ರಾಜ್ಯ

ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಜಲಮಂಡಳಿ

Manjula VN

ಬೆಂಗಳೂರು: ಸಿಲಿಕಾನ್ ಸಿಟಿಯನ್ನು ಕೇಂದ್ರ ಸರ್ಕಾರ ಸ್ಮಾರ್ಟ್ ಸಿಟಿ ಪಟ್ಟಿಗೆ ಸೇರಿಸಲು ಒಂದೆಡೆ ಚಿಂತನೆ ನಡೆಸುತ್ತಿದ್ದರೆ, ಇತ್ತ ನಗರದಲ್ಲಿರುವ ಅರ್ಧದಷ್ಟು ಮನೆಗಳಿಗೆ ಸರಿಯಾದ ರೀತಿಯಲ್ಲಿ ಕುಡಿಯುವ ನೀರೇ ಪೂರೈಕೆಯಾಗುತ್ತಿಲ್ಲ ಎಂಬ ಅಂಶವನ್ನು ಅಧ್ಯಾಯನವೊಂದು ಹೊರಹಾಕಿದೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಇದೇ ಕಾರಣಕ್ಕೆ ನಗರದ ಜನತೆಗೆ ಸರಿಯಾದ ರೀತಿಯಲ್ಲಿ ಸೌಲಭ್ಯಗಳನ್ನು ಒದಗಸಲು ಸಾಧ್ಯವಾಗುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ.

ಒಂದು ವೇಳೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಆರ್ಥಿಕ ಸಂಕಷ್ಟ ಸುಧಾರಿಸಿದ್ದೇ ಆದರೆ, ನೀರು ಸರಬರಾಜು ಹಾಗೂ ಒಳಚರಂಡಿ ವ್ಯವಸ್ಥೆಗಳನ್ನು ಸರಿಪಡಿಸಿ ಜನತೆಯ ಸಮಸ್ಯೆಯನ್ನು ಹೋಗಲಾಡಿಸಲಾಗುತ್ತದೆ. ಹಾಗೂ ಪೈಪ್ ಗಳ ಅಳವಡಿಕೆ ಕುರಿತಂತಿರುವ ಕನಸು ನನಸಾಗುತ್ತದೆ ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ.

ನಾಗರೀಕ ಮತ್ತು ಪ್ರಜಾಪ್ರಭುತ್ವಕ್ಕಾಗಿ ಜನಾಗ್ರಹ ಕೇಂದ್ರ ನಡೆಸಿದ ಅಧ್ಯಯನದಲ್ಲಿ ಈ ಅಂಶ ಬೆಳಕಿಗೆ ಬಂದಿದ್ದು, ವರದಿಯಲ್ಲಿ ನಾಗರೀಕ ಸೇವಾ ಸಂಸ್ಥೆಗಳಾಗಿರುವ ಬಿಎಂಟಿಸಿ, ಬಿಡಿಎ ಹಾಗೂ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಗಳು ಈಗಾಲೂ ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದಾಗಿ ತಿಳಿಸಿದೆ.

ಅಧ್ಯಯನದಲ್ಲಿ ಮೂರು ನಾಗರೀಕ ಸೇವಾ ಸಂಸ್ಥೆಗಳಿಗೂ ಅಂಕಗಳನ್ನು ನೀಡಲಾಗಿದ್ದು, ಬಿಎಂಟಿಸಿಗೆ 15 ರಲ್ಲಿ 6 ಅಂಕ ನೀಡಲಾಗಿದೆ. ಬಿಡಿಎ 5, ಬಿಡಬ್ಲ್ಯೂ ಎಸ್ಎಸ್ ಬಿ 4 ಅಂಕಗಳನ್ನು ನೀಡಲಾಗಿದೆ. ಇದರಂತೆ ಮೂರು ಸಂಸ್ಥೆಗಳು ಶೇ.50 ಕ್ಕಿಂತ ಕಡಿಮೆ ಅಂಕವನ್ನು ಪಡೆದುಕೊಂಡಿದ್ದು, ಆರ್ಥಿಕ ಸಂಕಷ್ಟದಲ್ಲಿ ಸೇವೆ ಸಲ್ಲಿಸುತ್ತಿರುವುದೆ. ಇದರ ಪರಿಣಾಮದಿಂದಾಗಿ ನಗರದ ಜನತೆ ನೀರು ಸರಬರಾಜು ಹಾಗೂ ಒಳಚರಂಡಿಯಂತಹ ಸಮಸ್ಯೆಗಳನ್ನು ಎದುರಿಸುತ್ತಿದೆ. 2014-15 ಬಿಡಬ್ಲ್ಯೂ ಎಸ್ಎಶ್ ಬಿ 878 ಕೋಟಿ ಆದಾಯ ಬರಬೇಕಿದ್ದು, 340 ಕೋಟಿಯಷ್ಟೇ ಆದಾಯ ಲಭ್ಯವಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.

ಅಧ್ಯಯನ ನಡೆಸಿರುವ ಶ್ರೀಕಾಂತ್ ವಿಶ್ವನಾಥನ್ ಅವರು ಮಾತನಾಡಿ, ಸರ್ಕಾರ ಸೇವಾ ಸಂಸ್ಥೆಗಳ ಆರ್ಥಿಕ ಮುಗ್ಗಟ್ಟುಗಳ ಕುರಿತಂತೆ ಗಮನ ಹರಿಸಬೇಕಿದೆ. ನಗರದಲ್ಲಿಂದು ಬಿಡಬ್ಲ್ಯೂ ಎಸ್ಎಸ್ ಬಿ ಕೇವಲ ಶೇ.35 ರಷ್ಟು ಮನೆಗಳಿಗೆ ಮಾತ್ರ ಕೊಳವೆ ಸಂಪರ್ಕಗಳನ್ನು ನೀಡಿದೆ. ಶೇ.45 ರಷ್ಟು ಮನೆಗಳಿಗೆ ಒಳಚರಂಡಿ ಸಂಪರ್ಕಗಳನ್ನು ನೀಡಿದೆ. ಜನರಿಗೆ ಸರಿಯಾದ ರೀತಿಯಲ್ಲಿ ಸೌಲಭ್ಯ ಒದಗಿಸಿದರೆ, ಆರ್ಥಿಕ ಮುಗ್ಗಟ್ಟು ನಿಯಂತ್ರಣಕ್ಕೆ ಬರಲು ಸಹಾಯಕವಾಗುತ್ತದೆ ಎಂದು ಹೇಳಿದ್ದಾರೆ.

SCROLL FOR NEXT