ಶ್ರೀನಿವಾಸ ಪ್ರಸಾದ್ ನಿವಾಸಕ್ಕೆ ಭೇಟಿ ಮಾತುಕತೆ ನಡೆಸುತ್ತಿರುವ ಕ್ವಾಮರುಲ್ ಇಸ್ಲಾಂ, ಎಸ್.ಟಿ.ಸೋಮಶೇಖರ್ ಹಾಗೂ ಮಾಲಕ ರೆಡ್ಡಿ. 
ರಾಜ್ಯ

ಸಿಎಂ ಸಿದ್ದರಾಮಯ್ಯ ವಿರುದ್ಧ ಸಂಘಟಿತರಾದ ಅತೃಪ್ತ ಶಾಸಕರು

ಸಂಪುಟ ಪುನಾರಚನೆ ಬಳಿಕ ಶಾಸಕರ ಅಸಮಾಧಾನ ಬುಧವಾರ ವಿಭಿನ್ನ ಸ್ಪರೂಪ ತಾಳಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಅತೃಪ್ತ ಶಾಸಕರು ಸಂಘಟಿತರಾಗಿದ್ದಾರೆಂದು...

ಬೆಂಗಳೂರು: ಸಂಪುಟ ಪುನಾರಚನೆ ಬಳಿಕ ಶಾಸಕರ ಅಸಮಾಧಾನ ಬುಧವಾರ ವಿಭಿನ್ನ ಸ್ಪರೂಪ ತಾಳಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಅತೃಪ್ತ ಶಾಸಕರು ಸಂಘಟಿತರಾಗಿದ್ದಾರೆಂದು ತಿಳಿದುಬಂದಿದೆ.

ಸಂಪುಟದಿಂದ ಕೈಬಿಟ್ಟ ಕಾರಣ ಅಸಮಾಧಾನಗೊಂಡಿದ್ದ ಶ್ರೀನಿವಾಸ ಪ್ರಸಾದ್ ಮತ್ತು ಅಂಬರೀಷ್ ಅವರು ಒಂದು ಗೂಡಿ ಸಿದ್ದರಾಮಯ್ಯ ವಿರುದ್ಧವಾಗಿದ್ದರು. ಇದೀಗ ಅವರ ಜೊತೆಗೆ ಮಾಜಿ ಸಚಿವ  ಖಮರುಲ್ ಇಸ್ಲಾಂ, ಮಾಲಕ ರೆಡ್ಡಿ, ಎಸ್.ಟಿ ಸೋಮಶೇಖರ್ ಅವರು ಕೂಡ ಸೇರಿಕೊಂಡಿದ್ದು, ನಿನ್ನೆಯಷ್ಟೇ ಖಮರುಲ್ ಇಸ್ಲಾಂ, ಮಾಲಕ ರೆಡ್ಡಿ ಹಾಗೂ ಎಸ್.ಟಿ ಸೋಮಶೇಖರ್ ಅವರು ಪ್ರಸಾದ್ ಅವರನ್ನು ಭೇಟಿ ಮಾಡಿ ಮುಂದಿನ ನಿರ್ಧಾರದ ಕುರಿತಂತೆ ಚರ್ಚೆ ನಡೆಸಿದ್ದಾರೆ. ನಂತರ ಈ ಎಲ್ಲಾ ನಾಯಕರು ಅಂಬರೀಷ್ ಅವರನ್ನು ಭೇಟಿ ಮಾಡಿದ್ದು, ಮಾತುಕತೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ.

ಭೇಟಿ ನಂತರ ಮಾತನಾಡಿರುವ ನಾಯಕರು, ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಇಬ್ಬರೂ ಸೇರಿ ಪಕ್ಷದ ಹೈ ಕಮಾಂಡ್ ನ ದಾರಿ ತಪ್ಪಿಸುತ್ತಿದ್ದಾರೆ. ಇದರಿಂದಾಗಿ ಸಂಪುಟದ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.

