ಲೋಕೊಪಯೋಗಿ ಸಚಿವ ಹೆಚ್.ಸಿ. ಮಹದೇವಪ್ಪ ಅವರ ಪುತ್ರ ಸುನಿಲ್ ಬೋಸ್ 
ರಾಜ್ಯ

ಜಿಲ್ಲಾಧಿಕಾರಿ ಕಚೇರಿಗೆ ಸರ್ಕಾರಿ ವಾಹನದಲ್ಲಿ ಬಂದ ಮಹದೇವಪ್ಪ ಪುತ್ರ

ಲೋಕೊಪಯೋಗಿ ಸಚಿವ ಹೆಚ್.ಸಿ. ಮಹದೇವಪ್ಪ ಅವರ ಪುತ್ರ ಮತ್ತೆ ಸುದ್ದಿಗೆ ಬಂದಿದ್ದು, ಮೈಸೂರು ಜಿಲ್ಲಾಧಿಕಾರಿಗ ಕಚೇರಿಗೆ ಸರ್ಕಾರಿ ವಾಹನದಲ್ಲಿ ಹೋಗಿರುವುದು ಇದೀಗ...

ಮೈಸೂರು: ಲೋಕೊಪಯೋಗಿ ಸಚಿವ ಹೆಚ್.ಸಿ. ಮಹದೇವಪ್ಪ ಅವರ ಪುತ್ರ ಮತ್ತೆ ಸುದ್ದಿಗೆ ಬಂದಿದ್ದು, ಮೈಸೂರು ಜಿಲ್ಲಾಧಿಕಾರಿಗ ಕಚೇರಿಗೆ ಸರ್ಕಾರಿ ವಾಹನದಲ್ಲಿ ಹೋಗಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.

ಬನ್ನೂರು - ಟಿ ನರಸೀಪುರದ ರಸ್ತೆ ಅಗಲೀಕರಣ ಕುರಿತು ಭೂಮಿಯನ್ನು ಸ್ವಾಧೀನ ವಿಚಾರ ಕುರಿತಂತೆ ಮಾತನಾಡುವ ಸಲುವಾಗಿ ಮಹದೇವಪ್ಪ ಅವರ ಪುತ್ರ ಸುನಿಲ್ ಬೋಸ್ ಅವರು ನಿನ್ನೆ ಮೈಸೂರು ಜಿಲ್ಲಾಧಿಕಾರಿ ಸಿ ಶಿಖಾ ಅವರ ಕಚೇರಿಗೆ ಭೇಟಿ ನೀಡಿದ್ದರು. ಈ ವೇಳೆ ಸುನಿಲ್ ಬೋಸ್ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ (ಸಿಇಎಸ್ ಸಿ) ವಾಹನದಲ್ಲಿ ತೆರಳಿದ್ದರು.

ಭೂಮಿ ಕಳೆದುಕೊಂಡ ಜನರು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಸಾಕಷ್ಟು ಮಂದಿ ಭೂಮಿ ಕಳೆದುಕೊಂಡಿದ್ದರೂ ಅವರಿಗೆ ಸಿಗಬೇಕಿದ್ದ ಪರಿಹಾರ ಸಿಕ್ಕಿರಲಿಲ್ಲ. ಹೀಗಾಗಿ ಸಾರ್ವಜನಿಕ ಸಮಸ್ಯೆಗಳ ಕುರಿತು ಚರ್ಚೆ ನಡೆಸಲು ಸಿಇಎಸ್ಇ ವಾಹನದಲ್ಲಿ ಬಂದಿದ್ದೆ ಎಂದು ಸುನಿಲ್ ಬೋಸ್ ಹೇಳಿಕೊಂಡಿದ್ದಾರೆ.

ಸುನಿಲ್ ಬೋಸ್ ಭೇಟಿ ಕುರಿತಂತೆ ಶಿಖಾ ಅವರು ಮಾತನಾಡಿದ್ದು, ಭೂಮಿ ಕಳೆದುಕೊಂಡಿರುವ ಜನರೊಂದಿಗೆ ಸಭೆ ನಡೆಸುವಂತೆ ಮನವಿ ಸಲ್ಲಿಸಲು ಸುನಿಲ್ ಅವರು ಬಂದಿದ್ದರು. ಭೇಟಿ ವೇಳೆ ಮರೀಗೌಡ ಅವರ ವಿಚಾರವನ್ನು ಅವರು ಪ್ರಸ್ತಾಪಿಸಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal Floods: ಸಾವಿನ ಸಂಖ್ಯೆ 359ಕ್ಕೆ ಏರಿಕೆ; 288 ಭಾರತೀಯರು ಸೇರಿ 826 ಮಂದಿ ನಾಪತ್ತೆ; ಮತ್ತೆ ಪ್ರವಾಹ ಭೀತಿ! ಹೊಸ ಸರೋವರ ಪತ್ತೆ!

Nepal floods: ನೇಪಾಳ ಪ್ರವಾಹದ ಭೀಕರತೆ, 150 ಕಿ.ಮೀ ದೂರದ ಉತ್ತರ ಪ್ರದೇಶಕ್ಕೆ ಕೊಚ್ಚಿಕೊಂಡು ಬಂದ ಶವಗಳು!

Nepal Floods: ‘ಸಾವಿನ ಸಂಖ್ಯೆ ಊಹೆಗೂ ನಿಲುಕದಷ್ಟು ಏರಬಹುದು’; ಚೀನಾ ನಡೆ ಕುರಿತು ನೇಪಾಳ ಮಾಜಿ ಸಚಿವರ ಅನುಮಾನ!

RSS ಪಥಸಂಚಲನದಲ್ಲಿ ಭಾಗಿ: ಯಾದಗಿರಿಯ ಇಬ್ಬರು ಸರ್ಕಾರಿ ಶಿಕ್ಷಕರ ಅಮಾನತು

ಮಣಿಪುರದಲ್ಲಿ ಉಗ್ರರ ಅಟ್ಟಹಾಸ: ನಾಲ್ವರ ಸಾವು, ಒಬ್ಬ ನಾಪತ್ತೆ