ಚಾಮರಾಜನಗರ: ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ, ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿಕೊಂಡು ವಂಚಿಸಿದ ಪ್ರಕರಣದಲ್ಲಿ ಪೊಲೀಸರು ಗ್ರಾಮ ಪಂಚಾಯಿತಿ ಸದಸ್ಯನನ್ನು ಬಂಧಿಸಿದ್ದಾರೆ,
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಮುಂಟಿಪುರ ಗ್ರಾಮ ಪಂಚಾಯಕ್ ಸದಸ್ಯ ಪರಮೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಪರಮೇಶ್ ನನ್ನನ್ನು ವಿವಾಹವಾಗುವುದಾಗಿ ನಂಬಿಸಿ, ದೈಹಿಕವಾಗಿ ಬಳಸಿಕೊಂಡಿದ್ದ. ಈಗ ನಾನು ಗರ್ಭಿಣಿಯಾಗಿದ್ದೇನೆ. ಈಗ ಮದುವೆಯಾಗು ಎಂದು ಕೇಳಿದರೆ, ನಿರಾಕರಿಸುತ್ತಿರುವ ಆತ 5 ಲಕ್ಷ ರು. ನೀಡುತ್ತೇನೆ. ಈ ಸಂಬಂಧ ಎಲ್ಲಿಯೂ ಏನು ಬಹಿರಂಗ ಪಡಿಸಬೇಡ ಎಂದು ಒತ್ತಡ ಹೇರುತ್ತಿದ್ದಾನೆ ಎಂದು ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ.
ಯುವತಿ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರು ಗುಂಡ್ಲುಪೇಟೆ ಪೊಲೀಸರು ಆರೋಪಿಯನ್ನು ಬಂಧಿಸಿ, ವಿಚಾರಣೆ ಮುಂದುವರಿಸಿದ್ದಾರೆ.