ಪ್ರಕಾಶ್ ದಿಮ್ಮಿ(ಮೃತಪಟ್ಟವರು)-ಪ್ರಕಾಶ್ ಜಾನಿ(ಆರೋಪಿ)
ಚನ್ನಪಟ್ಟಣ: ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ಪೇದೆಗಳ ನಡುವೆ ಆರಂಭವಾದ ಜಗಳ ಓರ್ವನ ಸಾವಿನಲ್ಲಿ ಅಂತ್ಯ ಕಂಡಿರುವ ಘಟನೆ ಚನ್ನಪಟ್ಟಣದಲ್ಲಿ ನಡೆದಿದೆ.
ಹಣಕಾಸು ವಿಚಾರವಾಗಿ ಸ್ನೇಹಿತರಾಗಿದ್ದ ಚನ್ನಪಟ್ಟಣ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೇದ ಎಂ ಪ್ರಕಾಶ್ ಜಾನಿ, ರಾಮನಗರ ಸಂಚಾರ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಪ್ರಕಾಶ್ ದಿಮ್ಮಿ ನಡುವೆ ಕೆಲವು ದಿನಗಳಿಂದ ವೈಮನಸ್ಯವಿತ್ತು.
ನಿನ್ನೆ ಡಾರ್ ಪರೇಡ್ ಮೈದಾನದಲ್ಲಿ ಇಬ್ಬರು ಪರಸ್ಪರ ಬಡಿದಾಡುಕೊಳ್ಳಬೇಕಾದರೆ, ಜಾನಿ ದಿಮ್ಮಿಯನ್ನು ತಳ್ಳಿದ್ದಾರೆ. ತೀವ್ರ ಅಸ್ವಸ್ಥಗೊಂಡ ದಿಮ್ಮಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗಿದೆ ಸಾವನ್ನಪ್ಪಿದ್ದಾರೆ.
ಘಟನೆ ನಂತರ ಜಾನಿ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟದಲ್ಲಿದ್ದಾರೆ ಎಂದು ಚನ್ನಪಟ್ಟಣದ ಪೊಲೀಸರು ತಿಳಿಸಿದ್ದಾರೆ.