ರಾಜ್ಯ

ದ್ವಿತೀಯ ಪಿಯು ಅನುತ್ತೀರ್ಣರಾದವರಿಗೆ ಭರವಸೆ ಕಿರಣ - ನ್ಯೂ ಶೋರ್ಸ್ ಇಂಟರ್ನ್ಯಾಷನಲ್ ಕಾಲೇಜ್

Prasad SN

ಬೆಂಗಳೂರು: 12ನೇ ತರಗತಿ ಅಥವಾ ದ್ವಿತೀಯ ಪಿಯು ಪರೀಕ್ಷೆ ಅನುತ್ತೀರ್ಣರಾದ ವಿದ್ಯಾರ್ಥಿಗಳು ಮುಂದೇನು ಎಂದು ಇನ್ನು ಚಿಂತಿಸಬೇಕಿಲ್ಲ. ಅವರೆಲ್ಲಾ ನ್ಯೂ ಶೋರ್ಸ್ ಇಂಟರ್ನ್ಯಾಷನಲ್ ಕಾಲೇಜಿನ ಮೂಲಕ, ಸರ್ಕಾರದ ಮಾನ್ಯತೆ ಪಡೆದಿರುವ ಪೂರ್ಣಾವಧಿ ಪದವಿ ತರಗತಿಗೆ ಸೇರಬಹದು. ತಮ್ಮ ಓದನ್ನು ಅಡೆತಡೆಯಿಲ್ಲದಂತೆ ಮುಂದುವರಿಸಬಹುದು.

'ಒಳಗೊಳ್ಳುವ ಶಿಕ್ಷಣ ಕಾರ್ಯಕ್ರಮ' (Inclusive Education Program) ತಮ್ಮ ಫಲಿತಾಂಶಗಳಿಗಾಗಿ ಕಾಯುತ್ತಿರುವ ಮತ್ತು ಅನುತ್ತೀರ್ಣರಾಗಿರುವ ವಿಷಯಗಳ ಪರೀಕ್ಷೆಯನ್ನು ಮತ್ತೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ತಮ್ಮ ಕನಸುಗಳನ್ನು ನನಸಾಗಿಸುವತ್ತ ಯಾವುದೇ ಅಡೆತಡೆ ಮುಂದುವರಿಯಲು ಒಂದು ಸಮಾನ ಅವಕಾಶ ಕಲ್ಪಿಸುತ್ತದೆ. ಅಷ್ಟೇ ಅಲ್ಲದೆ, ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಇಂಟರ್ನ್ಶಿಪ್ ಮಾಡಬಲ್ಲಂತಹ ಅಪರೂಪದ ಅವಕಾಶವನ್ನು ನೀಡುತ್ತದೆ.  ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಬೇಸಿಗೆ ಕಾರ್ಯಕ್ರಮದ ವಿದ್ಯಾರ್ಥಿಯಾಗಿ ವಿಶೇಷ ವಿಷಯವೊಂದರ ಮೇಲೆ ಅಧ್ಯಯನ ಮಾಡುವ ಅವಕಾಶ ದೊರೆಯುತ್ತದೆಯಲ್ಲದೆ, ಈ ಕೋರ್ಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದಲ್ಲಿ ಪ್ರತಿಷ್ಠಿತ ಸಂಸ್ಥೆಯಿಂದ ಪ್ರಮಾಣಪತ್ರವೂ ದೊರೆಯುತ್ತದೆ.

"ವಿಭಿನ್ನ ಪ್ರತಿಭೆಯುಳ್ಳ ಆದರೆ ಶೈಕ್ಷಣಿಕವಾಗಿ ಹಿಂದಿರುವ ವಿದ್ಯಾರ್ಥಿಗಳನ್ನು ಮುಖ್ಯವಾಹಿನಿ ಶಿಕ್ಷಣ ವ್ಯವಸ್ಥೆಯತ್ತ ತರಲು ಒಳಗೊಳ್ಳುವ ಶಿಕ್ಷಣ ಕಾರ್ಯಕ್ರಮವನ್ನು ನಾವು ಪರಿಚಯಿಸಿದ್ದೇವೆ. ಈ ಯೋಜನೆಯಲ್ಲಿ ನಮಗೆ NIOS ಸರಿಯಾದ ಜೊತೆಗಾರರಾಗಿದ್ದಾರೆ. ಏಕೆಂದರೆ, NIOS ಮೂಲಕ ದ್ವಿತೀಯ ಪಿಯು ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳು ಯಶಸ್ವಿಯಾಗಿ ಸರ್ಕಾರಿ ವಿಶ್ವವಿದ್ಯಾಲಯಗಳ ಔಪಚಾರಿಕ ಪದವಿ ಶಿಕ್ಷಣಕ್ಕೆ ಸೇರಿಕೊಳ್ಳಬಹುದು " ಎನ್ನುತ್ತಾರೆ ಸಂಸ್ಥೆಯ ಸ್ಥಾಪಕ ನಿರ್ದೇಶಕ, ಶಶಿಧರ ಚಿರಾನ್.
ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶಗಳ ಪರಿಸ್ಥಿತಿ ತುಂಬಾ ನೀರಸವಾಗಿದೆ. ಕಳೆದ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆ ಬರೆದ 6,10,323 ಲಕ್ಷ ವಿದ್ಯಾರ್ಥಿಗಳ ಪೈಕಿ ಕೇವಲ 3,69,474 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ, 4,96,000 ವಿದ್ಯಾರ್ಥಿಗಳು ಮೊದಲ ಬಾರಿಗೆ ಪರೀಕ್ಷೆ ಬರೆದಿದ್ದರೆ, ಸುಮಾರು 82.067 ವಿದ್ಯಾರ್ಥಿಗಳು ಪರೀಕ್ಷೆಗೆ ಮರು ಹಾಜರಾಗಿದ್ದರು. 2015 ರಲ್ಲಿ ರಾಜ್ಯದಲ್ಲಿ ದ್ವಿತೀಯ ಪಿಯುಸಿ ತೇರ್ಗಡೆಯ ಪ್ರಮಾಣ ಶೇಕಡ 60.54 ಮಾತ್ರ.

