ಕೋಲಾರ: ಕೋಲಾರ ತಾಲೂಕಿನ ಮಡೇರಹಳ್ಳಿ ಸಮೀಪ ಸ್ಕಾರ್ಪಿಯೊ ಕಾರೊಂದು ಪಲ್ಟಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟವರನ್ನು ಪ್ರಕಾಶ್(35) ಹಾಗೂ ವೆಂಕಟೇಶ್(50) ಎಂದು ಗುರುತಿಸಲಾಗಿದೆ. ಮೃತರು ಬಂಗಾರಪೇಟೆ ತಾಲೂಕಿನ ಭೈರಗಾನಹಳ್ಳಿ ನಿವಾಸಿಗಳು ಎನ್ನಲಾಗಿದೆ.
ಈ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.