ಚಿತ್ರದುರ್ಗ: 37 ಲಕ್ಷ ರೂ. ಮೊತ್ತದ ಹೊಸ ನೋಟು ಸಾಗಿಸುತ್ತಿದ್ದ ವ್ಯಕ್ತಿ ಬಂಧನ
2ಸಾವಿರ ರು ಮುಖ ಬೆಲೆಯ ನೋಟುಗಳ ಸುಮಾರು 37 ಲಕ್ಷ ರು ಹಣವನ್ನು ಅಕ್ರಮವಾಗಿ ಕೊಂಡೊಯ್ಯುತ್ತಿದ್ದ ವ್ಯಕ್ತಿಯನ್ನು...
ಚಿತ್ರದುರ್ಗ: 2ಸಾವಿರ ರು ಮುಖ ಬೆಲೆಯ ನೋಟುಗಳ ಸುಮಾರು 37 ಲಕ್ಷ ರು ಹಣವನ್ನು ಅಕ್ರಮವಾಗಿ ಕೊಂಡೊಯ್ಯುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ರಾಮಕೃಷ್ಣ ಎಂಬಾತ ಹಣದೊಂದಿಗೆ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ಇನ್ಸ್ ಪೆಕ್ಟರ್ ಸಮೀವುಲ್ಲಾ, ಮತ್ತು ಪಿಎಸ್ ಐ ಸತೀಶ್ ನಾಯಕ್ ಆರೋಪಿಯನ್ನು ಬಂಧಿಸಿದ್ದಾರೆ.
500 ಹಾಗೂ ಸಾವಿರ ರು ನೋಟುಗಳ ನಿಷೇಧದ ನಂತರ ಹಣ ಬದಲಾವಣೆ ದಂಧೆಯಲ್ಲಿ ರಾಮಕೃಷ್ಣ ಭಾಗಿಯಾಗಿರುವುದಾಗಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಚಳ್ಳಕೆರೆ ಮೂಲದ ವ್ಯಾಪಾರಿಗಳ ಜೊತೆ ಆರೋಪಿ ನಂಟು ಹೊಂದಿದ್ದು, ಹಣ ಬದಲಾವಣೆ ಆಮೀಷ ತೋರಿಸಿದ್ದಾನೆ ಎಂದು ಸಂತೋಷ ಕುಮಾರ್ ಎಂಬ ವ್ಯಾಪಾರಿಯೊಬ್ಬರು ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಚಳ್ಳಕೆರೆ ಪೊಲೀಸರು ಪ್ರಕರರಣ ದಾಖಲಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.