ಸಾವಿರಾರು ವಿದ್ಯಾರ್ಥಿಗಳು ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುವಂತೆ, ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) 2012-13ರ ಈಚೆಗಿನ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ(KSOU)ದ ಎಲ್ಲಾ ಮುಕ್ತ ಮತ್ತು ದೂರ ಶಿಕ್ಷಣ (ODL) ಕೋರ್ಸ್ ಗಳ ಮಾನ್ಯತೆಯನ್ನು ರದ್ದುಗೊಳಿಸಿದೆ. KSOU ಕೋರ್ಸ್ ಗಳಿಗೆ ಪ್ರವೇಶ ಪಡೆಯಬೇಡಿ ಇದರಿಂದ ನಿಮ್ಮ ವೃತ್ತಿ ಜೀವನಕ್ಕೆ ತೊಂದರೆಯಾಗಬಹುದೆಂದು ವಿದ್ಯಾರ್ಥಿಗಳಿಗೆ ಎಚ್ಚರಿಕೆಯನ್ನೂ ನೀಡಿದೆ. KSOU ಮಾಹಿತಿ ಪತ್ರಿಕೆಯಲ್ಲಿ ಮಾತ್ರ ವಿಶ್ವವಿದ್ಯಾಲಯವು ಪ್ರಾಧಿಕಾರದ ಮಾನ್ಯತೆ ಪಡೆದಿದೆ ಎಂದು ಹೇಳಿರುವುದರಿಂದ ಲಕ್ಷಾಂತರ ಮುಗ್ಧ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಲ್ಲಿ ಶೈಕ್ಷಣಿಕ ಕೋರ್ಸ್ ತೆಗೆದುಕೊಂಡಿದ್ದಾರೆ. ಮಾನ್ಯತೆ ನವೀಕರಣಕ್ಕಾಗಿ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ವಿಧಿಸಿರುವ ಶರತ್ತುಗಳನ್ನು KSOU ಇನ್ನೂ ಪೂರೈಸದೇ ಇರುವುದರಿಂದ, ನವೆಂಬರ್ ತಿಂಗಳವರೆಗೂ ಮಾನ್ಯತೆ ನವೀಕರಣಕ್ಕಾಗಿ ಕಾಯುತ್ತಿರುವ ಪರಿಸ್ಥಿತಿಯೇ ಇತ್ತು.

ವಿಶ್ವದ ಅತೀ ದೊಡ್ಡ ಮುಕ್ತ ಶಾಲಾ ವ್ಯವಸ್ಥೆಯಾಗಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (NIOS) ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಆದರೆ, ಮುಕ್ತ ಶಾಲಾ ವ್ಯವಸ್ಥೆಯನ್ನು ಎಲ್ಲಾ ರಾಜ್ಯಗಳಲ್ಲಿ ಪ್ರಚುರ ಪಡಿಸದೇ ಅಥವಾ ಬಲಪಡಿಸದೇ ಇದ್ದರೆ ಭಾರತದಂತಹ ಬಹುಭಾಷಾ ಮತ್ತು ಬಹು ಸಾಂಸ್ಕೃತಿಕ ದೇಶದಲ್ಲಿ ಎಲ್ಲಾ ಪ್ರದೇಶಗಳ ಅಗತ್ಯಗಳನ್ನು ಪೂರೈಸುವುದು ಕೇವಲ NIOS ನಿಂದ ಸಾಧ್ಯವಿಲ್ಲ. NIOS ವಿದ್ಯಾರ್ಥಿಗಳು ಐಐಟಿ-ಜೆಇಇ, AIEEE ಮತ್ತು PMT (NEET) ನಂತಹ ಅಖಿಲ ಭಾರತ ಪ್ರವೇಶ ಪರೀಕ್ಷೆಗಳು ಹಾಗೂ ಎಲ್ಲಾ ರಾಜ್ಯಗಳ ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ಇತರ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಹರಾಗಿದ್ದಾರೆ.

