ರಾಜ್ಯ

ವೈದ್ಯರ ನಿರ್ಲಕ್ಷ್ಯದಿಂದ ರೋಗಿ ಸಾವು: ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ 23 ಲಕ್ಷ ರೂ.ದಂಡ

Sumana Upadhyaya
ಬೆಂಗಳೂರು: ನಲವತ್ತೈದು ವರ್ಷದ ಶಾಲೆಯ ಪ್ರಾಂಶುಪಾಲರ ಪತಿ ಮತ್ತು ಮಕ್ಕಳಿಗೆ 23.54 ಲಕ್ಷ ರೂಪಾಯಿ ಪರಿಹಾರ ನೀಡಿ ಎಂದು ಶೇಷಾದ್ರಿಪುರಂನಲ್ಲಿರುವ ಫೋರ್ಟಿಸ್ ಆಸ್ಪತ್ರೆಯ ಇಬ್ಬರು ಸರ್ಜನ್ ಗಳು ಮತ್ತು ಅರಿವಳಿಕೆ ತಜ್ಞರಗೆ ದಂಡ ವಿಧಿಸಿ ಕರ್ನಾಟಕ ರಾಜ್ಯ ಗ್ರಾಹಕ ವಿವಾದಗಳ ಆಯೋಗ ಆದೇಶ ನೀಡಿದೆ.
ಆಗಿದ್ದೇನು?: ಕೆ. ವಿದ್ಯಾ ಪ್ರಸಾದ್ ಎಂಬುವವರು ಫೆಬ್ರವರಿ 11, 2010ರಲ್ಲಿ ಶೇಷಾದ್ರಿಪುರಂನ ಫೋರ್ಟಿಸ್ ಆಸ್ಪತ್ರೆಗೆ ಸರ್ಜರಿ ಮಾಡಿಸಿಕೊಳ್ಳಲೆಂದು ದಾಖಲಾಗಿದ್ದರು. ಆದರೆ ವೈದ್ಯರು ಚಿಕಿತ್ಸೆ ನೀಡುವಾಗ ಬೇಜವಾಬ್ದಾರಿಯಾಗಿ ವರ್ತಿಸಿದ್ದರಿಂದ ವಿದ್ಯಾ ಪ್ರಸಾದ್ ಮೃತಪಟ್ಟಿದ್ದರು. 
ಇದರ ವಿರುದ್ಧ ಹೈಕೋರ್ಟ್ ನಲ್ಲಿ ವಕೀಲರಾಗಿರುವ ವಿದ್ಯಾ ಪ್ರಸಾದ್ ಪತಿ ಹೆಚ್.ಎನ್.ಎಮ್ ಪ್ರಸಾದ್ ಮತ್ತು ಅವರ ಮಕ್ಕಳು ದೂರು ನೀಡಿದ್ದರು. ಅವರು ತಮ್ಮ ದೂರಿನಲ್ಲಿ, ತಮ್ಮ ಪತ್ನಿ ವಿದ್ಯಾರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಆರೋಗ್ಯವಾಗಿದ್ದರು. ಆದರೆ ವೈದ್ಯರ ನಿರ್ಲಕ್ಷತನದಿಂದಾಗಿ ಮೃತಪಟ್ಟಿದ್ದಾರೆ. ಪ್ರಾಥಮಿಕ ವರದಿಯಲ್ಲಿ ವಿದ್ಯಾರಿಗೆ ಹೃದಯದ ಸಮಸ್ಯೆ ಇದೆ ಎಂದು ಹೇಳಿದರೂ ಕೂಡ ಅವರನ್ನು ಯಾವುದೇ ಹೃದ್ರೋಗ ತಜ್ಞರು ಆಸ್ಪತ್ರೆಯಲ್ಲಿ ತಪಾಸಣೆ ನಡೆಸಲಿಲ್ಲ ಎಂದು ಆರೋಪಿಸಿದ್ದಾರೆ.
ಆಸ್ಪತ್ರಯಲ್ಲಿ ಹೃದ್ರೋಗ ನಿಗಾ ಕೇಂದ್ರವಿಲ್ಲ, ವಿದ್ಯಾರ ಸಾವಿನ ನಂತರ ಕೇಂದ್ರವನ್ನು ತೆರೆಯಲಾಯಿತು. ವಿದ್ಯಾರ ಬಿಪಿ ಮಟ್ಟ ಕಡಿಮೆಯಾದಾಗ ಆಸ್ಪತ್ರೆಯಲ್ಲಿ ರಕ್ತ ನೀಡಲು ಇರಲಿಲ್ಲ. ತುರ್ತು ಸಂದರ್ಭಕ್ಕೆಂದು ರಕ್ತವನ್ನು ಸಂಗ್ರಹಿಸಿಟ್ಟಿರಲಿಲ್ಲ ಎಂದು ಕೂಡ ಪ್ರಸಾದ್ ಆರೋಪಿಸಿದ್ದರು.
ಈ ಬಗ್ಗೆ ತನಿಖೆ ನಡೆಸಿದ ನ್ಯಾಯಾಲಯ ವೈದ್ಯರ ನಿರ್ಲಕ್ಷ್ಯತನದಿಂದಾಗಿ ವಿದ್ಯಾ ಪ್ರಸಾದ್ ಮೃತಪಟ್ಟಿದ್ದು ಪರಿಹಾರ ಹಣವನ್ನು 8 ವಾರಗಳೊಳಗೆ ನೀಡಬೇಕೆಂದು ಆದೇಶ ನೀಡಿದೆ.
SCROLL FOR NEXT