ರಾಜ್ಯ

ಕೊಳಚೆ ನೀರು ಸಂಸ್ಕರಣ ಘಟಕ ಸ್ಥಾಪನೆಗೆ ನಿರ್ಧಾರ: ನಿಟ್ಟುಸಿರು ಬಿಟ್ಟ ಸಣ್ಣ ವಾಣಿಜ್ಯ ಕಟ್ಟಡಗಳು

Manjula VN

ಬೆಂಗಳೂರು: 2,000 ಚದರ ಮೀಟರ್ ಮತ್ತು ಅದಕ್ಕಿಂತ ಮೇಲ್ಪಟ್ಟು ನಿರ್ಮಿಸಲಾಗಿರುವ ವಾಣಿಜ್ಯ ಕಟ್ಟಡಗಳು ಕೊಳಚೆ ನೀರು ಸಂಸ್ಕರಣ ಘಟಕ ಸ್ಥಾಪಿಸುವುದು ಕಡ್ಡಾಯವೆಂದು ರಾಜ್ಯ ಪರಿಸರ ಇಲಾಖೆ ಹಾಗೂ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಶನಿವಾರ ಹೇಳಿದೆ.

ಒಳಚರಂಡೆ ಸಮಸ್ಯೆ ಕುರಿತಂತೆ ನಿನ್ನೆ ನಡೆದ ಸಭೆಯಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಈ ನಿರ್ಧಾರವನ್ನು ಕೈಗೊಂಡಿದ್ದು, ಶೀಘ್ರದಲ್ಲೇ ಈ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗುತ್ತದೆ ಎಂದು ಮುಖ್ಯ ಇಂಜಿನಿಯರ್ ಕೆಂಪರಾಮಯ್ಯ ಅವರು ಹೇಳಿದ್ದಾರೆ.

ಈ ಹಿಂದೆ ಇದ್ದ ನಿಯಮದಲ್ಲಿ 100 ಚದರ ಮೀಟರ್ ಇರುವ ವಾಣಿಜ್ಯ ಕಟ್ಟಡಗಳು ಕೊಳಚೆ ನೀರು ಸಂಸ್ಕರಣ ಘಟಕ ಸ್ಥಾಪಿಸಬೇಕೆಂದು ಹೇಳಲಾಗಿತ್ತು. ಇದೀಗ ಈ ನಿಯಮವನ್ನು ಬದಲಾವಣೆ ಮಾಡಲಾಗಿದ್ದು, 2,000 ಚದರ ಮೀಟರ್ ಮತ್ತು ಅದಕ್ಕಿಂತ ಮೇಲ್ಪಟ್ಟು ನಿರ್ಮಿಸಲಾಗಿರುವ ವಾಣಿಜ್ಯ ಕಟ್ಟಡಗಳು ಕೊಳಚೆ ನೀರು ಸಂಸ್ಕರಣ ಘಟಕ ಸ್ಥಾಪಿಸುವುದು ಕಡ್ಡಾಯ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ನಗರದಲ್ಲಿ ಇಂತಹ ವಾಣಿಜ್ಯ ಕಟ್ಟಡಗಳು ಲಕ್ಷಕ್ಕಿಂತ ಹೆಚ್ಚಾಗಿದ್ದು, ಈ ಎಲ್ಲಾ ಕಟ್ಟಡಗಳು ಈ ವರ್ಗಕ್ಕೆ ಸೇರಲಿದೆ. ದೊಡ್ಡ ಮಟ್ಟದ ವಾಣಿಜ್ಯ ಕಟ್ಟಡಗಳು ಈಗಾಗಲೇ ಕೊಳಚೆ ನೀರು ಸಂಸ್ಕರಣ ಘಟಕಗಳನ್ನು ಸ್ಥಾಪಸಿಕೊಂಡಿವೆ. ಸಣ್ಣ ಮಟ್ಟದ ವಾಣಿಜ್ಯ ಘಟಕಗಳಿಂದ ಹೆಚ್ಚು ಪರಿಣಾಮ ಉಂಟಾಗುತ್ತಿದ್ದು, ಈ ವಾಣಿಜ್ಯ ಘಟಕಗಳಲ್ಲಿ ಯೋಗ್ಯವಲ್ಲದ ಉದ್ದೇಶಗಳಿಗೆ ನೀರನ್ನು ಬಳಕೆ ಮಾಡಲಾಗುತ್ತಿದೆ ಎಂದು ಕೆಂಪರಾಮಯ್ಯ ಅವರು ಹೇಳಿದ್ದಾರೆ.

SCROLL FOR NEXT