ಮಂಗಳೂರಿನಲ್ಲಿ ಆಯೋಜಿಸಲಾಗಿರುವ ಮಾವು ಮೇಳದಲ್ಲಿ ಮಾವು ಖರೀದಿಸುತ್ತಿರುವ ಗ್ರಾಹಕರು
ಬೆಂಗಳೂರು: ವರ್ಷಕೊಮ್ಮೆ ಬರುವ ಹಣ್ಣಿನ ರಾಜ ಮಾವು ರಾಜ್ಯದಲ್ಲಿ ತನ್ನ ಸುವಾಸನೆ ಬೀರುತ್ತಿದ್ದಾನೆ. ಈ ಸುವಾಸನೆ ಹೊರ ರಾಜ್ಯಕ್ಕೂ ತಲುಪಿದ್ದು, ಬೇಡಿಕೆ ಹೆಚ್ಚಾಗಿದೆ.
ಕೋಲಾರ, ಚಿಕ್ಕಬಳ್ಳಾಪುರ, ಧಾರವಾಡ, ರಾಮನಗರ ಸೇರಿ ರಾಜ್ಯದ 16 ಜಿಲ್ಲೆಗಳಲ್ಲಿ ಸುಮಾರು 1.7 ಲಕ್ಷ ಹೆಕ್ಟೇರ್ ಗಳಲ್ಲಿ ಮಾವು ಬೆಳೆಯಲಾಗಿದೆ. ರಾಜ್ಯದ ಮಾವಿಗೆ ಹೊರ ರಾಜ್ಯಗಳಿಂದ ಬೇಡಿಕೆ ಹೆಚ್ಚಾಗುತ್ತಿದ್ದು, ಮಾವನ್ನು ರಫ್ತು ಮಾಡಲಾಗುತ್ತಿದೆ.
ಗೋವಾದಲ್ಲಿ ಕರ್ನಾಟಕದ ಮಾವು ಮೇಳ ನಡೆಯುತ್ತಿದ್ದು, ಜನರು ಮುಗಿಬಿದ್ದು ಮಾವು ಖರೀದಿಸುತ್ತಿದ್ದಾರೆ. ಈ ಕುರಿತು ಮಾತನಾಡಿದ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ಕಾರ್ಪೋರೇಷನ್ ಲಿಮಿಟೆಡ್ ನ ಅಧ್ಯಕ್ಷೆ ಕಮಲಾಕ್ಷಿ ರಾಜಣ್ಣ ಅವರು, ಗೋವಾ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೇಕರ್ ಅವರು ಮಾವು ಮೇಳವನ್ನು ಉದ್ಘಾಟಿಸಿದ್ದಾರೆ. ಅಲ್ಲಿ ಮಾವಿಗೆ ಹೆಚ್ಚು ಬೇಡಿಕೆ ಬರುತ್ತಿದ್ದು, ಇತರೆ ರಾಜ್ಯಗಳಿಂದಲೂ ಬೇಡಿಕೆ ಹೆಚ್ಚಾಗುತ್ತಿದೆ ಎಂದಿದ್ದಾರೆ.
ಗೋವಾದಲ್ಲಿ ನಡೆಯುತ್ತಿರುವ ಮಾವು ಮೇಳದಲ್ಲಿ ಸುಮಾರು 1,500 ಕೆಜಿ ಮಾವನ್ನು ಮಾರಾಟಕ್ಕಿಡಲಾಗಿದ್ದು, ರೈತರೇ ನೇರವಾಗಿ ಮಾರಾಟ ಮಾಡುವ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics