ರಾಜ್ಯ

ಮೈಸೂರು ರಸ್ತೆ-ಬೈಯಪ್ಪನಹಳ್ಳಿ ಮೆಟ್ರೋ ರೈಲು 25 ನಿಮಿಷ ತಡ

Sumana Upadhyaya
ಬೆಂಗಳೂರು: ತಾಂತ್ರಿಕ ಕಾರಣಗಳಿಂದಾಗಿ ಇಂದು(ಗುರುವಾರ) ಬೆಳಗ್ಗೆ ಮೈಸೂರು ರಸ್ತೆಯಿಂದ ಬೈಯಪ್ಪನಹಳ್ಳಿ ನಡುವಿನ ಮೆಟ್ರೊ ರೈಲು 25 ನಿಮಿಷ ತಡವಾಗಿ ಹೊರಟಿತು.
ಮೊದಲ ರೈಲು ಬೆಳಗಿನ ಜಾವ 6 ಗಂಟೆಗೆ ಹೊರಡಬೇಕಾಗಿದ್ದು 6.25ಕ್ಕೆ ಹೊರಟಿತು. 
ನಿನ್ನೆ ರಾತ್ರಿ ಈ ಮಾರ್ಗದಲ್ಲಿ ಕೊನೆಯ ರೈಲು ಹಠಾತ್ತಾಗಿ 10.15ಕ್ಕೆ ಮಧ್ಯದಲ್ಲಿಯೇ ನಿಂತಿತ್ತು. ತಾಂತ್ರಿಕ ದೋಷದಿಂದ ಹೀಗಾಯಿತು ಎಂದು ಮೆಟ್ರೋದ ಅಧಿಕಾರಿಗಳು ತಿಳಿಸಿದ್ದಾರೆ.
SCROLL FOR NEXT