ರಾಜ್ಯ

ಮೃತಪಟ್ಟ ಕಾರ್ಮಿಕ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ರು.5 ಲಕ್ಷಕ್ಕೆ ಏರಿಕೆ

Mainashree
ಬೆಂಗಳೂರು: ಕೆಲಸದ ವೇಳೆ ಮೃತಪಡುವ ಕಟ್ಟಡ ಕಾರ್ಮಿಕರು ಹಾಗೂ ಕ್ವಾರಿ ಕಾರ್ಮಿಕರ ಸಂತ್ರಸ್ತ ಕುಟುಂಬಕ್ಕೆ ನೀಡುತ್ತಿದ್ದ ಪರಿಹಾರ ಧನವನ್ನು ರು.3ಲಕ್ಷದಿಂದ ರು.5ಲಕ್ಷದವರೆಗೆ ಏರಿಕೆ ಮಾಡಲಾಗಿದೆ. 
ನಿನ್ನೆ ಕಾರ್ಮಿಕ ಸಚಿವ ಪಿ ಟಿ ಪರಮೇಶ್ವರ ನಾಯ್ಕ ಅವರು ಕಟ್ಟಡ ಕಾರ್ಮಿಕರು ಹಾಗೂ ಕ್ವಾರಿ ಕಾರ್ಮಿಕರ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಮೃತಪಟ್ಟ ಕಾರ್ಮಿಕ ಕುಟುಂಬದವರಿಗೆ ರು.5ಲಕ್ಷದವರೆಗೆ ಪರಿಹಾರ ನೀಡಲು ನಿರ್ಧರಿಸಲಾಗಿದೆ. 
ಆದರೆ, ಈ ಪರಿಹಾರ ಪಡೆಯಲು ಷರತ್ತು ಅನ್ವಯವಾಗಲಿದೆ. ಕಟ್ಟಡ ಕಾರ್ಮಿಕರು ಹಾಗೂ ಕ್ವಾರಿ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಹೆಸರು ನೋಂದಾಯಿಸಿದ ಕಾರ್ಮಿಕರಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ ಎಂದು ಸಚಿವರು ಹೇಳಿದ್ದಾರೆ. 
ಕಾರ್ಮಿಕರ ಕುಟುಂಬಕ್ಕೆ ನೀಡುವ ವೈದ್ಯಕೀಯ ಸಹಾಯದ ಮೊತ್ತವನ್ನು ರು.2 ಲಕ್ಷಕ್ಕೆ ಹೆಚ್ಚಿಸಬೇಕೆಂಬ ಬೇಡಿಕೆ ಇದೆ ಈ ಬಗ್ಗೆ ಮಂಡಳಿಯ ಸಬೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದ ಅವರು, ಈವರೆಗೆ ಮಂಡಳಿಯಲ್ಲಿ 10.10 ಲಕ್ಷ ಕಾರ್ಮಿಕರು ನೋಂದಾಯಿಸಿಕೊಂಡಿದ್ದು, ಅವರು ಈ ಸೌಲಭ್ಯ ಪಡೆಯಲಿದ್ದಾರೆ ಎಂದು ಹೇಳಿದ್ದಾರೆ.
SCROLL FOR NEXT