ರಾಜ್ಯ

ಎತ್ತಿನಹೊಳೆ ಯೋಜನೆ ಕಾರ್ಯವನ್ನು ಸರ್ಕಾರ ನಿಲ್ಲಿಸಬೇಕು: ತಜ್ಞರು

Manjula VN

ಮಂಗಳೂರು: ಶಾಶ್ವತ ನೀರಾವರಿಗಾಗಿ ರೂಪಿಸಲಾಗುತ್ತಿರುವ ಎತ್ತಿನಹೊಳೆ ಯೋಜನೆ ಕಾರ್ಯವನ್ನು ರಾಜ್ಯ ಸರ್ಕಾರ ಕೂಡಲೇ ಸ್ಥಗಿತಗೊಳಿಸಬೇಕೆಂದು ಎನ್ಐಟಿಕೆ ನಿವೃತ್ತ ಪ್ರಾಧ್ಯಾಪಕ ಡಾ.ಎಸ್.ಜಿ. ಮಯ್ಯ ಅವರು ಮಂಗಳವಾರ ಹೇಳಿದ್ದಾರೆ.

ನೇತ್ರಾವತಿ ರಕ್ಷಣಾ ಸಂಯುಕ್ತ ಸಮತಿ ವತಿಯಿಂದ ಎತ್ತಿನಹೊಳೆ ಯೋಜನೆಯಿಂದ ಕರಾವಳಿ ಜಿಲ್ಲೆಗೆ ಆಗುವ ಹಾನಿ ಕುರಿತು ಜನಪ್ರತಿನಿಧಿಗಳಿಗೆ ವಿವರಣೆ ನೀಡುವ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಎತ್ತಿನಹೊಳೆ ಯೋಜನೆಯಲ್ಲಿರುವ ಲೋಪದೋಷಗಳನ್ನು ವಿವರಿಸಿದರು.

ಎತ್ತಿನಹೊಳೆ ಯೋಜನೆಯಿಂದ ಪಶ್ಚಿಮಘಟ್ಟಕ್ಕೆ ಹಾನಿ ಮಾತ್ರವಲ್ಲ. ಘಟ್ಟದ ಮೇಲಭಾಗದತ್ತ ಹರಿಯುವ ನದಿಗಳಿಗೂ ಅಪಾಯವಿದೆ. ಯೋಜನೆ ಜಾರಿಗೆ ಬಂದಿದ್ದೇ ಆದರೆ, ಉತ್ತರಾಖಾಂಡ್ ಮತ್ತು ಕಾಶ್ಮೀರದಲ್ಲಿ ಉಂಟಾದ ಪರಿಸ್ಥಿತಿ ಪಶ್ಚಿಮಘಟ್ಟದಲ್ಲೂ ಸಂಭವಿಸುತ್ತದೆ ಎಂದು ಹೇಳಿದ್ದಾರೆ. ಅಲ್ಲದೆ, ಯೋಜನೆ ಕುರಿತಂತೆ ಸಲ್ಲಿಸಲಾಗಿರುವ ಸಂಪೂರ್ಣ ವರದಿಯಲ್ಲಿ ತಪ್ಪು ಲೆಕ್ಕಾಚಾರ ಮಾಡಲಾಗಿದ್ದು, ವರದಿಯಲ್ಲಿ ನೂರಕ್ಕೂ ಹೆಚ್ಚು ತಪ್ಪುಗಳು ಎದ್ದುಕಾಣುತ್ತಿವೆ ಎಂದು ಆರೋಪಿಸಿದ್ದಾರೆ.

SCROLL FOR NEXT