ರಾಜ್ಯ

ಮೈಸೂರಿನ ಗುರು, ರಾಮನಗರದ ಜನಾರ್ದನ ಸ್ವೀಟ್ ಸ್ಟಾಲ್ ಮೈಸೂರ್ ಪಾಕ್ ಕೊಂಡಾಡಿದ ಸಿಎಂ

Shilpa D

 ಬೆಂಗಳೂರು: ರಾಮನಗರದ ಜನಾರ್ದನ್ ಮೈಸೂರ್ ಪಾಕ್​ಗೆ ಹೋಲಿಸಿದರೆ ನಂದಿನಿ ಮೈಸೂರ್ ಪಾಕ್ ಗುಣಮಟ್ಟ ಹಾಗೂ ರುಚಿ ಕಡಿಮೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರು ನಗರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ (ಬಮೂಲ್) ಆಯೋಜಿಸಿದ್ದ ಹೊಸಕೋಟೆ ಡೇರಿ ಮತ್ತು ಉತ್ಪನ್ನ ಘಟಕಗಳನ್ನು ಸಿಎಂ ಉದ್ಘಾಟಿಸಿದರು. ಉಗ್ರಾಣ, ಮಾರುಕಟ್ಟೆ ಕಚೇರಿ, ಉಪಹಾರ ಗೃಹ ಮತ್ತು ಸಭಾಂಗಣಕ್ಕೆ ಶಂಕುಸ್ಥಾಪನೆಯನ್ನೂ ನೆರವೇರಿಸಿದರು.

ಮೈಸೂರಿನ ಗುರು ಸ್ವೀಟ್ ಮಾರ್ಟ್ ಮತ್ತು ರಾಮನಗರದ ಜನಾರ್ದನ್ ಮೈಸೂರು ಪಾಕ್ ರುಚಿ ಮತ್ತು ಗುಣಮಟ್ಟ ಕೆಎಂಎಫ್​ನ ನಂದಿನಿ ಮೈಸೂರ್ ಪಾಕ್​ಗಿಲ್ಲ. ಕೆಎಂಎಫ್ ತನ್ನ ಗುಣಮಟ್ಟ ಹೆಚ್ಚಿಸಿಕೊಂಡರೆ ಅಮೂಲ್​ಗೂ ಸ್ಪರ್ಧೆ ಒಡ್ಡಬಹುದು ಮತ್ತು ದೇಶ, ವಿದೇಶದೆಲ್ಲೆಡೆ ಕೆಎಂಎಫ್ ಉತ್ಪನ್ನಗಳಿಗೆ ಮಾರುಕಟ್ಟೆ ಹೆಚ್ಚಿಸಬಹುದು ಎಂದರು.

ಕೆಎಂಎಫ್ ಮೈಸೂರ್ ಪಾಕ್ ರುಚಿಯಿಲ್ಲವೆಂದಾಗ ವೇದಿಕೆಯಲ್ಲಿನ ಗಣ್ಯರೇ ಮೆಲ್ಲನೆ ವಿರೋಧ ವ್ಯಕ್ತಪಡಿಸಿದರು. ಸಭಿಕರೂ ನಂದಿನಿ ಮೈಸೂರ್ ಪಾಕ್ ಚೆನ್ನಾಗಿದೆ ಎಂದಾಗ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಚೆನ್ನಾಗಿದ್ದರೆ ಸಂತೋಷ ಎಂದು ಹೇಳಿದರು.ಸಚಿವರಾದ ಮಹದೇವಪ್ರಸಾದ್, ಡಿ.ಕೆ. ಶಿವಕುಮಾರ್, ಎ. ಮಂಜು, ಕೆಎಂಎಫ್ ಅಧ್ಯಕ್ಷ ಪಿ. ನಾಗರಾಜು ಮತ್ತಿತರರಿದ್ದರು.

SCROLL FOR NEXT