ರಾಜ್ಯ

ನ್ಯಾಯಮೂರ್ತಿಗೂ ಲಂಚದ ಆಮಿಷ: ಲೋಕಾಯುಕ್ತ ನ್ಯಾಯಾಲಯದಲ್ಲಿ ದೂರು ದಾಖಲು

Manjula VN

ಬೆಂಗಳೂರು: ಕರ್ನಾಟಕ ಮುಖ್ಯ ನ್ಯಾಯಮೂರ್ತಿ ಸುಬ್ರೋ ಕಮಲ್ ಮುಖರ್ಜಿಯವರಿಗೆ ನೀಡಲಾಗಿದೆ ಎಂಬ ಲಂಚದ ಆಮಿಷ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರ್'ಟಿಐ ಕಾರ್ಯಕರ್ತರು ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರೊಂದನ್ನು ಶನಿವಾರ ದಾಖಲಿಸಿದ್ದಾರೆ.

ಎಸ್.ಭಾಸ್ಕರನ್ ಮತ್ತು ಜಯಕುಮಾರ್ ಹಿರೇಮಠ್ ಎಂಬುವವರು ದೂರು ದಾಖಲಿಸಿದ್ದು, ಆಗಸ್ಟ್ 2 ರಂದು ಈ ಕುರಿತ ವಿಚಾರಣೆ ನಡೆಸಲಿದೆ ಎಂದು ತಿಳಿದುಬಂದಿದೆ.

ದುರಿನಲ್ಲಿ ಆರೋಪಿಗಳು ದುರುದ್ದೇಶದಿಂದ ಮುಖ್ಯ ನ್ಯಾಯಮೂರ್ತಿಗಳಿಗೆ ಲಂಚದ ಆಮಿಷವನ್ನು ಒಡ್ಡಿದ್ದು, ಈ ರೀತಿಯ ನಡವಳಿಕೆಗಳು ಶಿಕ್ಷೆಗೆ ಕಾರಣವಾದದ್ದು ಮತ್ತು ಆರೋಪಿಗಳ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿಯಲ್ಲಿ ಕ್ರಮಕೈಗೊಳ್ಳಬೇಕೆಂದು ಹೇಳಲಾಗಿದೆ.

ಭೂಮಿ ವಿವಾದ ಪ್ರಕರಣ ಸಂಬಂಧ ತಮ್ಮ ಪರವಾಗಿ ತೀರ್ಪು ನೀಡವಂತೆ ಕೋರಿ ಕೆಲವು ನನಗೆ ಲಂಚದ ಆಮಿಷವನ್ನು ಒಡ್ಡಿದ್ದರು ಎಂದು ಕರ್ನಾಟಕ ಹೈ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸುಬ್ರೋ ಕಮಲ್ ಮುಖರ್ಜಿಯವರು ಈ ಹಿಂದೆ ಹೇಳಿಕೊಂಡಿದ್ದರು. ಕಂದಾಯ ಇಲಾಖೆ ಮತ್ತು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ವಿರುದ್ಧ ಉಮ್ರಾ ಡೆವಲಪರ್ಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಂತರ ಕೋರ್ಟ್ ಹಾಲ್ ನಲ್ಲಿ ಸುಬ್ರೋ ಮುಖರ್ಜಿಯವರು ಈ ವಿಚಾರವನ್ನು ಬಹಿರಂಗ ಪಡಿಸಿದ್ದರು.

SCROLL FOR NEXT