ರಾಜ್ಯ

ತ್ಯಾಜ್ಯ ಸಾಗಾಟದಲ್ಲೂ ಹಣ ಲಪಟಾಯಿಸುತ್ತಿರುವ ಅಧಿಕಾರಿಗಳು: ಶಾಸಕ ಮುನಿರತ್ನ

Manjula VN

ಬೆಂಗಳೂರು: ತ್ಯಾಜ್ಯ ಸಾಗಾಟದ ವೆಚ್ಚವನ್ನು ಉಳಿಸುವ ಸಲುವಾಗಿ ಗುತ್ತಿಗೆದಾರರು ನಾಗರೀಕ ಪ್ರದೇಶಗಳು ಹಾಗೂ ಮೇಲ್ಸೇತುವೆಗಳ ಕೆಳಗೆ ಕಸವನ್ನು ಹಾಕಿ ಬೆಂಕಿ ಹಚ್ಚುತ್ತಿದ್ದಾರೆಂದು ರಾಜರಾಜೇಶ್ವರಿನಗರದ ಶಾಸಕ ಮುನಿರತ್ನ ಅವರು ಮಂಗಳವಾರ ಆರೋಪ ವ್ಯಕ್ತಪಡಿಸಿದ್ದಾರೆ.

ಈ ಕುರಿತಂತೆ ನಿನ್ನೆ ನಡೆದ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಮಾತನಾಡಿರುವ ಅವರು,  ತ್ಯಾಜ್ಯ ಸಾಗಾಟದ ವೆಚ್ಚವನ್ನು ಉಳಿಸುವ ಸಲುವಾಗಿ ಗುತ್ತಿಗೆದಾರರು ನಾಗರೀಕ ಪ್ರದೇಶಗಳು ಹಾಗೂ ಮೇಲ್ಸೇತುವೆಗಳ ಕೆಳಗೆ ಕಸವನ್ನು ಹಾಕಿ ಬೆಂಕಿ ಹಚ್ಚುತ್ತಿದ್ದಾರೆ. ಮೇಲ್ಸೇತುವೆಗಳ ಕೆಳಗೆ 10 ಲಾರಿಗಳ ಕಸ ಸುರಿದು ಬೆಂಕಿ ಹಚ್ಚಿದರೆ, ಸುಟ್ಟ ನಂತರ ಅದು ಬೂದಿಯಾಗಿ 1 ಲಾರಿಗೆ ತುಂಬುತ್ತದೆ. ಇದರಂತೆ 10 ಲಾರಿಗಳ ಕಸದ ಸಾಗಾಟಕ್ಕೆ ಬಿಲ್ ಹಾಕುವ ಅಧಿಕಾರಿಗಳು ಉಳಿದ ಹಣವನ್ನು ಲಪಟಾಯಿಸುತ್ತಿದ್ದಾರೆಂದು ಆರೋಪಿಸಿದ್ದಾರೆ.

ಇನ್ನು ಗುತ್ತಿಗೆದಾರರು ಕಸಕ್ಕೆ ಪ್ರತಿ ದಿನ ಬೆಂಕಿ ಹಾಕುವುದಿರಂದ ಅಲ್ಲಿನ ಸ್ಥಳೀಯ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಇದರಂತೆ ಆಗಾಗ ಅಗ್ನಿ ಶಾಮಕ ದಳದ ವಾಹನಗಳು ಬೆಂಕಿ ನಂದಿಸುವ ಕಾರ್ಯಗಳನ್ನು ಮಾಡುತ್ತಿರುತ್ತದೆ. ಬೆಂಕಿಯಿಂದಾಗಿ ಮೇಲ್ಸೇತುವೆಗಳ ಪಿಲ್ಲರ್ ಗಳಿಗೆ ಅಳವಡಿಸಿರುವ ರಬ್ಬರ್ ಜಾಯಿಂಟ್ ಗಳೂ ಕೂಡ ಕರಗುವ ಸಂಭವವಿದ್ದು, ಇದರಿಂದ ಸೇತುವೆಗಳು ಆಪಾಯ ಎದುರಿಸುತ್ತಿವೆ ಎಂದು ಹೇಳಿದ್ದಾರೆ.

SCROLL FOR NEXT