ಮೆಟ್ರೋ ರೈಲಿಗಾಗಿ ಕಾಯುತ್ತಿರುವ ಪ್ರಯಾಣಿಕರು(ಸಂಗ್ರಹ ಚಿತ್ರ) 
ರಾಜ್ಯ

ನಮ್ಮ ಮೆಟ್ರೋದಿಂದ ಕೋರ್ಟ್ ಗಳ ನಡುವೆ ಓಡಾಟ ಸುಲಭ: ವಕೀಲರಲ್ಲಿ ಅತೀವ ಸಂತಸ

ನಾಲ್ಕು ವಾರಗಳ ರಜೆ ಬಳಿಕ ಕೋರ್ಟ್ ಗಳು ಪುನಾರಂಭಗೊಂಡಿದ್ದು ಈ ಬಾರಿ ವಕೀಲರು ಅತ್ಯಂತ ಸಂತಸಗೊಂಡಿದ್ದಾರೆ. ಇದಕ್ಕೆ ಕಾರಣವಾಗಿರುವುದು ನಮ್ಮ ಮೆಟ್ರೋ.

ಬೆಂಗಳೂರು: ನಾಲ್ಕು ವಾರಗಳ ರಜೆ ಬಳಿಕ ಕೋರ್ಟ್ ಗಳು ಪುನಾರಂಭಗೊಂಡಿದ್ದು ಈ ಬಾರಿ ವಕೀಲರು ಅತ್ಯಂತ ಸಂತಸಗೊಂಡಿದ್ದಾರೆ. ಇದಕ್ಕೆ ಕಾರಣವಾಗಿರುವುದು ನಮ್ಮ ಮೆಟ್ರೋ.  
ನಾಲ್ಕು ಕೋರ್ಟ್ ಗಳ ಪೈಕಿ ಮೂರು ಕೋರ್ಟ್ ಗಳಿಗೆ ಮೆಟ್ರೋ ಸಂಪರ್ಕವಿದ್ದು, ವಕೀಲರು ಒಂದು ಕೋರ್ಟ್ ನಿಂದ ಮತ್ತೊಂದು ಕೋರ್ಟ್ ಗೆ ಮೆಟ್ರೋ ಮೂಲಕ ಸಂಚರಿಸಲು ಸಾಧ್ಯವಾಗಲಿದೆ. ಹೈಕೋರ್ಟ್ ನ ಮುಂಭಾಗದಲ್ಲಿ ವಿಧಾನಸೌಧ ಮೆಟ್ರೋ ನಿಲ್ದಾಣ,  ಸಿಟಿ ಸಿವಿಲ್ ಕೋರ್ಟ್ ನ ಸಮೀಪದಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಮೆಟ್ರೋ ರೈಲು ನಿಲ್ದಾಣ, ಮೆಯೋ ಹಾಲ್ ನ ಸಿವಿಲ್ ಹಾಗೂ ಸೆಷನ್ಸ್ ನ್ಯಾಯಾಲಯದ ಬಳಿ ಎಂಜಿ ರಸ್ತೆ ಮೆಟ್ರೋ ನಿಲ್ದಾಣ ಇರುವುದರಿಂದ ವಕೀಲರಿಗೆ ಸಂಚಾರ ಸುಲಭವಾಗಲಿದೆ. ಹೈಕೋರ್ಟ್ ನಿಂದ ಕಾವೇರಿ ಭವನದ ಬಳಿ ಇರುವ ಸೆಷನ್ಸ್ ಕೋರ್ಟ್ ಗೆ ಹೋಗಲು ನನಗೆ ಕೇವಲ ಅರ್ಧ ನಿಮಿಷಗಳಷ್ಟು ಸಮಯ ತೆಗೆದುಕೊಳ್ಳಲಿದೆ. 
ಮೆಟ್ರೋ ಪ್ರಾರಂಭವಾಗುವುದಕ್ಕೂ ಮುನ್ನ ಕಾರು ನಿಲುಗಡೆಗಾಗಿಯೇ ಹೆಚ್ಚಿನ ಸಮಯ ವ್ಯರ್ಥವಾಗುತ್ತಿತ್ತು. ಆದರೆ ಈಗ ಕಾರಿನಲ್ಲಿ ಹೋಗುವ ಅಗತ್ಯವೇ ಇಲ್ಲ ಎಂದು ಅಡ್ವೊಕೆಟ್ ಬಿ ಬಾಲಕೃಷ್ಣ ಹೇಳಿದ್ದಾರೆ. ಅತ್ತಿಗುಪ್ಪೆ ನಿವಾಸಿಯಾಗಿರುವ ವಕೀಲ ಬಿ.ಬಾಲಕೃಷ್ಣ, ಮೇ.2 ರಿಂದ  ಮೆಟ್ರೋ ರೈಲಿನಲ್ಲಿ ಸಂಚರಿಸಲು ಪ್ರಾರಂಭಿಸಿದ್ದು, ಮನೆ ಹತ್ತಿರದ ಮೆಟ್ರೋ ನಿಲ್ದಾಣದಿಂದ ನೇರವಾಗಿ ಹೈಕೋರ್ಟ್ ಗೆ ಮೆಟ್ರೋ ಸಂಪರ್ಕ ವಿರುವುದರ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿದ್ದು. ಇನ್ನು ಮನೆ ಬಳಿ ಮೆಟ್ರೋ ಸಂಪರ್ಕ ಇಲ್ಲದ ವಕೀಲರೂ ಸಹ ಕೋರ್ಟ್ ಗಳಿಗೆ ಸಂಚರಿಸಲು ಮೆಟ್ರೋ ರೈಲನ್ನೇ ಬಳಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಹೆನ್ರಿ ಕಗನ್, ಕೆನ್ಸೊ ಸೊವೈಗೆ 2026ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ

'ನಾನು ಕ್ಯಾಬ್‌ನಲ್ಲಿ ಓಡಾಡೋ ಹುಡುಗಿ ಕಣ್ರೋ.. ಹೋಗ್ಲಿ ಪಾಪ ಅಂತಾ ಬಸ್`ನಲ್ಲಿ ಬಂದೆ': MTC ಬಸ್‌ನಲ್ಲಿ ಕುಡಿದ ಮತ್ತಿನಲ್ಲಿ ಯುವತಿ ರಂಪಾಟ, Video ವೈರಲ್

ಅಮೆರಿಕ ಸೇನೆಯ ಮಾಜಿ ಮೇಜರ್‌ಗೆ ಶೂಟ್ ಮಾಡುವ ಮೂಲಕ ಮರಣದಂಡನೆ ಶಿಕ್ಷೆ: 65 ವರ್ಷಗಳಲ್ಲಿ ಇದೇ ಮೊದಲು!