ವಿಜಯಾಪುರ: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯ ಹಿನ್ನೆಲೆಯಲ್ಲಿ ಆಲಮಟ್ಟಿ ಜಲಾಶಯದಲ್ಲಿ ನೀರಿನ ಮಟ್ಟ ಸುಮಾರು 503 ಅಡಿ ನಷ್ಟು ಏರಿಕೆಯಾಗಿದೆ.
ಜಲಾಶಯದಲ್ಲಿ 1,27, 465 ಕ್ಯೂಸೆಕ್ಸ್ ನಷ್ಟು ಒಳಹರಿವು ಹೆಚ್ಚಿದ್ದು, ಹೊರ ಹರಿವು ಸಂಪೂರ್ಣವಾಗಿ ನಿಲ್ಲಿಸಲಾಗಿದೆ ಎಂದು ಆಲಮಟ್ಟಿ ಜಲಾಯಶದ ಅಧಿಕಾರಿಗಳು ತಿಳಿಸಿದ್ದಾರೆ.
ಆಲಮಟ್ಟಿ ಜಲಾಶಯದ ನೀರಿನ ಮಟ್ಟ ಏರಿಕೆ ಮಹಾರಾಷ್ಟ್ರದ ಸಹ್ಯಾದ್ರಿ ಪ್ರದೇಶದಲ್ಲಿ ಉತ್ತಮ ಮಳೆಯ ಮೇಲೆ ಅವಲಂಬಿತವಾಗಿದೆ. ಮಹಾರಾಷ್ಟ್ರದ ಮಿರಜ್ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ನೀರಿನ ಒಳಹರಿವು ಹೆಚ್ಚಿ ಜಲಾಶಯ ಮಟ್ಟ 508 ಅಡಿ ತಲುಪಿದೆ.
ಕೃಷ್ಣಾ ನದಿ ಮಿರಜ್ ಪಕ್ಕದ ರಾಜ್ ಪುರ ಅಣೆಕಟ್ಟಿಗೆ ಪ್ರವೇಶಿಸಿದೆ. ಈ ಅಣೆಕಟ್ಟಿನಿಂದ ಸುಮಾರು 1.5 ಲಕ್ಷ ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡಲಾಗಿದೆ.
ಆಲಮಟ್ಟಿ ಜಲಾಶಯ 519.6 ಮೀಟರ್ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. ಕೋಯ್ನಾ,ವಾರಾನಾ ಮತ್ತು ಕೃಷ್ಣ, ದೂದ್ ಗಂಗಾ, ರಾಧಾನಗರಿ, ಕಸರಿ, ತುಳಸಿ, ಮತ್ತು ಪಾಥೋಗಾಮ್ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಕೊಲ್ಲಾಪುರ ಬಳಿಯಿರುವ ರಾಜಾರಾಂ ಅಣೆಕಟ್ಟಿನಿಂದ 60 ಸಾವಿರ ಕ್ಯೂಸೆಕ್ಸ್ ನೀರನ್ನು ಕರ್ನಾಟಕ ರಾಜ್ಯಕ್ಕೆ ಬಿಡಲಾಗಿದೆ ಎಂದು ಮಹಾರಾಷ್ಟ್ರ ಅಧಿಕಾರಿಗಳು ತಿಳಿಸಿದ್ದಾರೆ.