ಬೆಂಗಳೂರು: ವೈಟ್ ಫೀಲ್ಡ್ ನಲ್ಲಿರುವ ವೈದೇಹಿ ದಂತ ವಿಜ್ಞಾನ ಮತ್ತು ಸಂಶೋಧನೆ ಕೇಂದ್ರದ ನಿರ್ದೇಶಕರ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ,
ದಂತ ವಿಜ್ಞಾನ ಕೇಂದ್ರದ ನಿರ್ದೇಶಕಿ ಚೈತನ್ಯ ಆದಿಕೇಶವಲು ವಿರುದ್ಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಟಿಬೆಟ್ ಮೂಲದ 7 ವಿದ್ಯಾರ್ಥಿಗಳ ಬಳಿ 45 ಲಕ್ಷ ಹಣ ಪಡೆದು ಅವರ ಒರಿಜಿನಲ್ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯ ಮಾರ್ಕ್ಸ್ ಕಾರ್ಡ್ ಪಡೆದು ನರ್ಸಿಂಗ್ ಸೀಟು ಕೊಡಿಸುವುದಾಗಿ ಹೇಳಿ ವಂಚಿಸಿದ್ದಾರೆ ಎಂದು ದೂರು ದಾಖಲಾಗಿದೆ, ಹಣವನ್ನು ಪಡೆದಿರುವ ನಿರ್ದೇಶಕಿ ಸೀಟುಗಳನ್ನು ಕೊಡಿಸಲಿಲ್ಲ, ಜೊತೆಗೆ ಹಣ ಕೇಳಿದರೆ ಕೊಲ್ಲುವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಪ್ರಜಾ ಪರಿವರ್ತನಾ ವೇದಿಕೆ ರಾಜ್ಯಾಧ್ಯಕ್ಷ ಬಿ ಗೋಪಾಲ್ ಆಗ್ರಹಿಸಿದ್ದಾರೆ.