ಚಿಕ್ಕಮಗಳೂರು: ಮಾವೋವಾದಿ ಸಿಪಿಐ ಸಂಘಟನೆಯ ನಾಲ್ವರು ನಕ್ಸಲರು ಸೋಮವಾರ ನಕ್ಸಲ್ ಪ್ಯಾಕೇಜ್ ನಡಿ ಪೋಲಿಸರಿಗೆ ಶರಣಾಗಿದ್ದು, ಪಶ್ಚಿಮ ಘಟ್ಟದಲ್ಲಿ ಕಳೆದ ಎರಡು ದಶಕಗಳಿಂದ ಸಕ್ರಿಯರಾಗಿದ್ದ ರಾಯಚೂರು ಮೂಲದ ರಿಜ್ವಾನ್ ಬೇಗಂ, ಚಿಕ್ಕಮಗಳೂರು ಜಿಲ್ಲೆಯ ರಾಜು, ಭಾರತಿ ಹಾಗೂ ನೀಲಗುಳಿ ಪದ್ಮನಾಭ್ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಶಾಂತಿಗಾಗಿ ನಾಗರಿಕ ವೇದಿಕೆ ಯಶಸ್ವಿಯಾಗಿದೆ.
ಇಂದು ಪತ್ರಕರ್ತೆ ಗೌರಿ ಲಂಕೇಶ್, ಎಕೆ ಸುಬ್ಬಯ್ಯ ಹಾಗೂ ಚಿಕ್ಕಮಗಳೂರು ಜಿಲ್ಲಾಧಿಕಾರಿ ಸತ್ಯವತಿ ನೇತೃತ್ವದಲ್ಲಿ ಚಿಕ್ಕಮಗಳೂರು ಜಿಲ್ಲಾ ಕಮಿಟಿ ಮುಂದೆ ನಾಲ್ವರು ಶರಣಾಗಿದ್ದಾರೆ.
ನಾಲ್ವರು ನಕ್ಸಲೀಯರು ಗೌರಿ ಲಂಕೇಶ್ ಜೊತೆ ಇಂದು ಮಧ್ಯಾಹ್ನ ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದರು. ನಕ್ಸಲೀಯರಾದ ಪದ್ಮನಾಭ, ರಾಜು, ಭಾರತಿ ಹಾಗೂ ರಿಜ್ವಾನ್ ಬೇಗಂ ನಕ್ಸಲ್ ಪ್ಯಾಕೇಜ್ ಅಡಿಯಲ್ಲಿ ಚಿಕ್ಕಮಗಳೂರಿನಲ್ಲಿ ನಾಗರಿಕ ಸಮಿತಿ ಸಮ್ಮುಖದಲ್ಲಿ ಶರಣಾದರು. ಈ ಸಂದರ್ಭದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾ ಮಲೈ,ಚಿಕ್ಕಮಗಳೂರು ಜಿಲ್ಲಾಧಿಕಾರಿ ಸತ್ಯವತಿ, ವಕೀಲ ಎಕೆ ಸುಬ್ಬಯ್ಯ ಹಾಜರಿದ್ದರು.
ನೀಲುವಳಿ ಪದ್ಮನಾಭ್ ಹಾಗೂ ಭಾರತಿ ಮದುವೆಯಾಗಿದ್ದು, ರಿಜ್ವಾನ್ ಬೇಗಂ ಅಲಿಯಾಸ್ ಕಲ್ಪನಾ ರಾಜುನೊಂದಿಗೆ ವಿವಾಹವಾಗಿದ್ದಾರೆ. ಸರ್ಕಾರ ಕೊಡುವ ನೆರವಿನಿಂದ ನಾವು ಬದುಕುವುದಿಲ್ಲ. ಬದಲಿಗೆ, ಸ್ವಂತ ದುಡಿಮೆ ಮೇಲೆ ಬದುಕುತ್ತೇವೆ ಎಂದು ಘೋಷಿಸಿದ್ದಾರೆ.
2014ರಲ್ಲಿ ಸಿರಿಮನೆ ನಾಗರಾಜ್ ಹಾಗೂ ನೂರ್ ಅವರು ಶರಣಾಗತರಾಗಿ ಸಮಾಜದ ಮುಖ್ಯವಾಹಿನಿ ಜತೆ ಸೇರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics