ರಾಜ್ಯ

ಇಸ್ಲಾಂ ಜೀವಂತವಾಗಿರುವವರೆಗೂ ಭಯೋತ್ಪಾದನೆ ಜೀವಂತವಾಗಿರುತ್ತದೆ: ಬಿಜೆಪಿ ಸಂಸದ

Manjula VN

ಬೆಂಗಳೂರು: ಎಲ್ಲಿಯವರೆಗೆ ಪ್ರಪಂಚದಲ್ಲಿ ಇಸ್ಲಾಂ ಧರ್ಮ ಜೀವಂತವಾಗುರುತ್ತದೆಯೋ ಅಲ್ಲಿಯವರೆಗೂ ಭಯೋತ್ಪಾದನೆ ತೊಲಗಿಸಲು ಸಾಧ್ಯವಿಲ್ಲ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗ್ಡೆ ಅವರು ಹೇಳಿದ್ದಾರೆ.

ಈ ಹಿಂದಷ್ಟೇ ರಾಜ್ಯ ಮಾನ ಸಂಪನ್ಮೂಲ ಅಭಿವೃದ್ಧಿ ಸಚಿವ ಮುಸ್ಲಿಮರ ಕುರಿತಂತೆ ಪ್ರಚೋದನಕಾರಿ ಹೇಳಿಕೆ ನೀಡಿದ ವಿವಾದವೊಂದನ್ನು ಸೃಷ್ಟಿಸಿದ್ದರು. ಇದೀಗ ಮತ್ತೆ ಬಿಜೆಪಿ ಸಂಸದರೊಬ್ಬರು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.

ಭಾನುವಾರ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಬಟ್ಕಳದಲ್ಲಿ ಶಾಂತಿಯನ್ನು ಬಯಸುವುದಾದರೆ ಮೊದಲು ನಾವು ಇಸ್ಲಾಂ ಧರ್ಮವನ್ನು ವಿಶ್ವದಿಂದಲೇ ತೊಲಗಿಸಬೇಕು. ಆಗಷ್ಟೇ ಭಯೋತ್ಪಾದನೆಯನ್ನು ನಿಯಂತ್ರಿಸಲು ಸಾಧ್ಯ ಎಂದು ಹೇಳಿದ್ದಾರೆ.

ಇದರಂತೆ ಬಿಜೆಪಿ ನಾಯಕರು ನೀಡಿತ್ತಿರುವ ಪ್ರಚೋದನಾಕಾರಿ ಹೇಳಿಕೆಗನ್ನು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭೆಯಲ್ಲಿ ಪ್ರಸ್ತಾಪ ಮಾಡಿದ್ದು, ಬಿಜೆಪಿ ಹಾಗೂ ಆರ್ ಎಸ್ಎಸ್ ದೇಶವನ್ನು ಇಬ್ಬಾಗ ಮಾಡಲು ಯತ್ನಿಸುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮಾಜವಾದಿ ಪಕ್ಷದ ನಾಯಕ ರಾಮ್ ಗೋಪಾಲ್ ಯಾದವ್ ಅವರು ಕೂಡ ಕಥೇರಿಯಾ ಅವರನ್ನು ವಜಾಗೊಳಿಸಬೇಕೆಂದು ಆಗ್ರಹಿಸಿದ್ದಾರೆ.

SCROLL FOR NEXT