತಂದು ಅವರಿಗೆ ಬಡ್ಡಿ ಹಣ ನೀಡಲು ಸಾಧ್ಯ ಎಂದು ಬ್ಯಾಂಕ್ ಅಧಿಕಾರಿಗಳು ಹೇಳುತ್ತಾರೆ.

SCROLL FOR NEXT