ರಾಜ್ಯ

ವೈದ್ಯರಾಗಬೇಕೇ? ಕರ್ನಾಟಕ ಖಾಸಗಿ ಕಾಲೇಜುಗಳಲ್ಲಿ ಬೆಚ್ಚಿಬೀಳಿಸುವಷ್ಟು ಹೆಚ್ಚಿದ ಶುಲ್ಕ!

Guruprasad Narayana

ಬೆಂಗಳೂರು: ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣದ ಶುಲ್ಕ ಸುಮಾರು 8 ವರ್ಷಗಳಿಂದ ಸ್ಥಿರವಾಗಿತ್ತು. ಆದರೆ ಕಳೆದ ಎರಡು ವರ್ಷಗಳಲ್ಲಿ ಈ ಶುಲ್ಕ ಸುಮಾರು ಶೇಕಡಾ 50 ಹೆಚ್ಚಿರುವುದು ವೈದ್ಯಕೀಯ ಶಿಕ್ಷಣ ಆಕಾಂಕ್ಷಿ ವಿದ್ಯಾರ್ಥಿಗಳನ್ನು ಬೆಚ್ಚಿಬೀಳಿಸದೆ.

ಖಾಸಗಿ ಕಾಲೇಜುಗಳು ಮನಸೋ ಇಚ್ಛೆ ಶುಲ್ಕವನ್ನು ಏರಿಸಲು ಅವಕಾಶ ನೀಡಿ ಸರ್ಕಾರ ಜನರ ಹಿತಾಸಕ್ತಿಗಳನ್ನು ಕಾಪಾಡಲು ವಿಫಲವಾಗಿದೆ ಎಂಬುದು ವಿದ್ಯಾರ್ಥಿಗಳು ಮತ್ತು ಪೋಷಕರ ದೂರುತ್ತಾರೆ. ಇದು ಹೀಗೆಯೇ ಮುಂದುವರೆದರೆ ಮಧ್ಯಮ ವರ್ಗದ ಜನ ವೈದ್ಯಕೀಯ ಶಿಕ್ಷಣದ ಆಕಾಂಕ್ಷಿಗಳಾಗುವುದನ್ನೇ ಮರೆತುಬಿಡಬೇಕಾಗುತ್ತದೆ ಎನ್ನುತ್ತಾರೆ. ಶುಲ್ಕ ಹೆಚ್ಚುತ್ತಿದ್ದಂತೆ, ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಸೀಟುಗಳ ಸಂಖ್ಯೆಯು ಇಳಿಮುಖವಾಗುತ್ತಲೇ ಇದೆ.

ವೈದ್ಯಕೀಯ ಶಿಕ್ಷಣ ಇಲಾಖೆಯ ಮೂಲಗಳು ತಿಳಿಸುವಂತೆ "ಹಲವು ವರ್ಷಗಳಿಂದ ಇದೆ ಮೊದಲ ಬಾರಿಗೆ ಶುಲ್ಕ ಸುಮಾರು 30% ಹೆಚ್ಚಿದೆ. ಇದು ನೀಟ್ ಪರೀಕ್ಷೆಯಿಂದ ಉಂಟಾಗಿರುವ ಬಿಕ್ಕಟ್ಟು. ಅದನ್ನು ಬಳಸಿಕೊಂಡು ಖಾಸಗಿ ಕಾಲೇಜುಗಳು ಸರ್ಕಾರವನ್ನು ಬೆದರಿಸುತ್ತಿವೆ" ಎನ್ನುತ್ತವೆ ಮೂಲಗಳು.

"ಖಾಸಗಿ ಕಾಲೇಜುಗಳಲ್ಲಿ ಸರ್ಕಾರ ಮತ್ತು ವ್ಯವಸ್ಥಾಪಕರ ನಡುವೆ ಸೀಟುಗಳ ಹಂಚಿಕೆ ಇದ್ದು, ಶುಲ್ಕ ಹೆಚ್ಚಿಸದೆ ಇದ್ದರೆ ಈ ಸೀಟು ಹಂಚಿಕೆಯನ್ನು ಹಿಂತೆಗೆದುಕೊಳ್ಳುವ ಬೆದರಿಕೆಯನ್ನು ಖಾಸಗಿ ಕಾಲೇಜುಗಳು ಸರ್ಕಾರಕ್ಕೆ ಒಡ್ಡಿದ್ದರಿಂದ, ಅವರ ಬೆದರಿಕೆಗೆ ಮಣಿಯಬೇಕಾಯಿತು. ಅವರು ಕೇಳಿದಂತೆ 50% ಶುಲ್ಕ ಹೆಚ್ಚಿಸಲು ನಾವು ನಿರಾಕರಿಸಿ 30% ಹೆಚ್ಚಳಕ್ಕೆ ಕೊನೆಗೆ ಅಂತಿಮಗೊಳಿಸಬೇಕಾಯಿತು" ಎಂದು ಮೂಲಗಳು ತಿಳಿಸಿವೆ.

ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಸ್ಥೆ ಈ ಶುಲ್ಕ ಹೆಚ್ಚಳವನ್ನು ವಿರೋಧಿಸಿದ್ದು "ಶುಲ್ಕ ಹೆಚ್ಚಳವನ್ನು ಕೂಡಲೇ ಹಿಂಪಡೆಯುವಂತೆ ಆಗ್ರಹಿಸುತ್ತೇವೆ ಹಾಗೂ ಸರ್ಕಾರ ಸಿ ಇ ಟಿ ಪ್ರವೇಶ ಪರೀಕ್ಷೆಯನ್ನು ಉಳಿಸಿಕೊಳ್ಳಬೇಕು. ನೀಟ್ ಪ್ರವೇಶ ಪರೀಕ್ಷೆ ಮುಂದಿನ ವರ್ಷದಿಂದ ಜಾರಿಯಾದರೆ ಶುಲ್ಕ ವರ್ಷಕ್ಕೆ 6 ಲಕ್ಷದವರೆಗೂ ಹೆಚ್ಚುವ ಸಾಧ್ಯತೆಯಿದೆ" ಎಂದಿದೆ.

ಇದಕ್ಕೆ ಸಂಬಂಧ ಪಟ್ಟಂತೆ ಬಿಜೆಪಿ ಪಕ್ಷದ ಅಂಗ ಸಂಸ್ಥೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕೂಡ ರಾಜ್ಯವಾಪಿ ಪ್ರತಿಭಟನೆಗೆ ಮುಂದಾಗಿದೆ.

SCROLL FOR NEXT