ಬೆಂಗಳೂರು: ಕಳೆದ ಕೆಲವು ದಿನಗಳಿಂದ ಬೆಂಗಳೂರು ನಗರ ಪೊಲೀಸರು ಬಂದೂಕು ಸಂಬಂಧಿಸಿದ ಅಪರಾಧ ಪ್ರಮಾಣವನ್ನು ತಡೆಗಟ್ಟಲು ಶೇ. 40 ರಷ್ಟು ಗನ್ ಲೈಸೆನ್ಸ್ ಅರ್ಜಿಗಳನ್ನು ತಿರಸ್ಕರಿಸಿದ್ದಾರೆ.
ಬೆಂಗಳೂರಿನಲ್ಲಿ ರಿವಾಲ್ವರ್. ಪಿಸ್ತೂಲ್ ಮತ್ತು ಡಬಲ್ ಬ್ಯಾರೆಲ್ ಗನ್ ಮಾರಾಟ ಮಾಡುವ ಸುಮಾರು 15 ಅಂಗಡಿಗಳಿವೆ,
2013 ರಿಂದ ನವೆಂಬರ್ 2016 ರವರೆಗೆ ಸುಮಾರು 1,793 ಗನ್ ಲೈಸೆನ್ಸ್ ಅರ್ಜಿಗಳು ಇಲಾಖೆಗೆ ಬಂದಿವೆ, ಅದರಲ್ಲಿ 994 ಮಂದಿಗೆ ಮಾತ್ರ ಪರವಾನಗಿ ನೀಡಲಾಗಿದೆ. ಇನ್ನೂ 2013 ರಲ್ಲಿ ಪಿಸ್ತೂಲ್ ಮತ್ತು ರಿವಾಲ್ವರ್ ಕ್ಯಾಟಗರಿಯಲ್ಲಿ 269 ಮಂದಿ ಪರವಾನಗಿಗಾಗಿ ಅರ್ಜಿ ಸಲ್ಲಿಸಿದ್ದರು, ಅದರಲ್ಲಿ ಈ ವರ್ಷ 73 ಮಂದಿಗೆ ಮಾತ್ರ ಲೈಸೆನ್ಸ್ ನೀಡಲಾಗಿದೆ ಎಂದು ಬೆಂಗಳೂರು ನಗರ ಪೊಲೀಸಲು ತಿಳಿಸಿದ್ದಾರೆ.
ಗನ್ ಲೈಸೆನ್ಸ್ ಗೆ ಬಯಸುವವರು ಮೊದಲು ನಗರ ಶಸಸ್ತ್ರ ಮೀಸಲು ಪಡೆಯ ಬಳಿ ತರಬೇತಿ ಪಡೆಯಬೇಕು. ಅನಂತರವಷ್ಟೇ ಪರವಾನಗಿಗೆ ಅರ್ಜಿ ಸಲ್ಲಿಸಬೇಕು ಎಂದು ನಿವೃತ್ತ ಎಸಿಪಿ ಅಶೋಕ್ ಕುಮಾರ್ ಹೇಳಿದ್ದಾರೆ.
ತರಬೇತಿ ಪಡೆದ ಆರು ತಿಂಗಳೊಳಗೆ ಗನ್ ಲೈಸೆನ್ಸ್ ಗೆ ಅರ್ಜಿ ಹಾಕಬಹುದಾಗಿದೆ. ನಗರದ ಹೊರ ವಲಯದಲ್ಲಿ ಒಂಟಿಯಾಗಿ ವಾಸಿಸುವವರು,ದೊಡ್ಡ ದೊಡ್ಡ ಮಟ್ಟದಲ್ಲಿ ಹಣಕಾಸಿನ ವ್ಯವಹಾರ ನಡೆಸುವವರು ಮತ್ತು ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವವರಿಗೆ ಗನ್ ಲೈಸೆನ್ಸ್ ಗೆ ಅರ್ಜಿ ಸಲ್ಲಿಸಬಹುದು. ಆದರೆ ಕೆಲ ಯುವಜನತೆ ಶೋಕಿಗಾಗಿ ಗನ್ ಲೈಸೆನ್ಸ್ ಬಯಸುತ್ತಿದ್ದಾರೆ ಎಂದು ಅಶೋಕ್ ಕುಮಾರ್ ಹೇಳಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮಿಗಳೇ ಹೆಚ್ಚಿನ ಪ್ರಮಾಣದಲ್ಲಿ ಗನ್ ಲೈಸೆನ್ಸ್ ಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಅಕ್ರಮವಾಗಿ ಗನ್ ಇಟ್ಟು ಕೊಂಡಿರುವವರನ್ನು ಪತ್ತೆ ಹಚ್ಚುವುದು ತುಂಬಾ ಕಷ್ಟದ ಕೆಲಸ, ದೂರು ದಾಖಲಾಗದ ಹೊರತು ನಾವು ಅನಧಿಕೃತವಾಗಿ ಗನ್ ಇಟ್ಟು ಕೊಂಡವರನ್ನು ಪತ್ತೆ ಹಚ್ಚಲು ಸಾಧ್ಯವಾಗದು ಎಂದು ನಗಕರ ಪೊಲೀಸ್ ಆಯುಕ್ತ ಎನ್. ಎಸ್ ಮೆಘರಿಕ್ ಹೇಳಿದ್ದಾರೆ.