ರಾಜ್ಯ

ಹೊಂದಾಣಿಕೆ ಮಾಡಿಕೊಳ್ಳಬೇಕು ಇಲ್ಲ ಕೆಲಸ ಬಿಡಬೇಕು: ಪೊಲೀಸ್ ಅಧಿಕಾರಿಗಳ ಸಂದಿಗ್ಧತೆ

Shilpa D

ಬೆಂಗಳೂರು: ಕೆಲಸದಲ್ಲಿ ಒತ್ತಡ ಮತ್ತು ರಾಜಕೀಯ ಹಸ್ತಕ್ಷೇಪ ಪೊಲೀಸ್ ಇಲಾಖೆಯಲ್ಲಿ ಹೊಸ ವಿಚಾರವೇನಲ್ಲ, ಆದರೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹೆಚ್ಚೆಚ್ಚು ಅಧಿಕಾರಿಗಳನ್ನು ಸಾವಿನ ದವಡೆಗೆ ತಳ್ಳುತ್ತಿರುವುದು ವಿಷಾಧನೀಯ.

ರಾಜಕಾರಣಿಗಳು ಕೆಲವೊಂದು ನಿರ್ಧಾರಗಳನ್ನು ಕೈಗೊಳ್ಳುತ್ತಾರೆ, ಅದನ್ನು ಪೊಲೀಸ್ ಇಲಾಖೆಯ ಕೆಳ ಹಂತದ ಅಧಿಕಾರಿಗಳ ಮೇಲೆ ಹಿರಿಯ ಪೊಲೀಸ್ ಅಧಿಕಾರಿಗಳು ಹೇರುತ್ತಾರೆ, ಆದೇಶ ಅನುಸರಿಸಿ ನಡೆಯಬೇಕು ಇಲ್ಲದಿದ್ದರೇ ಕೆಳ ಹಂತದ ಪೊಲೀಸ್ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕಟ್ಟಿಟ್ಟ ಬುತ್ತಿ. ಹಣ ಕೊಟ್ಟು ಪೊಲೀಸ್ ಇಲಾಖೆಗೆ ಸೇರುವ ವಿಷಯವೇನು ಗುಟ್ಟಾಗಿ ಉಳಿದಿಲ್ಲ, ಆದರೆ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಅವರು ಮತ್ತೆ ಮತ್ತೆ ಹಣ ನೀಡಬೇಕಾಗಿರುವುದು ದುರಂತ ಎಂದು ನಿವೃತ್ತ ಐಪಿಎಸ್  ಅಧಿಕಾರಿ ಗೊಪಾಲ್ ಬಿ ಹೊಸೂರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಇಂಥ ಪರಿಸ್ಥಿತಿಗಳು ಪೊಲೀಸ್ ಅಧಿಕಾರಿಗಳನ್ನು ಸಂದಿಗ್ಧತೆಗೆ ತಳ್ಳುತ್ತದೆ. ಇದು ಕೆಲವೊಮ್ಮೆ ಕಾನೂನು ಬಾಹಿರ ಡೀಲಿಂಗ್ ಗೆ ಕೈ ಹಾಕುತ್ತಾರೆ. ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗದೇ ಕೆಲವರು ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಎಂದು ನಿವೃತ್ತ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಇಬ್ಬರು ಡಿವೈಎಸ್ ಪಿ ರ್ಯಾಂಕ್ ನ ಪೊಲೀಸ್ ಅಧಿಕಾರಿಗಳ ಆತ್ಮಹತ್ಯೆ ರೋಗಗ್ರಸ್ಥ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ,. ಹಲವು ಪೊಲೀಸ್ ಅಧಿಕಾರಿಗಳು ಖಿನ್ನತೆಗೆ ಒಳಗಾಗುತ್ತಾರೆ. ಆದರೆ ಅವರನ್ನು ಅದರಿಂದ ಹೊರ ತರಲುನ ವ್ಯವಸ್ಥೆ ಸಮೇತ ಯಾರೋಬ್ಬರು ಮುಂದಾಗುವುದಿಲ್ಲ.

