ರಾಜ್ಯ

ಕೆಳದರ್ಜೆ ಟಿಕೆಟ್‌ನಲ್ಲಿ ಮಾತ್ರ ಕನ್ನಡ; ಸಿಟಿ ರವಿ ಪ್ರಶ್ನೆಗೆ ರೈಲ್ವೆ ಸಚಿವಾಲಯ ಉತ್ತರ

Rashmi Kasaragodu
ಬೆಂಗಳೂರು: ಕರ್ನಾಟಕದಲ್ಲಿ ಎಲ್ಲ ರೈಲು ಟಿಕೆಟ್‌ಗಳನ್ನು ಕನ್ನಡದಲ್ಲೇ ಪ್ರಿಂಟ್ ಮಾಡಿಸಿ. ಇದ್ಯಾವುದೂ ಅಸಾಧ್ಯವಲ್ಲವಲ್ಲಾ? ಪ್ರತಿಯೊಬ್ಬ ವ್ಯಕ್ತಿಗೂ ಆತನ ಮಾತೃಭಾಷೆ ಪ್ರಧಾನವೆನಿಸುತ್ತದೆ. ಆದ್ದರಿಂದ ಎಲ್ಲ ಟಿಕೆಟ್ ಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಪ್ರಿಂಟ್ ಮಾಡುವುದು ಒಳ್ಳೆಯದು ಎಂದು ಬಿಜೆಪಿ ಶಾಸಕ ಸಿಟಿ ರವಿ ಅವರು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರಿಗೆ ಟ್ವೀಟ್ ಮಾಡಿದ್ದರು.
ಇದಕ್ಕೆ ರೈಲ್ವೆ ಸಚಿವಾಲಯ ನೀಡಿದ ಉತ್ತರ ನೋಡಿ ರವಿಯವರಿಗೆ ಮಾತ್ರವಲ್ಲ ನೆಟಿಜನ್‌ಗಳಿಗೇ ಅಚ್ಚರಿಯಾಗಿದೆ.
ಕೆಳದರ್ಜೆಯ ಟಿಕೆಟ್‌ಗಳಲ್ಲಿ ಮಾತ್ರ ಪ್ರಾದೇಶಿಕ ಭಾಷೆಯನ್ನು ಬಳಸಲಾಗುವುದು. ಇನ್ನುಳಿದೆಡೆ ಹಿಂದಿ ಮತ್ತು ಇಂಗ್ಲಿಷ್ ಭಾಷೆಯನ್ನು ಮಾತ್ರ ಬಳಸಲಾಗುವುದು- ಹೀಗೆಂದು ರೈಲ್ವೆ ಇಲಾಖೆ ರವಿಯವರಿಗೆ ಉತ್ತರಿಸಿದೆ.
ರೈಲ್ವೆ ಇಲಾಖೆ ಈ ರೀತಿ ಟ್ವೀಟ್ ಮಾಡಿದ್ದಕ್ಕೆ ನೆಟಿಜನ್‌ಗಳು ಸಾಮಾಜಿಕ ತಾಣಗಳಲ್ಲಿ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಭಾರತೀಯ ಸಂವಿಧಾನದಲ್ಲಿ ಭಾರತದಲ್ಲಿರುವ ಪ್ರಮುಖ 15 ಭಾಷೆಗಳು (ಹಿಂದಿಯೂ ಸೇರಿದಂತೆ) ಪ್ರಾದೇಶಿಕ ಭಾಷೆಗಳೇ ಆಗಿವೆ. ಹೀಗಿರುವಾಗ ಹಿಂದಿ ಭಾಷೆಗೆ ಮಾತ್ರ ಯಾಕೆ ಮಹತ್ತರ ಸ್ಥಾನ ನೀಡಲಾಗುತ್ತದೆ ಎಂದು ನೆಟಿಜನ್ ಗಳು ಪ್ರಶ್ನಿಸಿದ್ದಾರೆ.
SCROLL FOR NEXT