ಸಾಂದರ್ಭಿಕ ಚಿತ್ರ 
ರಾಜ್ಯ

ವಾಷಿಂಗ್ ಮಷಿನ್‌ನಲ್ಲಿ ಸಿಲುಕಿಕೊಂಡ ಬಾಲಕನ ಪರದಾಟ: ಹೊರತೆಗೆಯಲು ಪೋಷಕರ ಪರದಾಟ

ವಾಷಿಂಗ್ ಮಷಿನ್ ನಲ್ಲಿ ಸಿಲುಕಿಕೊಂಡಿದ್ದ ಎರಡು ವರ್ಷದ ಬಾಲಕನನ್ನು ಅರ್ಧ ಗಂಟೆಯ ನಿರಂತರ ಪ್ರಯತ್ನದ ನಂತರ ರಕ್ಷಿಸಿರುವ ಘಟನೆ ಕಲಬುರಗಿಯ ವಿದ್ಯಾನಗರದಲ್ಲಿ ...

ಕಲಬುರಗಿ: ವಾಷಿಂಗ್ ಮಷಿನ್ ನಲ್ಲಿ ಸಿಲುಕಿಕೊಂಡಿದ್ದ ಎರಡು ವರ್ಷದ ಬಾಲಕನನ್ನು ಅರ್ಧ ಗಂಟೆಯ ನಿರಂತರ ಪ್ರಯತ್ನದ ನಂತರ ರಕ್ಷಿಸಿರುವ ಘಟನೆ ಕಲಬುರಗಿಯ ವಿದ್ಯಾನಗರದಲ್ಲಿ ನಡೆದಿದೆ.

ಬೆಳಗ್ಗೆ ತಾಯಿ ಅಡುಗೆ ಕೋಣೆಯಲ್ಲಿದ್ದಾಗ  ಆಟವಾಡುತ್ತಿದ್ದ ಮಗು ಟಾಪ್ ಲೋಡಿಂಗ್ ವಾಷಿಂಗ್ ಮಷಿನ್‌ನೊಳಗೆ  ಇಳಿದಿದೆ. ಆ ಸಂದರ್ಭದಲ್ಲಿ ಮಷಿನ್ ಚಾಲನೆಯಲ್ಲಿ ಇರಲಿಲ್ಲ. ಮೊಳಕಾಲಿನವರೆಗೆ ಕಾಲು ಸಿಕ್ಕಿಹಾಕಿಕೊಂಡ ಬಳಿಕ ಹೊರಗೆ ಬರಲಾಗದೆ ಅಳಲು ಆರಂಭಿಸಿದೆ. ತಕ್ಷಣವೇ ಮಗುವಿನ ರಕ್ಷಣೆಗೆ ಧಾವಿಸಿದ್ದಾರೆ. ಆದರೆ, ಪ್ರಯತ್ನ ಫಲಿಸದ ಕಾರಣ ಭಯಭೀತರಾದ ತಾಯಿ ರಸ್ತೆಗೆ ಬಂದು ಮಗುವನ್ನು ರಕ್ಷಣೆ ಮಾಡುವಂತೆ ರಸ್ತೆಗೆ ಬಂದು ಚೀರಾಡಿದ್ದಾರೆ. ಬಳಿಕ ಅದೇ ಬಡಾವಣೆಯ ಶಿವರಾಜ ಅಂಡಗಿ ಮತ್ತು ಹಣಮಂತ ರೆಡ್ಡಿ ಕಲ್ಲಬೇನೂರ ಎಂಬುವವರು ನೆರವಿಗೆ ಧಾವಿಸಿದ್ದಾರೆ.

ಸಾಕಷ್ಟು ಪ್ರಯತ್ನಿಸಿದರೂ ಮಗುವಿನ ಕಾಲನ್ನು ಯಂತ್ರದಿಂದ ಹೊರತೆಗೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಅದನ್ನು ಒಡೆದು ಮಗುವಿಗೆ ಯಾವುದೇ ಗಾಯ ಆಗದಂತೆ ಮುತುವರ್ಜಿ ವಹಿಸಿ ಹೊರತೆಗೆಯಲಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ: Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ; Turkey ಬೇಸ್ತು!

ನೀವೇನ್ ಮುಚ್ಚೋದು.. ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ; ಇರಾನ್ ಗೆ ಟ್ರಂಪ್ ಶಾಕ್!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್; KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

SCROLL FOR NEXT