ಸಾಂದರ್ಭಿಕ ಚಿತ್ರ 
ರಾಜ್ಯ

ಅಪಹರಣಕ್ಕೆ ಒಳಗಾಗಿದ್ದ ವೈದ್ಯೆ ರಕ್ಷಣೆ: ಇಬ್ಬರ ಬಂಧನ

ಅಪಹರಣಕ್ಕೆ ಒಳಗಾಗಿದ್ದ ವೈದ್ಯೆಯನ್ನು ರಕ್ಷಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬುಧವಾರ...

ಬೆಂಗಳೂರು: ಅಪಹರಣಕ್ಕೆ ಒಳಗಾಗಿದ್ದ ವೈದ್ಯೆಯನ್ನು ರಕ್ಷಿಸಿದ ಪೊಲೀಸರು ಆ ಸಂಬಂಧ ಇಬ್ಬರು ಆರೋಪಿಗಳನ್ನು ಬುಧವಾರ ಬಂಧಿಸಿದ್ದಾರೆ. 
ಪೀಣ್ಯದ 8ನೇ ಹಂತದಿಂದ ಸಂಜೆ 6.30ಕ್ಕೆ ಭಟ್ಕಳ ಮೂಲದ ಡಾ.ಉಮಾ(52) ಅವರನ್ನು ಇಬ್ಬರು ಆರೋಪಿಗಳು ಅಪಹರಿಸಿದ್ದರು. ಆರೋಪಿಗಳಿಂದ ಉಮಾ ಅವರನ್ನು ರಕ್ಷಿಸಿದ ಪೊಲೀಸರು, ಶ್ರೀರಾಮಪುರದ ಸರವಣ ಮತ್ತು ಪ್ರಕಾಶ್ ಎಂಬುವವರನ್ನು ಬಂಧಿಸಿದ್ದಾರೆ. 
ಉಮಾ ಕೊಣನಕುಂಟೆಯಲ್ಲಿ ಆಸ್ಪತ್ರೆ ತೆರೆದಿದ್ದರು. ಅವರನ್ನು ಮಧ್ಯಾಹ್ನ ಆಟೋದಲ್ಲಿ ಅಪಹರಿಸಿ ಶ್ರೀರಾಮಪುರದ ಮನೆಯೊಂದರಲ್ಲಿ ಬಂಧನದಲ್ಲಿಡಲಾಯಿತು. ಅಷ್ಟೇ ಅಲ್ಲದೇ, ಉಮಾ ಅವರ ಪುತ್ರ ಪವನ್ ಗೆ ಕರೆ ಮಾಡಿದ ಆರೋಪಿಗಳು, ತಾಯಿಯನ್ನು ಬಿಡುಗಡೆ ಮಾಡಲು ರು.20 ಲಕ್ಷ ನೀಡುವಂತೆ ಬೇಡಿಕೆ ಇಟ್ಟು. ತಮ್ಮ ಖಾತೆಗೆ ಹಣ ಜಮಾ ಮಾಡಿ ಎಂದು ಹೇಳಿದ್ದರು. 
ಅಪಹರಣ ಬಗ್ಗೆ ಪೀಣ್ಯ ಠಾಣೆಯಲ್ಲಿ ಪವನ್ ದೂರು ದಾಖಲಿಸಿದ್ದರು. ಆರೋಪಿಗಳ ಖಾತೆಗೆ 20 ಸಾವಿರ ಹಾಗೂ 8 ಸಾವಿರ ಹಣವನ್ನು ಪ್ರತ್ಯೇಕವಾಗಿ ಜಮಾ ಮಾಡಲಾಯಿತು. ಖಾತೆ ವಿವರ ಪಡೆದ ಪೊಲೀಸರು ಉಮಾ ಅವರನ್ನು ರಕ್ಷಿಸಿದ್ದಾರೆ. ವೈದ್ಯೆ ಉಮಾ ಹಣದ ವಿಚಾರದಲ್ಲಿ ಹಲವಾರು ರೋಗಿಗಳಿಗೆ ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!

ಕನ್ನಡಿಗರ ಆತ್ಮೀಯತೆ, ವಾತ್ಸಲ್ಯ, ದಯೆ ನಿಜಕ್ಕೂ ನನ್ನ....: ಬೆಂಗಳೂರು ಭೇಟಿ ಬಗ್ಗೆ ಅಭಿಜೀತ್ ದೀಪ್ಕೆ ಭಾವುಕ ಪೋಸ್ಟ್!

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಧಾರವಾಡ: ಕಾರು - ಕ್ಯಾಂಟರ್ ಮುಖಾಮುಖಿ ಡಿಕ್ಕಿ; ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವು!

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