"ಶಿಕ್ಷಣ ಮಂಡಳಿಯನ್ನು ಅವಲಂಬಿಸಿ, ಅನುತ್ತೀರ್ಣ ವಿದ್ಯಾರ್ಥಿಗಳು ತಮ್ಮ ಬೋರ್ಡ್ ಪರೀಕ್ಷೆಯನ್ನು ತೆಗೆದುಕೊಳ್ಳಲು ಸುಮಾರು ಎಂಟು ತಿಂಗಳುಗಳ ಕಾಲ ನಿರೀಕ್ಷಿಸಬೇಕಾಗುತ್ತದೆ. ಆದರೆ, NIOS ಯಲ್ಲಿರುವ ಆನ್ ಡಿಮಾಂಡ್ ಎಕ್ಸಾಮಿನೇಷನ್ (ODE) ವ್ಯವಸ್ಥೆಯಿಂದಾಗಿ ಅಭ್ಯರ್ಥಿಗಳು ವರ್ಷವಿಡೀ ಯಾವಾಗ ಬೇಕಿದ್ದರೂ ಪರೀಕ್ಷೆ ತೆಗೆದುಕೊಳ್ಳಬಹುದು ಮತ್ತು ಅಭ್ಯರ್ಥಿಗಳು ಮೂರು ಅಥವಾ ಹೆಚ್ಚು ವಿಷಯಗಳ ಪರೀಕ್ಷೆ ತೆಗೆದುಕೊಳ್ಳಬಹುದು. ಇದು ಮುಕ್ತ ಮತ್ತು ದೂರ ಶಿಕ್ಷಣದ ಕಾರ್ಯಸಾಧ್ಯತೆ, ಅನುಕೂಲತೆ ಮತ್ತು ನಮ್ಯತೆಯ ದಿಕ್ಕಿನಲ್ಲಿ ಒಂದು ದೊಡ್ಡ ಹೆಜ್ಜೆ, " ಎನ್ನುತ್ತಾರೆ NIOS ಪ್ರಾದೇಶಿಕ ನಿರ್ದೇಶಕರಾದ ಎಸ್ ಚಂದ್ರಶೇಖರ್.

NIOS ಆಶ್ರಯದಲ್ಲಿ ಆರಂಭಿಸಲಾಗಿರುವ ನ್ಯೂ ಶೋರ್ಸ್ '' ಒಳಗೊಳ್ಳುವ ಶಿಕ್ಷಣ ಕಾರ್ಯಕ್ರಮ'' ಈ ವಿದ್ಯಾರ್ಥಿಗಳಿಗೆ ವಿಶ್ವದರ್ಜೆಯ ಶಿಕ್ಷಣ, ವಿದೇಶಿ ಭಾಷಾ ತರಬೇತಿ, ಅಂತಾರಾಷ್ಟ್ರೀಯ ಇಂಟರ್ನ್ ಶಿಪ್ ಅವಕಾಶ, ಅಂತಾರಾಷ್ಟ್ರೀಯ ಅಧ್ಯಯನ ಪ್ರವಾಸದ ಮೂಲಕ ವ್ಯಾಪಾರ ಮತ್ತು ಕಲೆಯನ್ನು ಅಂತಾರಾಷ್ಟ್ರೀಯ ಸಂದರ್ಭದಲ್ಲಿ ನೋಡುವ ಅವಕಾಶ ಕಲ್ಪಿಸುವ ಮೂಲಕ ಹಾಗೂ ಅಂತಾರಾಷ್ಟ್ರೀಯ ಮಾನ್ಯತೆ ಪಡೆಯುವ ಸಲುವಾಗಿ ಹಲವು ರೀತಿಯ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಶಿಕ್ಷಣದ ಗುಣಮಟ್ಟವನ್ನು ಒಂದು ಹಂತ ಮೇಲಕ್ಕೆ ತೆಗೆದುಕೊಂಡು ಹೋಗಿದೆ.

ನ್ಯೂ ಶೋರ್ಸ್ ಇಂಟರ್ನ್ಯಾಷನಲ್ ಕಾಲೇಜ್ ಮತ್ತು ಅದರ ಪ್ರಶಸ್ತಿ ಪುರಸ್ಕೃತ ಪದವಿ ಶಿಕ್ಷಣದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿ ಲಭ್ಯವಿದೆ. http://www.newshores.in

SCROLL FOR NEXT