ಜಬೀನಾ ಮತ್ತು ಸೈಯ್ಯದ್ ನೂರುೂಲ್ಲಾ 
ರಾಜ್ಯ

ಬೌರಿಂಗ್ ಆಸ್ಪತ್ರೆಯಿಂದ ನವಜಾತ ಶಿಶು ಕದ್ದಿದ್ದ ದಂಪತಿ ಬಂಧನ

ನಗರದ ಬೌರಿಂಗ್ ಆಸ್ಪತ್ರೆಯಿಂದ ಎರಡು ದಿನಗಳ ನವಜಾತ ಶಿಶುವನ್ನು ಕಳ್ಳತನ ಮಾಡಿದ್ದ ಇಬ್ಬರನ್ನು ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಬಂಧಿಸಿದ್ದಾರೆ...

ಬೆಂಗಳೂರು: ನಗರದ ಬೌರಿಂಗ್ ಆಸ್ಪತ್ರೆಯಿಂದ ಎರಡು ದಿನಗಳ ನವಜಾತ ಶಿಶುವನ್ನು ಕಳ್ಳತನ ಮಾಡಿದ್ದ ಇಬ್ಬರನ್ನು ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಬಂಧಿಸಿದ್ದಾರೆ.

ಡಿ.ಜೆ ಹಳ್ಳಿ ನಿವಾಸಿಗಳಾದ ಜಬೀನಾ ಮತ್ತು ಸೈಯ್ಯದ್ ನೂರುಲ್ಲಾ ಎಂಬುವರು ಅಕ್ಟೋಬರ್ 2015 ರಲ್ಲಿ  ಬೌರಿಂಗ್ ಆಸ್ಪತ್ರೆಯಿಂದ 2 ದಿನಗಳ ನವಜಾತ ಶಿಶುವನ್ನು ಕದ್ದು ಪರಾರಿಯಾಗಿದ್ದರು.

ಆರು ತಿಂಗಳ ನಂತರ ಕೋಲಾರ ಜಿಲ್ಲೆಯ ಚಿಂತಾಮಣಿ ತಾಲೂಕಿನ ದರ್ಗಾದಲ್ಲಿ  ಭಾನುವಾರ ರಾತ್ರಿ ಇವರನ್ನು ಬಂಧಿಸಲಾಗಿದೆ. ಮಕ್ಕಳಿಲ್ಲದ ದಂಪತಿಯೊಬ್ಬರು ನವಜಾತ ಶಿಶುವನ್ನು ತಂದುಕೊಟ್ಟರೆ ಒಂದು ಲಕ್ಷ ಹಣ ನೀಡುವುದಾಗಿ ಹೇಳಿದ್ದರು. ಹಣದ ಆಮೀಷಕ್ಕಾಗಿ  ಇವರು ಮಗು ಕಳ್ಳತನ ಮಾಡಿದ್ದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಇನ್ನು ಈ ಕಳ್ಳರು ಮಕ್ಕಳ ಅಪಹರಣ ಜಾಲದಲ್ಲಿ ಭಾಗಿಯಾಗಿರಬಹುದೆಂದು ಪೊಲೀಸರು ಭಾವಿಸಿದ್ದಾರೆ.

ಬೌರಿಂಗ್ ಆಸ್ಪತ್ರೆಯಲ್ಲಿ ಸೈಯ್ಯದ್ ಹಬೀಬ್ ಮತ್ತು ಫರೀದಾ ದಂಪತಿಯ 2 ದಿನಗಳ ಮಗುವನ್ನು ಜಬೀನಾ ಕದ್ದು ಪರಾರಿಯಾಗಿದ್ದಳು. ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜ್ಞಾನೇಶ್ ಕುಮಾರ್ ವಿರುದ್ಧ ದೆಹಲಿ, ಮುಂಬೈನಲ್ಲಿ ಬೃಹತ್ ಪ್ರತಿಭಟನೆ; 700 ಮಂದಿ ವಶಕ್ಕೆ

FlyDubai ಘಟನೆ ಹಿಂದೆ ಯಾವುದೇ ಶಕ್ತಿಯ ಕೈವಾಡವಿದ್ದರೂ ಡೋಂಟ್ ಕೇರ್; 'ಭಾರಿ ಬೆಲೆ' ತೆರಬೇಕಾಗುತ್ತೆ- ಇಸ್ರೇಲ್ ಪ್ರಧಾನಿ ನೆತನ್ಯಾಹು ಎಚ್ಚರಿಕೆ

ಬಿಹಾರ ಪ್ರವಾಹ: ವಾಯುಪಡೆಯ ಹೆಲಿಕಾಪ್ಟರ್‌ನಿಂದ ಪರಿಹಾರ ಸಾಮಗ್ರಿಯ ಪ್ಯಾಕೆಟ್ ಬಿದ್ದು ವೃದ್ಧ ಸಾವು!

Asian Games 2026: 44 ವರ್ಷಗಳ ಬರ ನೀಗಿಸಿದ ಮಹಿಳಾ ಪಡೆ; ಚೀನಾ ಮಣಿಸಿ ಚಿನ್ನ ಗೆದ್ದ ಭಾರತ!

CJP ಪ್ರತಿಭಟನೆಗೆ ಕೈಜೋಡಿಸಿದ ನಸೀರುದ್ದೀನ್ ಶಾ; ನಟನನ್ನು ಅಪ್ಪಿಕೊಂಡು ಕಣ್ಣೀರಿಟ್ಟ ಅಭಿಜೀತ್ ದೀಪ್ಕೆ; Video!