ಡಿವೈಎಸ್ಪಿ ಗಣಪತಿ 
ರಾಜ್ಯ

ಭಯದಿಂದ ಮಡಿಕೇರಿ ಪೊಲೀಸರು ಎಫ್ ಐ ಆರ್ ದಾಖಲಿಸಿಲ್ಲ: ಸಿಐಡಿ ಅಧಿಕಾರಿಗಳು

ಸರ್ಕಾರ ಅಥವಾ ರಾಜಕಾರಣಿಗಳ ಸಿಟ್ಟಿಗೆ ಗುರಿಯಾಗಬಹುದೆಂದು ಹೆದರಿ ಮಡಿಕೇರಿ ಪೊಲೀಸರು ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ಎಫ್ ಐ ಆರ್ ..

ಬೆಂಗಳೂರು: ಸರ್ಕಾರ ಅಥವಾ ರಾಜಕಾರಣಿಗಳ ಸಿಟ್ಟಿಗೆ ಗುರಿಯಾಗಬಹುದೆಂದು ಹೆದರಿ ಮಡಿಕೇರಿ ಪೊಲೀಸರು ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ಎಫ್ ಐ ಆರ್ ದಾಖಲಿಸಿಲ್ಲ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.

ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿ ಅಧಿಕಾರಿಗಳು ಕೈಗೊಂಡಿದ್ದರು. ಆದರೆ ಸರ್ಕಾರ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಿದೆ.

ಕೇಸು ದಾಖಲಿಸಿಕೊಂಡರೇ ಹಿರಿಯ ಅಧಿಕಾರಿಗಳ ಕೋಪಕ್ಕೆ ಅಥ್ವಾ ರಾಜಕಾರಣಿಗಳ ಸಿಟ್ಟಿಗೆ ಕಾರಣವಾಗಬಹುದೆಂಬ ಉದ್ದೇಶದಿಂದ ಸ್ಥಳೀಯ ಪೊಲೀಸರು ಎಫ್ ಐಆರ್ ದಾಖಲಿಸಿಲ್ಲ. ಗಣಪತಿ ಸ್ಥಳೀಯ ಲಾಡ್ಜ್ ವೊಂದರಲ್ಲಿ ಆತ್ಮಹತ್ಯೆಗೆ ಶರಣಾಗಿರುವುದರ ಕುರಿತು ಮಡಿಕೇರಿ ಪೊಲೀಸರು ಮಾಹಿತಿ ಸಂಗ್ರಹಿಸಿದ್ದರು. ಪ್ರಕರಣದ ತೀವ್ರತೆ ಅರಿತ ಪೊಲೀಸರು ತಮ್ಮ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಮೊದಲು ಅವರಿಗೆ ಮಾಹಿತಿ ನೀಡಿ, ಅವರ ಸೂಚನೆಗಾಗಿ ಕಾಯುತ್ತಿದ್ದರು. ಹಿರಿಯ ಅಧಿಕಾರಿಗಳು ಆದೇಶ ನೀಡಿದ ನಂತರವಷ್ಟೇ ಅವರು ಸಿಲೀಂಗ್ ಫ್ಯಾನ್ ನಿಂದ ಗಣಪತಿ ಅವರ ಮೃತ ದೇಹವನ್ನು ಕೆಳಗಿಳಿಸಿದ್ದು, ಅದುವರೆಗೂ, ಗಣಪತಿ ಆತ್ಮಹತ್ಯೆ ಮಾಡಿಕೊಂಡಿದ್ದ ಕೊಠಡಿಯ ಹೊರಭಾಗದಲ್ಲೇ ಪೊಲೀಸರು ಕಾಯುತ್ತಿದ್ದರು ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.

ಗಣಪತಿ ತಂದೆಗೆ ತಮ್ಮ ಪುತ್ರ ಸಾಯುವ ಮುನ್ನ ಖಾಸಗಿ ಚಾನೆಲ್ ವೊಂದಕ್ಕೆ ಸಂದರ್ಶನ ನೀಡಿದ್ದಾರೆಂದು ತಿಳಿಸಿದಿರಲಿಲ್ಲ. ಸಾವಿಗೂ ಮುನ್ನ ಗಣಪತಿ ತಮ್ಮ ಸಹೋದರ ಹಾಗೂ ರಾಮನಗರ ಡಿವೈಎಸ್ ಪಿ ತಮ್ಮಯ್ಯ ಅವರಿಗೆ ತಾವು ಸಾಯವು ಹೊರಟಿರುವುದಾಗಿ ಮೆಸೇಜ್ ಕಳಿಸಿದ್ದರು, ಆದರೆ ಆ ಕ್ಷಣದಲ್ಲಿ ತಮ್ಮಯ್ಯ ಆ ಮೆಸೇಜ್ ನೋಡಿರಲಿಲ್ಲ. ಅಷ್ಟರಲ್ಲಾಗಲೇ ಗಣಪತಿ ಸಾವನಪ್ಪಿದ್ದರು ಎಂದು ಮೂಲಗಳು ತಿಳಿಸಿವೆ.

ಸಾವಿಗೂ ಮುನ್ನ ಸ್ಥಳೀಯ ಚಾನೆಲ್ ಗಣಪತಿ  ಅವರ ಸಂದರ್ಶನವನ್ನು ಪ್ರಸಾರ ಮಾಡಿತ್ತು, ಆದರೆ ಯಾರೋಬ್ಬರು ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ, ಹಾಗೂ ಪ್ರತಿಕ್ರಿಯೆ ನೀಡಿರಲಿಲ್ಲ ಎಂದು ಸಿಐಡಿ ಮೂಲಗಳು ತಿಳಿಸಿವೆ.

ಪ್ರಕರಣದ ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು ತನಿಖೆಯ ವಿಷಯಗಳನ್ನು ಮೌಖಿಕವಾಗಿ ಡಿಜಿಪಿ ಅವರಿಗೆ ತಿಳಿಸಿದ್ದರು. ತನಿಖೆಯ ಯಾವುದೇ ಮಾಹಿತಿಯ ವರದಿಯನ್ನು ಇದುವೆರಗೂ ಯಾರಿಗೂ ನೀಡಿಲ್ಲ. ನ್ಯಾಯಾಧೀಶರು ಕೇಳುವವರೆಗೂ ನಾವು ವರದಿಯನ್ನೂ ಎಲ್ಲಿಯೂ. ಯಾರಿಗೂ ಸಲ್ಲಿಸುವಂತಿಲ್ಲ, ವರದಿಯನ್ನು ಎಲ್ಲಿಯೂ ಬಹಿರಂಗ ಪಡಿಸುವಂತಿಲ್ಲ, ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕಾಗುತ್ತದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?