ಸಾಂದರ್ಭಿಕ ಚಿತ್ರ 
ರಾಜ್ಯ

ಅತ್ಯಾಚಾರಿ ಬೆಂಬಲಿಗರಿಂದ ಸಂತ್ರಸ್ತೆ ಕುಟುಂಬಸ್ಥರಿಗೆ ಬೆದರಿಕೆ

4 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಬಂಧನಕ್ಕೊಳಗಾಗಿರುವ ಅತ್ಯಾಚಾರಿಯ ಬೆಂಬಲಿಗರು ಇದೀಗ ಅತ್ಯಾಚಾರಕ್ಕೊಳಗಾದ ಬಾಲಕಿಯ ಕುಟುಂಬಸ್ಥರಿಗೆ ಬೆದರಿಕೆ...

ಬೆಳಗಾವಿ: 4 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಬಂಧನಕ್ಕೊಳಗಾಗಿರುವ ಅತ್ಯಾಚಾರಿಯ ಬೆಂಬಲಿಗರು ಇದೀಗ ಅತ್ಯಾಚಾರಕ್ಕೊಳಗಾದ ಬಾಲಕಿಯ ಕುಟುಂಬಸ್ಥರಿಗೆ ಬೆದರಿಕೆ ಹಾಕುತ್ತಿರುವುದಾಗಿ ತಿಳಿದುಬಂದಿದೆ.

ಈ ಬಗ್ಗೆ ಮಾತನಾಡಿರುವ ಬಾಲಕಿಯ ತಂದೆ ಅಜಿಂಕ್ಯಾ (ಹೆಸರು ಬದಲಿಸಲಾಗಿದೆ) ಮಾತನಾಡಿದ್ದು, ರಂಗನಾಥ್ ಘಾಂತಿ ಎಂಬ ವ್ಯಕ್ತಿ ನನ್ನ 4 ವರ್ಷದ ಮಗಳ ಮೇಲೆ ರಾಮದುರ್ಗ ತಾಲೂಕಿನ ಮುದುಕವಿ ಗ್ರಾಮದಲ್ಲಿ ಅತ್ಯಾಚಾರ ಮಾಡಿದ್ದ. ಫೆ.15 ರಂದು ರಂಗನಾಥ್ ನನ್ನು ಪೊಲೀಸರು ಬಂಧಿಸಿದ್ದರು.

ಇದೀಗ ಆತನ ಬೆಂಬಲಿಗರು ನಮಗೆ ಬೆದರಿಕೆ ಹಾಕುತ್ತಿದ್ದು, ಪ್ರಕರಣವನ್ನು ಹಿಂತೆಗೆದುಕೊಂಡು ಊರು ಬಿಟ್ಟು ಹೋಗುವಂತೆ ಹೇಳುತ್ತಿದ್ದಾರೆಂದು ಹೇಳಿಕೊಂಡಿದ್ದಾರೆ.
ರಾಮದುರ್ಗದಲ್ಲಿ ಚಿಕ್ಕ ಗುಡಿಸಲಿನಲ್ಲಿ ಕುಟುಂಬ ಜೀವನ ನಡೆಸುತ್ತಿದ್ದು, ಇದೀಗ ಅತ್ಯಾಚಾರಿ ಬೆಂಬಲಿಗರು ಊರು ಬಿಟ್ಟು ಹೋಗುವಂತೆ ಬಲವಂತ ಮಾಡುತ್ತಿದ್ದಾರೆ.

ಈ ಸಂಬಂಧ ಸ್ಥಳೀಯ ಪೊಲೀಸರನ್ನು ಭೇಟಿಯಾಗಿ ಬೆದರಿಕೆ ಕರೆ ಬಂದ ಮೊಬೈಲ್ ಫೋನು, ಅದರ ನಂಬರ್ ಹಾಗೂ ಕೆಲವು ದಾಖಲೆಗಳನ್ನು ನೀಡಿದ್ದರು. ಕ್ರಮಕೈಗೊಂಡಿಲ್ಲ. ಕ್ರಮಕೈಗೊಳ್ಳುವ ಬದಲು ನಮ್ಮನ್ನೇ ಊರು ಬಿಟ್ಟು ಹೋಗಿ ಸುರಕ್ಷಿತ ಸ್ಥಳದಲ್ಲಿರಿ ಎಂದು ಹೇಳುತ್ತಾರೆ. ನಮಗೆ ಸ್ಥಳೀಯ ಪೊಲೀಸರಿಂದ ಯಾವುದೇ ಸಹಾಯ ಸಿಕ್ಕಿಲ್ಲ. ಈ ಸಂಬಂಧ ಈಗಾಗಲೇ ಉಪ ಪೊಲೀಸ್ ಆಯುಕ್ತ ಎನ್. ಜಯರಾಮ್ ಅವರಿಗೆ ಮಾಹಿತಿ ನೀಡಲಾಗಿದೆ ಎಂದು ಹೇಳಿದ್ದಾರೆ.

ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಉಪ ಪೊಲೀಸ್ ಆಯುಕ್ತ ಎನ್. ಜಯರಾಮ್ ಅವರು, ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಯುವಕರ ಭವಿಷ್ಯಕ್ಕಿಂತ ಮುಖ್ಯ ಯಾವುದೂ ಅಲ್ಲ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಲು ತ್ವರಿತ ನ್ಯಾಯಾಲಯ ಸ್ಥಾಪನೆ': PM ನರೇಂದ್ರ ಮೋದಿ

ಅಮೆರಿಕ ಬೆದರಿಕೆಗೆ Iran ತಿರುಗೇಟು: 'ಕಣ್ಣಿಗೆ ಕಣ್ಣು' ಉತ್ತರ, ಮೂಲಸೌಕರ್ಯಗಳ ಮೇಲೆ ದಾಳಿಯಾದರೆ ಪ್ರಬಲ ಪ್ರತೀಕಾರ ಎಂದ ಟೆಹ್ರಾನ್

'ಕಾಶ್ಮೀರ ಭಾರತದ ಅವಿಭಾಜ್ಯ ಅಂಗ': ನಮ್ಮತ್ತ ಬೆರಳು ತೋರಿಸುವ ಮೊದಲು ನಿಮ್ಮ ದೇಶ ನೋಡಿಕೊಳ್ಳಿ; ವಿಶ್ವಸಂಸ್ಥೆಯಲ್ಲಿ Pak ವಿರುದ್ಧ ಭಾರತ ಗುಡುಗು..!

ನೆತನ್ಯಾಹು ಮಾಸ್ಟರ್ ಪ್ಲ್ಯಾನ್ ಲೀಕ್? ಸದ್ದಿಲ್ಲದೆ ಗೂಢಚಾರರ ಜಾಲ ಧ್ವಂಸಗೊಳಿಸಿದ ಮೊಜ್ತಬಾ ಖಮೇನಿ..?

'ಶಾಂತಿಯುತ ಹೋರಾಟ ಹಿಂಸೆಗೆ ತಿರುಗಿದ್ದು ನೋವಾಗಿದೆ', ವಿದ್ಯಾರ್ಥಿಗಳ ಹೋರಾಟ ರಾಜಕೀಯದ ಅಸ್ತ್ರವಾಗಬಾರದು: NEET ಪ್ರತಿಭಟನೆಗೆ Salman Khan ಬೆಂಬಲ