ರಾಜ್ಯ

ವಿಚಾರಣೆಗೆ ಹಾಜರಾಗುವಂತೆ ಮರೀಗೌಡಗೆ ನೋಟಿಸ್ ಜಾರಿ

Manjula VN

ಮೈಸೂರು: ಮೈಸೂರು ಜಿಲ್ಲಾಧಿಕಾರಿಗೆ ಬೆದರಿಕೆ ಹಾಕಿ ತಲೆಮರೆಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಗೆಳೆಯ ಮರೀಗೌಡ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ರಾಜ್ಯ ಪೊಲೀಸರು ಗುರುವಾರ ನೋಟಿಸ್ ಜಾರಿ ಮಾಡಿರುವುದಾಗಿ ತಿಳಿದುಬಂದಿದೆ.

ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ಮರೀಗೌಡ ನಿವಾಸಕ್ಕೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದು, ಶೀಘ್ರಗತಿಯಲ್ಲಿ ವಿಚಾರಣೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.

ಕಳೆದ ಭಾನುವಾರ ಮೈಸೂರು ಜಿಲ್ಲಾಧಿಕಾರಿ ಸಿ. ಶಿಖಾ ಅವರಿಗೆ ಬೆದರಿಕೆ ಹಾಗೂ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದ ಮರೀಗೌಡ ಅವರು, ಅವಾಚ್ಯ ಶಬ್ಧಗಳಿಂದ ಅಧಿಕಾರಿಯನ್ನು ನಿಂದಿಸಿದ್ದರು ಎಂದು ಹೇಳಿ ನಜರ್ ಬಾದ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿತ್ತು. ಇದರಂತೆ ತನಿಖೆ ಕೈಗೊಂಡ ಪೊಲೀಸರು ಮರೀಗೌಡ ಅವರಿಗಾಗಿ ಹುಡುಕಾಟ ಆರಂಭಿಸಿದ್ದು, ಈ ವರೆಗೂ ಮರೀಗೌಡ ಅವರು ದೊರಕಿಲ್ಲ.

ಈ ಮಧ್ಯೆಯೇ ಮರೀಗೌಡ ಅವರು ತಮ್ಮ ಪರ ವಕೀಲರ ಮೂಲಕ ಮೈಸೂರಿನ 7ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲದಲ್ಲಿ ನಿರೀಕ್ಷಣಾ ಜಾಮೀರು ಕೋರಿ ಅರ್ಜಿಯೊಂದನ್ನು ಸಲ್ಲಿಸಿದ್ದಾರೆ.

SCROLL FOR NEXT