ಬಾಲಕರ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯ 
ರಾಜ್ಯ

ಬಾಲಕರನ್ನು ವಿವಸ್ತ್ರಗೊಳಿಸಿ ಅಮಾನವೀಯ ಹಲ್ಲೆ ಪ್ರಕರಣ: 3 ಪೊಲೀಸ್ ಅಧಿಕಾರಿಗಳ ಅಮಾನತು

ಹೊಸಕೋಟೆಯಲ್ಲಿ ಅಂಗಡಿಯೊಂದರಲ್ಲಿ ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಮೂವರು ಅಪ್ರಾಪ್ತ ಬಾಲಕರನ್ನು ವಿವಸ್ತ್ರಗೊಳಿಸಿ ಅಮಾನವೀಯವಾಗಿ...

ಬೆಂಗಳೂರು: ಹೊಸಕೋಟೆಯಲ್ಲಿ ಅಂಗಡಿಯೊಂದರಲ್ಲಿ ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಮೂವರು ಅಪ್ರಾಪ್ತ ಬಾಲಕರನ್ನು ವಿವಸ್ತ್ರಗೊಳಿಸಿ ಅಮಾನವೀಯವಾಗಿ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಪ್ರಕರಣ ಸಂಬಂಧ ದೂರು ದಾಖಲಿಸಿಕೊಳ್ಳಲು ನಿರಾಕರಿಸಿ, ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಸಬ್ ಇನ್ಸ್ ಪೆಕ್ಟರ್ ದಯಾನಂದ್, ಪೇದೆಗಳಾದ ರಾಜು ಹಾಗೂ ಜಯರಾಮ್ ಅವರನ್ನು ಅಮಾನತುಗೊಳಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ಅವರು ಆದೇಶ ಹೊರಡಿಸಿದ್ದಾರೆ. 
ಕಳೆದ ಜೂನ್‌ 30 ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಏಳು ಆರೋಪಿಗಳ ಪೈಕಿ ನಾಲ್ವರನ್ನು ಬಂಧಿಸಿದ್ದು, ಶಾಮಶೇರ್, ಜಬ್ಬಿ, ಆಯುಬ್ ಹಾಗೂ ಗಾಂಧಿ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ.
ವ್ಯಾಪಾರಿ ಮುಸ್ತಾಕ್‌ ಎನ್ನುವವರ ಅಂಗಡಿಯಲ್ಲಿ ಕಳ್ಳತನ ನಡೆದಿದ್ದು, ಇದೇ ಆರೋಪದಲ್ಲಿ ಮುಸ್ತಾಕ್‌ ಅವರ ಪುತ್ರ ನೂರುದ್ದೀನ್‌ ತನ್ನ 6 ಮಂದಿ ಸ್ನೇಹಿತರೊಂದಿಗೆ ಬಾಲಕರನ್ನು ಶಾಲೆಯಿಂದ ಬಯಲಿಗೆ ಎಳೆದೊಯ್ದು ವಿವಸ್ತ್ರಗೊಳಿಸಿ ಹಿಗ್ಗಾಮುಗ್ಗಾ ಥಳಿಸಿದ್ದರು.
ಬಾಲಕರು ಬಿದ್ದು ಗೊಗೆರೆದರೂ ಬಿಡದ ಹಲ್ಲೆ ಕೋರರು ಬಾಲಕರ ಕೈಕಾಲುಗಳನ್ನು ತಿರುಚಿ, ಅವರ ಮೈಮೇಲೆ ನಿಂತು ರಕ್ಕಸರಂತೆ ವರ್ತಿಸಿದ್ದರು. ಈ ಎಲ್ಲಾ ಅಟ್ಟಹಾಸವನ್ನು ವಿಡಿಯೋ ಚಿತ್ರಿಕರಣ ಮಾಡಿಕೊಂಡು ಇತರರಿಗೆ ತೋರಿಸಿ ತಮ್ಮ ಏರಿಯಾದಲ್ಲಿ ಹವಾ ಹೇಗಿದೆ ಎನ್ನುವದನ್ನು ತೋರಿಸಲು ಮುಂದಾಗಿದ್ದಾರೆ. 
ಹಲ್ಲೆಯ ಬಳಿಕ ತೀವ್ರ ಅಸ್ವಸ್ಥಗೊಂಡ ಬಾಲಕರು ಮನೆಗೆ ಬಂದಾಗ ಆತಂಕಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಪೊಲೀಸರು ಬೇಜವಾಬ್ದಾರಿತನ ಪ್ರದರ್ಶಿಸಿ ಪ್ರಕರಣ ದಾಖಲಿಸಿಲು ಹಿಂಜರಿದಿದ್ದರು. 
ಘಟನೆ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗುತ್ತಿದ್ದಂತೆ ಹೊಸಕೋಟೆ ಪೊಲೀಸರು ಪ್ರರಕಣ ದಾಖಲಿಸಿಕೊಂಡಿದ್ದು, ಇತರೆ ಮೂವರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಹಸಸಿಂಹ, ಏಜೆಂಟ್ ಅಮರ್ ಚಿತ್ರ ಖ್ಯಾತಿಯ ನಿರ್ದೇಶಕ ಜೋ ಸೈಮನ್ ಹೃದಯಾಘಾತದಿಂದ ನಿಧನ

ಹೊಸ PMO ಕಚೇರಿ 'ಸೇವಾ ತೀರ್ಥ' ಕಟ್ಟಡಕ್ಕೆ ಪ್ರಧಾನಿ ಮೋದಿ ಸ್ಥಳಾಂತರ: ಮೊದಲ ದಿನವೇ ಹಲವು ಪ್ರಮುಖ ನಿರ್ಧಾರ!

ಸೆಂಟ್ರಲ್ ಏಜೆನ್ಸಿಗಳ ಒತ್ತಡದಿಂದ NCP ತೊರೆದಿದ್ದ ಅಜಿತ್ ಪವಾರ್, ಮತ್ತೆ ಎರಡು ಬಣಗಳ ವಿಲೀನ ಬಯಸಿದ್ದರು- NCP SP ನಾಯಕ

ಪ್ರೇಮಿಗಳ ದಿನಾಚರಣೆಗೆ ಕ್ಷಣಗಣನೆ: ಹಾರ್ದಿಕ್ ಪಾಂಡ್ಯಗೆ ಮಹಿಕಾ ಕೊಟ್ಟ 'ಸ್ಪೆಷಲ್ ಗಿಫ್ಟ್' ಏನು ಗೊತ್ತಾ? Video

ವಿಜಯ್ ಗೆ ಜನರಿಗೆ ಸಹಾಯ ಮಾಡುವ ಉದ್ದೇಶ ಇಲ್ಲ: ಸಿಂಪಲ್ ಆಗಿ ಸಿಎಂ ಆಗುವ ಬಯಕೆ- ಡಿಎಂಕೆ ತಿರುಗೇಟು

SCROLL FOR NEXT