ಪೊಲೀಸ್ ಅಧಿಕಾರಿಗಳಿಗೆ ಕಿರುಕುಳಕ್ಕೆ ಯಾವುದೇ ರಕ್ಷಣೆಯಿಲ್ಲ, ಹಾಗೆಯೇ ಅಂಥವರಿಗೆ ಮಾರ್ಗದರ್ಶನ ನೀಡುವ ವ್ಯವಸ್ಥೆಯೂ ಇಲ್ಲ,  ಈ ಒಂದು ಪರಿಸ್ಥಿತಿ ಕಿರಿಯ ಅಧಿಕಾರಿಗಳಿಗೆ ಸಂಕಷ್ಟ ತಂದೊಡ್ಡುತ್ತಿದೆ ಎಂದು ಅವರು ಹೇಳಿದ್ದಾರೆ.

ನಿವೃತ್ತ ಡಿಜಿಪಿ ಎಂ ಡಿ ಸಿಂಗ್ ಪೊಲೀಸ್ ಇಲಾಖೆಗೆ ಅಭ್ಯರ್ಥಿಗಳನ್ನು ಸೇರಿಸಿಕೊಳ್ಳುವಾಗ ಅವರ ಮಾನಸಿಕ ಸ್ಥಿತಿಯ ಬಗ್ಗೆ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದರು. ಆದರೆ ಈಗ ನಡೆಯುತ್ತಿರುವ ನೇಮಕಾತಿ ವೇಳೆ ಕೇವಲ ದೈಹಿಕ ಪರೀಕ್ಷೆ ಮಾತ್ರ ಮಾಡಲಾಗುತ್ತದೆ. ಜೊತೆಗೆ ತರಬೇತಿ ವೇಳೆಯೂ ಸಹ ಅವರ ಮಾನಸಿಕ ಸ್ಥಿತಿಗತಿಯ ಬಗ್ಗೆ ಪರೀಕ್ಷೆ ನಡೆಸಬೇಕು ಎಂದು ಗೋಪಾಲ್ ಬಿ ಹೊಸೂರ್ ಹೇಳಿದ್ದಾರೆ. ಮಾನಸಿಕ ಖಿನ್ನತೆಗೆ ಒಳಗಾಗುವ ಅಧಿಕಾರಿಗಳಿಗೆ ಸೂಕ್ತ ಕೌನ್ಸೆಲಿಂಗ್ ಅವಶ್ಯಕತೆಯಿದೆ ಎಂದು ಹಲವರ ಅಭಿಪ್ರಾಯವಾಗಿದೆ.

ಕೌನ್ಸೆಲಿಂಗ್ ಮಾಡುವ ವ್ಯವಸ್ಥೆ ನಮ್ಮ ಆಡಳಿತದಲ್ಲಿ ಇದ್ದಿದ್ದರೇ, ಡಿ.ಕೆ ರವಿ, ಗಣಪತಿ ಅವರನ್ನು ರಕ್ಷಣೆ ಮಾಡಬಹುದಿತ್ತು ಎಂದು ಮಾಜಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ. ಜೈರಾಜ್ ಅಭಿಪ್ರಾಯ ಪಟ್ಟಿದ್ದಾರೆ.ಕಿರಿಯ ಅಧಿಕಾರಿಗಳಿಗೆ ಕೌನ್ಸೆಲಿಂಗ್ ಮತ್ತು ಮಾರ್ಗದರ್ಶನ ನೀಡುವುದರಿಂದ ಅವರಲ್ಲಿ ಧನಾತ್ಮಕ ಭಾವನೆಗಳನ್ನು ಹೆಚ್ಚಿಸಬಹುದು, ನಮ್ಮ ತರಬೇತಿ ಅವಧಿಯಲ್ಲಿ ಆ ರೀತಿಯ ವ್ಯವಸ್ಥೆ ಇತ್ತು ಎಂದು ಅವರು ತಿಳಿಸಿದ್ದಾರೆ.

ವ್ಯವಸ್ಥೆ ತುಂಬಾ ಭಯಂಕರವಾಗಿದ್ದು, ಮುಖ್ಯಮಂತ್ರಿ ಹಾಗೂ ಗೃಹಸಚಿವರು ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಇಂಥ ಅನಾಹುತಗಳನ್ನು ತಪ್ಪಿಸಬೇಕು ಎಂದು ನಿವೃತ್ತ ಡಿಜಿಪಿ ಸಿ. ದಿನಕರ್ ಹೇಳಿದ್ದಾರೆ.

