ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಅಪಾರ್ಟ್ ಮೆಂಟ್ ನ 7ನೇ ಮಹಡಿಯಿಂದ ಜಿಗಿದು ಬಾಲಕ ಸಾವು

17 ವರ್ಷದ ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ತಾನು ವಾಸವಿರುವ ಅಪಾರ್ಟ್ ಮೆಂಟ್ ನ 7ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ..

ಬೆಂಗಳೂರು: 17 ವರ್ಷದ ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ತಾನು ವಾಸವಿರುವ ಅಪಾರ್ಟ್ ಮೆಂಟ್ ನ 7ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜೆಪಿ ನಗರದ 7ನೇ ಹಂತದ ಅರಕೆರೆ ಬಳಿ ನಡೆದಿದೆ.

ಸಾಫ್ಟವೇರ್ ಸಂಸ್ಥೆಯ ಮಾಲೀಕರಾದ ಶ್ರೀನಿವಾಸ್ ಎಂಬುವರ ಪುತ್ರ ಕಾರ್ತಿಕ್ ಮೃತ ದುರ್ದೈವಿ, ಮಂಗಳವಾರ ರಾತ್ರಿ ಸುಮಾರು 8.30 ರ ಹೊತ್ತಿಗೆ ಈ ಘಟನೆ ಸಂಭವಿಸಿದೆ.

ರಾತ್ರಿ ಮನೆಗೆ ಬಂದ ಶ್ರೀನಿವಾಸ್ ಮಗ ರೂಮಿನಲ್ಲಿದ್ದದ್ದನ್ನು ನೋಡಿ ಟ್ಯೂಷನ್ ಗೆ ಏಕೆ ಹೋಗಲಿಲ್ಲ ಎಂದು ಕೇಳಿದ್ದಾರೆ, ಕಾರ್ತಿಕ್ ತಾಯಿ ಶ್ರೀನಿವಾಸ್ ಅವರನ್ನು ಸಮಾಧಾನ ಪಡಿಸಲು ಯತ್ನಿಸಿದ್ದಾರೆ. ಈ ವೇಳೆ ತಂದೆ ಮತ್ತು ಮಗನ ನಡುವೆ ಮಾತಿನ ಚಕಮಕಿ ನಡೆದಿದೆ.  ಇದರಿಂದ ಅಸಮಾಧಾನಗೊಂಡ ಕಾರ್ತಿಕ್ ರೂಮಿನಿಂದ ಓಡಿ ಹೋಗಿ ಮನೆಯ ಬಾಲ್ಕನಿಯಿಂದ ಜಿಗಿದಿದ್ದಾನೆ. ಕಾರ್ತಿಕ್ ಹಿಂದೆಯೇ ಆತನ ಪೋಷಕರು ಓಡಿದ್ದಾರೆ. ಅದರೆ ಅಷ್ಟರಲ್ಲಾಗಲೇ ಕಾರ್ತಿಕ್ ರಕ್ತದ ಮಡುವಿನಲ್ಲಿ ಬಿದ್ದಿದ್ದ.  ಅಪಾರ್ಟ್ ಮೆಂಟ್ ಸೆಕ್ಯೂರಿಟಿ ಗಾರ್ಡ್ ಹುಳಿಮಾವು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಾರ್ತಿಕ್ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ಯಲಾಗಿದೆ.

ಆಂಧ್ರಪ್ರದೇಶ ಮೂಲಕ ಶ್ರೀನಿವಾಸ್ ಕಳೆದ ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಬನ್ನೇರುಘಟ್ಟ ರಸ್ತೆಯ ಅಲಯನ್ಸ್ ವಿವಿ ಕಾಲೇಜಿನಲ್ಲಿ ಕಾರ್ತಿಕ್ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CEC ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ CJP ಪ್ರತಿಭಟನೆ: ದೆಹಲಿಯಲ್ಲಿ ಬಂಧನ ಪ್ರಕ್ರಿಯೆ ಆರಂಭ, ತೀವ್ರ ಭದ್ರತೆ; Video

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ನಿರಾಳ; ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸುವ ನಿರ್ಧಾರ ರದ್ದು!

'ನ್ಯಾಯಾಂಗ ತನಿಖೆಗೆ ಒಪ್ಪಿಸಿ, ₹1 ಕೋಟಿ ಪರಿಹಾರ ನೀಡಿ': ಹನೂರು ಶೂಟೌಟ್ ಪ್ರಕರಣದ ಮಹಿಮಾ ದಾಸ್ ಸೇರಿ ಸಂತ್ರಸ್ತರ ಆಗ್ರಹ

ದೇವನಹಳ್ಳಿ ತಹಸೀಲ್ದಾರ್ ಕಚೇರಿಗೆ ದಿಢೀರ್ ಭೇಟಿ; ಕಂದಾಯ ಅಧಿಕಾರಿಯನ್ನು ಅಮಾನತುಗೊಳಿಸಿದ DCM ಜಿ ಪರಮೇಶ್ವರ