ಸಾಂದರ್ಭಿಕ ಚಿತ್ರ 
ರಾಜ್ಯ

ಎಟಿಎಂ ಯಂತ್ರಕ್ಕೆ ಕಿಕ್ ಕೊಟ್ಟು, ಆಸ್ಪತ್ರೆ ಸೇರಿದ ಕುಡುಕ

ಎಟಿಎಂನಲ್ಲಿ ಹಣ ಬರಲಿಲ್ಲವೆಂದು ಕುಪಿತಗೊಂಡ ವ್ಯಕ್ತಿಯೊಬ್ಬ ಎಟಿಎಂ ಯಂತ್ರಕ್ಕೆ ಹೊಡೆದು ಪೊಲೀಸರ...

ಬೆಂಗಳೂರು: ಎಟಿಎಂನಲ್ಲಿ ಹಣ ಬರಲಿಲ್ಲವೆಂದು ಕುಪಿತಗೊಂಡ ವ್ಯಕ್ತಿಯೊಬ್ಬ ಎಟಿಎಂ ಯಂತ್ರಕ್ಕೆ ಹೊಡೆದು ಪೊಲೀಸರ ಅತಿಥಿಯಾಗಿದ್ದಾನೆ. 
ರಾಜು ದೇವರಾಜ್(46) ಬಂಧಿತ ಆರೋಪಿ. ಕಂಠ ಪೂರ್ತಿ ಮದ್ಯ ಸೇವಿಸಿದ್ದ ಈತ ಹಲಸೂರು ಸಮೀಪದ ವರ್ತುಲ ರಸ್ತೆ ಬಳಿ ಎಸ್ ಬಿಐ ಎಟಿಯಂನಲ್ಲಿ ತನ್ನ ಎಟಿಎಂ ಕಾರ್ಡ್ ಹಾಕಿ ಹಣ ತೆಗೆಯಲು ಮುಂದಾಗಿದ್ದಾನೆ. ಆದರೆ, ಎಟಿಯಂನಿಂದ ಹಣ ಬರದೇ ಹಿನ್ನಲೆಯಲ್ಲಿ ಯಂತ್ರಕ್ಕೆ ಕೈಯಿಂದ ಗುದ್ದಿ ಜಖಂ ಗೊಳಿಸಿದ್ದಾನೆ.  
ಶಬ್ಧ ಕೇಳುತ್ತಿದ್ದಂತೆ ಸೆಕ್ಯೂರಿಟಿ ಗಾರ್ಡ್ ಕಳ್ಳ ಕಳ್ಳ ಎಂದು ಕಿರುಚಾಡಿದ್ದಾನೆ. ಆಗ ಸ್ಥಳೀಯರು ಓಡು ಬರುತ್ತಿದ್ದನು ಕಂಡ ರಾಜು, ಅಲ್ಲಿಂದ ಓಡ ತೊಡಗಿದ್ದಾನೆ. ಕಂಠ ಪೂರ್ತಿ ಮದ್ಯ ಸೇವಿಸಿದ್ದರಿಂದ ಓಡುವ ರಬಸದಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ತೀವ್ರವಾಗಿ ಪೆಟ್ಟಾಗಿ ಕೆಲಕ್ಕೆ ಬಿದ್ದಿದ್ದಾನೆ. 
ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಜ್ಞೆ ತಪ್ಪಿ ಬಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಎಟಿಯಂ ಯಂತ್ರವನ್ನು ಕೈಯಿಂದ ಜಖಂಗೊಳಿಸಿದ ಹಿನ್ನಲೆಯಲ್ಲಿ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

SCROLL FOR NEXT