ಸಾಂದರ್ಭಿಕ ಚಿತ್ರ 
ರಾಜ್ಯ

ಜೈಲಿನಿಂದ ಪರಾರಿಯಾಗಿದ್ದ ಕೈದಿಯನ್ನು 12 ಗಂಟೆಗಳಲ್ಲೇ ಬಂಧಿಸಿದ ಕಲಬುರಗಿ ಪೊಲೀಸರು

ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿಯೊಬ್ಬ ಜೈಲಿನಿಂದ ತಪ್ಪಿಸಿಕೊಂಡ 12 ಗಂಟೆಗಳಲ್ಲೇ ಕಲಬುರಗಿ ಪೊಲೀಸರಿಂದ....

ಕಲಬುರಗಿ; ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿಯೊಬ್ಬ ಜೈಲಿನಿಂದ ತಪ್ಪಿಸಿಕೊಂಡ 12 ಗಂಟೆಗಳಲ್ಲೇ ಕಲಬುರಗಿ ಪೊಲೀಸರಿಂದ ಬಂಧಿಸಲ್ಪಟ್ಟಿದ್ದಾನೆ.

ಕಲಬುರಗಿ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಮಹೇಶ್ ರಾವ್ ಗುರುವಾರ ಬೆಳಗ್ಗೆ ಜೈಲಿನಿಂದ ಪರಾರಿಯಾಗಿದ್ದ. ಜೈಲಿನ ತೋಟಗಾರಿಕಾ ಇಲಾಖೆ ಗಾರ್ಡನ್ ನಲ್ಲಿ ಪ್ರತಿದಿನ ಕೆಲಸ ಇರುತ್ತದೆ. ಗುರುವಾರ ಬೆಳಗ್ಗೆ ಕೂಡ 18 ಕೈದಿಗಳು ಕೆಲಸಕ್ಕೆ ತೆರಳಿದ್ದರು ಸಂಜೆ 5.30 ವೇಳೆಗೆ ಉಳಿದ ಎಲ್ಲಾ ಕೈದಿಗಳು ಮುಖ್ಯ ಗೇಟ್  ಬಳಿ ಬಂದಿದ್ದಾರೆ, ಸ್ವಲ್ಪ ಹೊತ್ತು ಹೊರಗೆ ಹೋಗಿ ಬರುವುದಾಗಿ ಹೇಳಿ ಹೋರಟಿದ್ದಾನೆ. ಆದರೆ ಎಷ್ಟೇ ಹೊತ್ತಾದರೂ ವಾಪಸ್ ಬರದಿದ್ದಾಗ ಎಲ್ಲೆಡೆ ಹುಡುಕಿ ಜೈಲಿನ ಸೂಪರಿಂಟೆಂಡ್ ಅವರಿಗೆ ವಿಷಯ ತಿಳಿಸಿದ್ದಾರೆ.

ಸಂಬಂಧ ಕಲಬುರಗಿ ಕೇಂದ್ರ ಕಾರಾಗೃಹದ ಸೂಪರಿಂಡೆಂಟ್ ಸೋಮಶೇಖರ್ ಗುರುವಾರ ರಾತ್ರಿ 10 ಗಂಟೆಗೆ ಫರ್ತಾಬಾದ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎಂದು ಕಲಬುರಗಿ ಎಸ್ಪಿ ಶಶಿಕುಮಾರ್ ಹೇಳಿದ್ದಾರೆ.

ಕೂಡಲೇ ಕಾರ್ಯಾಚರಣೆ ನಡೆಸಿದ ಪೊಲೀಸರು ಆತನನ್ನು ತೆಲಂಗಾಣದ ನಾರಾಯಣಪೇಟೆಯ ಮೆಹಬೂಬ ನಗರದಲ್ಲಿ ಬಂಧಿಸಿದ್ದಾರೆ. ತೆಲಂಗಾಣ ಮಹೇಶ್ ಸಂಬಂಧಿಯ ಸ್ಥಳವಾಗಿದ್ದು, ಈ ಸುಳಿವಿನ ಆಧಾರದ ಮೇಲೆ ಆತನನ್ನು ಪೊಲೀಸರು ಬಂಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವೈಟ್​ಫೀಲ್ಡ್ ಠಾಣೆಯಲ್ಲ 'ಡಾರ್ಕ್' ಫೀಲ್ಡ್ ಠಾಣೆ: ಹಿಂದೂ ಕಾರ್ಯಕರ್ತನ ಬಂಧನ ಸಂಬಂಧ ACP, DCP ವಿರುದ್ದ ಜಡ್ಜ್ ಗರಂ, Video!

ಹಾಸನದಲ್ಲಿ ಜಿಲ್ಲಾಧಿಕಾರಿ ದಬ್ಬಾಳಿಕೆ: ಅಧಿಕಾರಿಗಳು ಕೆಲಸ ಮಾಡುವುದಕ್ಕೆ ಆಗ್ತಿಲ್ಲ, ರಿಪೇರಿ ಮಾಡೋದು ಗೊತ್ತಿದೆ- ಹೆಚ್ ಡಿ ರೇವಣ್ಣ ಮತ್ತೆ ಗರಂ!

CM ಡಿಕೆಶಿ ಬಾಲ್ಯ ಸ್ನೇಹಿತ, ನಟ ರವಿಚಂದ್ರನ್‌ಗೆ MLC ಸ್ಥಾನ? ರಾಜಕೀಯ ಅಖಾಡಕ್ಕೆ 'ಕ್ರೇಜಿ ಸ್ಟಾರ್' ಎಂಟ್ರಿ ಸಾಧ್ಯತೆ

ಭಾರತದ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗ! ಆರ್. ಅಶ್ವಿನ್ ಆಯ್ಕೆ ಮಾಡಿದ್ದು ಯಾರನ್ನ ಗೊತ್ತಾ?

ಮಳೆ ಕೊರತೆ ನೀಗಿಸಲು ರಾಜ್ಯ ಸರ್ಕಾರದ ಮಾಸ್ಟರ್ ಪ್ಲ್ಯಾನ್; Cloud seeding ಗೆ ಎರಡು ಸಮಿತಿಗಳ ರಚನೆ