ಸಾಮಾಜಿಕ ಕಳಂಕದ ಭಯದಲ್ಲಿ ಅಧಿಕಾರಿಗಳು ತಮ್ಮ ಸಮಸ್ಯೆಗಳನ್ನ ಮುಚ್ಚಿಡುತ್ತಾರೆ ಎಂದು ಎಡಿಜಿಪಿ ಪ್ರವೀಣ್ ಸೂದ್ ಹೇಳಿದ್ದಾರೆ.

ಅಧಿಕಾರಿಗಳ ವರ್ತನೆಯಲ್ಲಿ ಏನಾದರೂ ವ್ಯತ್ಯಾಸ ಕಂಡು ಬಂದರೇ ಅವರನ್ನು ನಾವು ತಜ್ಞರ ಬಳಿ ಹೋಗುವಂತೆ ಶಿಫಾರಸ್ಸು ಮಾಡುತ್ತೇವೆ. ಆದರೆ ಸಾಮಾಜಿಕ ವಾಗಿ ತಮ್ಮ ಸ್ಥಾನ ಮಾನ ಹಾಳಾಗುತ್ತದೆ ಎನ್ನು ಹಿಂಜರಿಕೆಯಿಂದಾಗಿ ತಮಗಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಎಲ್ಲಿಯೂ ಹೇಳಿಕೊಳ್ಳುವುದಿಲ್ಲ. ಇದನ್ನೆಲ್ಲಾ ಬಿಟ್ಟು ತಮಗಿರುವ ಸಮಸ್ಯೆಗಳ ಬಗ್ಗೆ ಹೇಳಿಕೊಳ್ಳಲು ಪೊಲೀಸರು ಮುಂದೆ ಬರಬೇಕು ಎಂದು ಪ್ರವೀಣ್ ಸೂದ್ ಸಲಹೆ ನೀಡಿದ್ದಾರೆ.

ನಗರದಲ್ಲಿ ಒಂದು ಪೊಲೀಸ್ ಠಾಣೆಯಿಂದ ಮತ್ತೊಂದು ಠಾಣೆಗೆ ವರ್ಗಾವಣೆ ಮಾಡಿಕೊಳ್ಳಲು 15 ಲಕ್ಷ ರು. ಲಂಚ ನೀಡಬೇಕು.

ಕೆಲ ದಿನಗಳ ಹಿಂದೆ ನಾನು ನಗರದ ಪೊಲೀಸ್ ಠಾಣೆಯೊಂದಕ್ಕೆ ವರ್ಗಾವಣೆಯಾದೆ, ನಾನು ಹೋದ ಆ ಠಾಣೆಯಲ್ಲಿ ಪೋಸ್ಟಿಂಗ್ ಗಾಗಿ  ಈ ಹಿಂದೆ ನಾಲ್ಕು ಸಬ್ ಇನ್ಸ್ ಪೆಕ್ಟರ್ ಗಳು ಪ್ರಯತ್ನಿಸಿದ್ದರು.

ಆ ನಾಲ್ಕು ಜನ ಸಬ್  ಇನ್ಸ್ ಪೆಕ್ಟರ್ ಗಳಿಗೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು  ಪ್ರತಿಯೊಬ್ಬರಿಂದ 15 ಲಕ್ಷ ರೂ ಲಂಚ ಪಡೆದು ಶಿಫಾರಸ್ಸು ಪತ್ರ ನೀಡಿದ್ದರು ಎಂದು ಸಬ್ ಇನ್ಸ್ ಪೆಕ್ಟರ್ ಒಬ್ಬರು ತಿಳಿಸಿದ್ದಾರೆ.

ವರ್ಗಾವಣೆಗಾಗಿ ಹಿರಿಯ ಅಧಿಕಾರಿಗಳು ಶಿಫಾರಸು ಪತ್ರ  ನೀಡುತ್ತಾರೆ, ಅದಕ್ಕಾಗಿ ಅವರು ಹಣ ಪಡೆಯುತ್ತಾರೆ, ವರ್ಗಾವಣೆ ಮತ್ತು ಪೋಸ್ಟಿಂಗ್ ಗಳಲ್ಲಿ ಈ ಹಿರಿಯ ಅಧಿಕಾರಿಗಳು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಅವರು ಹೇಳಿದ್ದಾರೆ.

SCROLL FOR NEXT