ವಾಟ್ಸ್ ಆಪ್ 
ರಾಜ್ಯ

ಯುವತಿಯ ನಗ್ನ ಫೋಟೋ ವಾಟ್ಸ್​ಆಪ್​ನಲ್ಲಿ ಶೇರ್: ಬ್ಯಾಂಕ್ ಅಧಿಕಾರಿ ಬಂಧನ

ಕಾಲೇಜು ವಿದ್ಯಾರ್ಥಿನಿಯ ಭಾವಚಿತ್ರದಲ್ಲಿ ಮುಖದ ಭಾಗ ತೆಗೆದು ಅಪರಿಚಿತ ಯುವತಿಯ ನಗ್ನ ಭಾವಚಿತ್ರಕ್ಕೆ ಅಂಟಿಸಿ ವಾಟ್ಸ್​ಆಪ್ ನಲ್ಲಿ ಹರಿಬಿಟ್ಟಿದ್ದ ಧನಲಕ್ಷ್ಮೀ ಬ್ಯಾಂಕ್...

ಬೆಂಗಳೂರು: ಕಾಲೇಜು ವಿದ್ಯಾರ್ಥಿನಿಯ ಭಾವಚಿತ್ರದಲ್ಲಿ ಮುಖದ ಭಾಗ ತೆಗೆದು ಅಪರಿಚಿತ ಯುವತಿಯ ನಗ್ನ ಭಾವಚಿತ್ರಕ್ಕೆ ಅಂಟಿಸಿ ವಾಟ್ಸ್​ಆಪ್ ನಲ್ಲಿ ಹರಿಬಿಟ್ಟಿದ್ದ ಧನಲಕ್ಷ್ಮೀ ಬ್ಯಾಂಕ್ ಶಾಖೆಯ ಅಧಿಕಾರಿಯನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಅಧಿಕಾರಿ ಆಂಧ್ರಪ್ರದೇಶದ ಸಿಕಿಂದರಬಾದ್ ಧನಲಕ್ಷ್ಮೀ ಬ್ಯಾಂಕ್ ಶಾಖೆ ಸಹಾಯಕ ವ್ಯವಸ್ಥಾಪಕ 58 ವರ್ಷದ ಶೈಲೇಂದ್ರ ಗೊಜೆ ಎಂದು ತಿಳಿದುಬಂದಿದೆ. ಶೈಲೇಂದ್ರ ಗೊಜೆಯಿಂದ 1 ಲ್ಯಾಪ್​ಟಾಪ್ ಮತ್ತು 2 ಮೊಬೈಲ್ ಫೋನ್ ವಶಕ್ಕೆ ಪಡೆದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಾಗಿ ಸಿಐಡಿ ಪೊಲೀಸರು ತಿಳಿಸಿದ್ದಾರೆ.

ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಸಂಬಂಧಿಕರ ಮೊಬೈಲ್​ಗೆ ತಿಂಗಳ ಹಿಂದೆ ವಾಟ್ಸ್​ಆಪ್​ನಲ್ಲಿ ಫೋಟೋ ಬಂದಿತ್ತು. ಅದನ್ನು ಡೌನ್​ಲೋಡ್ ಮಾಡಿದಾಗ, ನಗ್ನ ಭಾವಚಿತ್ರ ತೆರೆದುಕೊಂಡಿದೆ. ಯುವತಿ ಗೌರವಕ್ಕೆ ಧಕ್ಕೆ ಉಂಟು ಮಾಡುವ ಉದ್ದೇಶದಿಂದ ಈ ಕೃತ್ಯ ಮಾಡುತ್ತಿರುವುದಾಗಿ ಸೈಬರ್ ಕ್ರೈಂ ಪೊಲೀಸರಿಗೆ ಫೆ.3ರಂದು ಯುವತಿ ಸಂಬಂಧಿಕರು ದೂರು ದಾಖಲಿಸಿದ್ದರು. ಈ ಪ್ರಕರಣದ ತನಿಖೆ ಕೈಗೊಂಡ ಇನ್ಸ್​ಪೆಕ್ಟರ್ ಜಿ. ಮಹದೇವ್ ನೇತೃತ್ವದ ತಂಡ ಸಿಕಂದರಾಬಾದ್​ನಲ್ಲಿ ಆರೋಪಿಯನ್ನು ಬಂಧಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT