ರಾಮಲಿಂಗಾರೆಡ್ಡಿ 
ರಾಜ್ಯ

ಬಿಎಂಟಿಸಿ ಬಸ್ ಅಪಘಾತಗಳಿಗೆ ಯುವ ಚಾಲಕರೇ ಕಾರಣ!

ಅಪಘಾತಗಳಿಂದಾಗಿ ಕಿಲ್ಲರ್ ಬಿಎಂಟಿಸಿ ಎಂಬ ಕುಖ್ಯಾತಿ ಗಳಿಸಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)...

ಬೆಂಗಳೂರು: ಅಪಘಾತಗಳಿಂದಾಗಿ ಕಿಲ್ಲರ್ ಬಿಎಂಟಿಸಿ ಎಂಬ ಕುಖ್ಯಾತಿ ಗಳಿಸಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಬಸ್‌ಗಳ ಅಪಘಾತಗಳಿಗೆ ಹೆಚ್ಚು ಯುವ ಚಾಲಕರೇ ಕಾರಣ ಎಂಬ ಮಾಹಿತಿಯನ್ನು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಸೋಮವಾರ ವಿಧಾನ ಪರಿಷತ್‌ಗೆ ತಿಳಿಸಿದ್ದಾರೆ.
ಚಾಲಕರ ಅತಿ ವೇಗ ಹಾಗೂ ಅಜಾಗರೂಕತೆಯೇ ಅಪಘಾತಗಳಿಗೆ ಕಾರಣ ಎಂದಿರುವ ಸಚಿವರು, ಕಳೆದೊಂದು ವರ್ಷದಿಂದೀಚೆಗೆ ಬಿಎಂಟಿಸಿ ಅಪಘಾತದಿಂದ ೬೦ ಮಂದಿ ಮೃತಪಟ್ಟು, ೨೮೦ ಮಂದಿ ಗಾಯಗೊಂಡಿದ್ದಾರೆ ಎಂದು ವಿವರ ನೀಡಿದರು. 
ಪ್ರಶ್ನೋತ್ತರ ಅವಧಿಯಲ್ಲಿ ವಿಮಲಾಗೌಡ ಅವರ ಪ್ರಶ್ನೆಗೆ ಉತ್ತರಿಸಿದ ರಾಮಲಿಂಗಾರೆಡ್ಡಿ, ಬಿಎಂಟಿಸಿಯಲ್ಲಿ ಪರಿಣಿತ ಚಾಲಕರ ಕೊರತೆಯಿಲ್ಲ. ಆದರೆ ೨೫ರಿಂದ ೩೦ ವರ್ಷದ ಚಾಲಕರು ಅತಿ ವೇಗದಿಂದ ಬಸ್‌ಗಳನ್ನು ಓಡಿಸುವುದೇ ಅಪಘಾತಕ್ಕೆ ಕಾರಣ ಎಂದರು.
೨೦೧೪-೧೫ನೇ ಸಾಲಿನಲ್ಲಿ ಅಪಘಾತದಿಂದ ಮೃತಪಟ್ಟವರು ಹಾಗೂ ಗಾಯಗೊಂಡವರಿಗೆ ಸಂಸ್ಥೆ ಒಟ್ಟು ೧೩ ಲಕ್ಷ ರಪಾಯಿ ಪರಿಹಾರ ನೀಡಿದೆ. ಅಲ್ಲದೆ, ನ್ಯಾಯಾಲಯದಲ್ಲಿ ತೀರ್ಮಾನವಾಗಿರುವ ಮೃತಪಟ್ಟ ಹಾಗೂ ಗಾಯಗೊಂಡ ಪ್ರಕರಣಗಳಿಗೆ ೧೧.೫೦ ಕೋಟಿ ರುಪಾಯಿಗೂ ಹೆಚ್ಚು ಹಣವನ್ನು ಪರಿಹಾರವಾಗಿ ನೀಡಲಾಗಿದೆ ಎಂದರು.
ಇತ್ತೀಚಿನ ವರ್ಷಗಳಲ್ಲಿ ಅಪಘಾತ ಕಡಿಮೆಯಾಗುತ್ತಿದ್ದು, ಚಾಲಕರುಗಳಿಗೆ ಸುರಕ್ಷತಾ ಚಾಲನೆ ಬಗ್ಗೆ ಅರಿವು ಹಾಗೂ ತರಬೇತಿಯನ್ನು ನೀಡಲಾಗುತ್ತಿದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್