ಬಾಲ್ಯವಿವಾಹ ಮಸೂದೆ ಅಂಗೀಕಾರ; ಪುರೋಹಿತರು, ನೆಂಟರಿಗೂ ಜೈಲುಶಿಕ್ಷೆ!
ಇನ್ಮುಂದೆ ಬಾಲ್ಯವಿವಾಹ ಮಾಡಿಸುವ ಪುರೋಹಿತರೂ ಹಾಗೂ ಬಾಲ್ಯವಿವಾಹಕ್ಕೆ ಹೋಗುವ ನೆಂಟರು ಕೂಡ ಜೈಲಿಗೆ ಹೋಗಬೇಕಾಗುತ್ತದೆ, ಬಾಲ್ಯವಿವಾಹಗಳನ್ನು ಕಠಿಣವಾಗಿ ನಿರ್ಬಂಧಿಸಲು ಉದ್ದೇಶಿಸಿರುವ ಸರ್ಕಾರ,
ಬೆಂಗಳೂರು: ಇನ್ಮುಂದೆ ಬಾಲ್ಯವಿವಾಹ ಮಾಡಿಸುವ ಪುರೋಹಿತರೂ ಹಾಗೂ ಬಾಲ್ಯವಿವಾಹಕ್ಕೆ ಹೋಗುವ ನೆಂಟರು ಕೂಡ ಜೈಲಿಗೆ ಹೋಗಬೇಕಾಗುತ್ತದೆ. ಹೌದು ಬಾಲ್ಯವಿವಾಹಗಳನ್ನು ಕಠಿಣವಾಗಿ ನಿರ್ಬಂಧಿಸಲು ಉದ್ದೇಶಿಸಿರುವ ಸರ್ಕಾರ ಬಾಲ್ಯವಿವಾಹ ನಿಷೇಧ ವಿಧೇಯಕವನ್ನು ಶನಿವಾರ ವಿಧಾನಸಭೆಯಲ್ಲಿ ಅಂಗೀಕರಿಸಿದೆ.
ಕದ್ದುಮುಚ್ಚಿ ಬಾಲ್ಯ ವಿವಾಹ ಮಾಡಿದರೆ ಅಂತಹ ವಿವಾಹವನ್ನೇ ಕಾನೂನು ಪ್ರಕಾರ ಅಸಿಂಧು ಎಂದು ಘೋಷಿಸುವ ಹಾಗೂ ಶಿಕ್ಷೆ ಪ್ರಮಾಣ ಒಂದು ವರ್ಷಕ್ಕೆ ಕಡಿಮೆ ಇಲ್ಲದಂತೆ ಎರಡು ವರ್ಷದವರೆಗ ವಿಸ್ತರಿಸುವ ಅವಕಾಶವೂ ಇದರಲ್ಲಿದೆ.
ಬಾಲ್ಯವಿವಾಹವು ಕಾನೂನು ಪ್ರಕಾರ ಸಿಂಧುವಲ್ಲ. ಬಾಲ್ಯ ವಿವಾಹ ಮಾಡಿಸುವ, ಪ್ರೇರೇಪಿಸುವ, ಆ ಸಮಾರಂಭದಲ್ಲಿ ಹಾಜರಿರುವವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸುವುದು. ಅಪ್ರಾಪ್ತ ಬಾಲಕಿಯನ್ನು ವಿವಾಹವಾದ ಪುರುಷ, ಮದುವೆ ಕಾರ್ಯ ನೆರವೇರಿಸಿದ ಅರ್ಚಕ, ಸಾಮೂಹಿಕ ವಿವಾಹ ಸಮಾರಂಭದಲ್ಲಿ ಬಾಲ್ಯವಿವಾಹ ನಡೆದಲ್ಲಿ ಆಯೋಜಕರು ಹಾಗೂ ಅಲ್ಲಿ ಹಾಜರಿದ್ದವರಿಗೂ ಒಂದು ವರ್ಷ ಜೈಲು ಶಿಕ್ಷೆ ವಿಧಿಸುವುದು ಕಡ್ಡಾಯ ಎಂದು ಮಸೂದೆಯಲ್ಲಿ ಹೇಳಲಾಗಿದೆ.
ಬಾಲ್ಯವಿವಾಹ ನಡೆಯುತ್ತಿದೆ ಎಂಬ ಮಾಹಿತಿ ಬಂದರೂ ಸಂಬಂಧ ಪಟ್ಟ ಪೊಲೀಸ್ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ತಾನಾಗಿಯೇ ಕ್ರಮ ಕೈಗೊಳ್ಳಬಹುದು ಎಂದು ಮಸೂದೆಯಲ್ಲಿ ಹೇಳಲಾಗಿದೆ. ಈ ಮಸೂದೆ ಮುಂದಿನ ಅಧಿವೇಶನದಲ್ಲಿ ವಿಧಾನ ಪರಿಷತ್ತಿನಲ್ಲಿ ಮಂಡನೆಯಾಗಲಿದೆ. ಅಲ್ಲೂ ಅಂಗೀಕಾರವಾದರೆ ಕಾಯ್ದೆಯಾಗಿ ಜಾರಿಗೆ ಬರಲಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.