ಅಂಬರೀಷ್ ಜೊತೆಗಿನ ಮಾತುಕತೆ ಬಳಿಕ ಪ್ರತಿಕ್ರಿಯೆ ನೀಡಿರುವ ಪ್ರಸಾದ್ ಅವರು, ಭೇಟಿ ವೇಳೆ ಕಾಂಗ್ರೆಸ್ ಪಕ್ಷವನ್ನು ಉಳಿಸಲು ಹಾಗೂ ಜನರಿಗೆ ಉತ್ತಮ ಆಡಳಿತ ನೀಡುವ ದಾರಿ ಕುರಿತಂತೆ ಮಾತಿಕತೆ ನಡೆಸಲಾಯಿತು. ಸಿದ್ದರಾಮಯ್ಯ ಅವರ ವೈಯಕ್ತಿಕ ಆಸಕ್ತಿಗಳು ಸಂಪುಟ ಪುನಾರಚನೆ ಮೇಲೆ ಪರಿಣಾಮ ಬೀರಿದೆ. ಸಂಪುಟದಿಂದ ನಮ್ಮನ್ನು ಕೈಬಿಟ್ಟ ನಂತರ ಕನಿಷ್ಟ ಪಕ್ಷ ನಮ್ಮೊಂದಿಗೆ ಸಿದ್ದರಾಮಯ್ಯ ಅವರು ಮಾತುಕತೆಯನ್ನು ನಡೆಸಿಲ್ಲ. ಪಕ್ಷವನ್ನು ಉಳಿಸಲು ನಾವು ಏನು ಬೇಕಾದರೂ ಮಾಡಲು ಸಿದ್ಧರಿದ್ದೇವೆ. ವ್ಯಕ್ತಿಗಿಂತ ನಮಗೆ ಪಕ್ಷ ಮುಖ್ಯ ಎಂದು ಹೇಳಿದ್ದಾರೆ.

ಚರ್ಚೆ ವೇಳೆ ಪಕ್ಷದ ನಾಯಕತ್ವ ಬದಲಾವಣೆ ಹಾಗೂ ಮುಂಬರುವ 2018 ವಿಧಾನಸಭಾ ಚುನಾವಣೆ ಕುರಿತಂತೆ ಮಾತುಕತೆ ನಡೆಸಲಾಗಿದೆ. ಸಿದ್ದರಾಮಯ್ಯ ಅವರನ್ನು ಯಾವುದೇ ಕಾರಣಕ್ಕೂ ಭೇಟಿ ಮಾಡಲ್ಲ ಎಂದು ಅಂಬರೀಷ್ ಅವರು ಸ್ಪಷ್ಟಪಡಿಸಿದ್ದಾರೆಂದು ಹೇಳಿದ್ದಾರೆ.

ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ: ಶರೀಫ್
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ಜಾಫರ್ ಶರೀಫ್ ಅವರು ಕೂಡ ತಿರುಗಿಬಿದ್ದಿದ್ದು, ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವಂತೆ ಆಗ್ರಹಿಸಿದ್ದಾರೆ.

ನಿನ್ನೆಯಷ್ಟೇ ಅಸಮಾಧಾನಗೊಂಡಿರುವ ಅಂಬರೀಷ್ ಅವರನ್ನು ಭೇಟಿ ಮಾಡಿ ನಂತರ ಮಾತನಾಡಿರುವ ಅವರು, ಪ್ರಸ್ತುತ ಬದಲಾಗಿರುವ ಸಂಪುಟ ಪುನಾರಚನೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ನಶಿಸಿಹೋಗುವಂತೆ ಮಾಡುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಉಳಿಸಿಕೊಳ್ಳಬೇಕಾದರೆ ನಾಯಕತ್ವದ ಬದಲಾವಣೆ ಅಗತ್ಯವಿದೆ. ಈ ಬಗ್ಗೆ ಹೈ ಕಮಾಂಡ್ ಗಮನಕ್ಕೆ ತರುತ್ತೇನೆಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!

ಸರ್ಕಾರ ಕೇವಲ ಪ್ರೇಕ್ಷಕನಾಗಿ ಉಳಿಯಲು ಸಾಧ್ಯವಿಲ್ಲ: ದೆಹಲಿ ದಮನಕಾರಿ ಕ್ರಮ ಬೆಂಬಲಿಸಿದ ಸಚಿವ ಪ್ರಹ್ಲಾದ್ ಜೋಶಿ