ಉತ್ತರ ಕನ್ನಡ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಮಾಸ್ತಿಕಟ್ಟಾ ಗ್ರಾಮದ ಬಳಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಪಾದಾಚಾರಿಗಳ ಮೇಲೆ ಲಾರಿ ಹರಿದು ಮೂವರು ಮೃತಪಟ್ಟಿರುವ ದಾರುಣ ಘಟನೆ ಸೋಮವಾರ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟವರು ಹುಬ್ಬಳ್ಳಿ ಮೂಲದ ಸಿದ್ದವ್ವ ಹಾಲಪ್ಪ ಗಾಣಿಗೇರ್ (55), ಕಲಗಟಗಿ ತಾಲೂಕಿನ ಉಗ್ಗಿನಕೇರಿ ಮೂಲದ ಕಲ್ಲಪ್ಪ (45) ಹಾಗೂ ಚನ್ನಪ್ಪ (35) ಎಂದು ಗುರುತಿಸಲಾಗಿದೆ.
ಮಾಸ್ತಿಕಟ್ಟೆ ಬಳಿ ರಸ್ತೆ ದಾಟುತ್ತಿರುವಾಗ ಈ ಘಟನೆ ಸಂಭವಿಸಿದ್ದು, ಅಪಘಾತದ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದಾನೆ.
ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಲಾರಿ ಚಾಲಕನ ಶೋಧ ನಡೆಸುತ್ತಿದ್ದಾರೆ.