ಬೆಂಗಳೂರು: ವಾಹನಗಳ್ಳರನ್ನು ಬಂಧಿಸಲು ಮುಂದಾಗಿ ಹತ್ಯೆಗೀಡಾಗಿದ್ದ ದೊಡ್ಡಬಳ್ಳಾಪುರದ ಪಿಎಸ್ಐ ಜಗದೀಶ್ ಅವರ ಪತ್ನಿಗೆ ಸಬ್ ರಿಜಿಸ್ಟ್ರಾರ್ ಹುದ್ದೆ ನೀಡಲು ಸರ್ಕಾರ ನಿರ್ಧರಿಸಿದೆ.
ಎಂ.ಎ ಪದವೀಧರೆಯಾಗಿರುವ ಜಗದೀಶ್ ಪತ್ನಿ ರಮ್ಯಾ ಅವರಿಗೆ ಅನುಕಂಪದ ಮೇಲೆ ಸಬ್ ರಿಜಿಸ್ಟ್ರಾರ್ ಹುದ್ದೆ ನೀಡಲು ಸಚಿವ ಸಂಪುಟ ನಿರ್ಧರಿಸಿದೆ.
ಕಳೆದ ವರ್ಷ ಅಕ್ಟೋಬರ್ ನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಠಾಣೆಯ ಪಿಎಸ್ ಐ ಜಗದೀಶ್ ಅವರು ತಮ್ಮ ಸಿಬ್ಬಂದಿ ಜತೆಗೂಡಿ ಪರಾರಿಯಾಗುತ್ತಿದ್ದ ಆರೋಪಿಗಳನ್ನು ಸೆರೆಹಿಡಿಯಲು ಬೆನ್ನಟ್ಟಿದ್ದಾಗ ನೆಲಮಂಗಲದ ಗ್ರಾನೈಟ್ ಕಾರ್ಖಾನೆ ಬಳಿ ದುಷ್ಕರ್ಮಿಗಳು ಜಗದೀಶ್ ಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದರು.