ಕಾಮೆಡ್ ಕೇ ಪರೀಕ್ಷೆ ವೇಳೆ ವಿದ್ಯಾರ್ಥಿಗಳಿಗೆ ತಾಂತ್ರಿಕ ದೋಷ ಎದುರಾದ ಹಿನ್ನಲೆಯಲ್ಲಿ ಪರೀಕ್ಷಾ ಕೇಂದ್ರ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಪೋಷಕರು
ಬೆಂಗಳೂರು: ಇಂಜಿನಿಯರಿಂಗ ಕೋರ್ಸುಗಳ ಪ್ರವೇಶಕ್ಕೆ ಭಾನುವಾರ ಕಾಮೆಡ್-ಕೆ ನಡೆಸಿದ ಆನ್ ಲೈನ್ ಪ್ರವೇಶ ಪರೀಕ್ಷೆ ವೇಳೆ ಕೆಲ ಪರೀಕ್ಷಾ ಕೇಂದ್ರಗಳಲ್ಲಿ ತಾಂತ್ರಿಕ ದೋಷದಿಂದ ವಿದ್ಯಾರ್ಥಿಗಳು ಒಂದು ಗಂಟೆಗಳ ಕಾಲ ಆಂತಕ ಎದುರಿಸಬೇಕಾಯಿತು.
ಪರೀಕ್ಷೆ ಆರಂಭವಾಗಿ ಒಂದು ಗಂಟೆಗಳ ಕಾಲ ಕೆಲ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಲಾಗಿನ್ ಅಕೌಂಟ್ ತೆರೆದುಕೊಳ್ಳದೆ ಪರದಾಡುವ ಸ್ಥಿತಿ ಎದುರಾಗಿತ್ತು. ಇದರಿಂದ ಆಕ್ರೋಶಗೊಂಡ ಪೋಷಕರು ಪರೀಕ್ಷಾ ಕೇಂದ್ರಗಳಲ್ಲಿ ಸಿಬ್ಬಂದಿಗಳನ್ನು ತರಾಟೆಗೆ ತೆಗುದುಕೊಂಡಿದಲ್ಲದೆ, ಪ್ರತಿಭಟನೆ ನಡೆಸಿದರು. ನಗರದ ಕೇಂಬ್ರಿಡ್ಜ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ, ವಾಮನ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ, ಸೇರಿದಂತೆ ಐದಾರು ಕೇಂದ್ರಗಳಲ್ಲಿ ಇಂತಹ ಸಮಸ್ಯೆ ಎದುರಾಗಿತ್ತು. ಮಲ್ಲೇಶ್ವರಂ ಮತ್ತು ಕೆ ಆರ್ ಪುರಂನಲ್ಲಿರುವ ಪರೀಕ್ಷಾ ಕೇಂದ್ರಗಳಲ್ಲೂ ಸರ್ವರ್ ಕೈಕೊಟ್ಟಿತ್ತು.
ಏಕಾಏಕಿ ಕೇಂದ್ರಗಳ ಬದಲಾವಣೆ ಮಾಡಿದ್ದರಿಂದ ಅನೇಕರಿಗೆ ಬರೆಯಲೂ ಸಾಧ್ಯವಾಗಲಿಲ್ಲ. ವೈದ್ಯ ಮತ್ತು ದಂತ ವೈದ್ಯ ಕೋರ್ಸ್ ಗಳಿಗೆ ಖಾಸಗಿ ಕಾಲೇಜು ಅಥವಾ ಒಕ್ಕೂಟಗಳು ಪ್ರತ್ಯೇಕ ಪ್ರವೇಶ ನಡೆಸಬಾರದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದರಿಂದ ವೈದ್ಯಕೀಯ ಕೋರ್ಸ್ ಗಳ ಪರೀಕ್ಷೆಯನ್ನು ಕಾಮೆಡ್ ಕೆ ರದ್ದು ಮಾಡಿತ್ತು. ಎಂಜಿನಿಯರಿಂಗ್ ಪ್ರವೇಶಕ್ಕೆ ಮಾತ್ರ ಪರೀಕ್ಷೆ ನಡೆಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics