ಸಾಂದರ್ಭಿಕ ಚಿತ್ರ 
ರಾಜ್ಯ

ನೋಟ್ ನಿಷೇಧ: ಬ್ಯಾಂಕ್ ಕ್ಯೂನಲ್ಲಿ ಹಣ ಕಳೆದಕೊಂಡ ಮಹಿಳೆ ಆತ್ಮಹತ್ಯೆಗೆ ಶರಣು

ಬ್ಯಾಂಕ್ ಗೆ ಹಣ ಜಮೆ ಮಾಡುವ ವೇಳೆ ತಮ್ಮ ಬಳಿ ಇದ್ದ 15 ಸಾವಿರ ರುಪಾಯಿ ಕಳೆದುಕೊಂಡ ಮಹಿಳೆಯೊಬ್ಬರು ಆತ್ಮಹತ್ಯೆಗೆ...

ಚಿಕ್ಕಬಳ್ಳಾಪುರ: ಬ್ಯಾಂಕ್ ಗೆ ಹಣ ಜಮೆ ಮಾಡುವ ವೇಳೆ ತಮ್ಮ ಬಳಿ ಇದ್ದ 15 ಸಾವಿರ ರುಪಾಯಿ ಕಳೆದುಕೊಂಡ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಸೋಮವಾರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.
ಆತ್ಮಹತ್ಯೆಗೆ ಮಾಡಿಕೊಂಡ ಮಹಿಳೆ ಗುಡಿಬಂಡೆ ತಾಲೂಕಿನ ಚೆಂದೂರು ಗ್ರಾಮದ ಈಶ್ವರಮ್ಮ(40) ಎಂದು ಗುರುತಿಸಲಾಗಿದೆ. 
ಪೊಲೀಸರ ಪ್ರಕಾರ, ಈಶ್ವರಮ್ಮ ಪತಿ ಮದ್ಯವ್ಯಸನಿಯಾಗಿದ್ದು, ಕೂಲಿ ಕೆಲಸ ಮಾಡುತ್ತಿದ್ದ ಆಕೆ ಕಷ್ಟಪಟ್ಟು 15 ಸಾವಿರ ರುಪಾಯಿ ಸಂಪಾದನೆ ಮಾಡಿದ್ದರು. ಆದರೆ ಕೇಂದ್ರ ಸರ್ಕಾರ ದಿಢೀರ್ 500 ಹಾಗೂ 1000 ರುಪಾಯಿ ನೋಟ್ ನಿಷೇಧಿಸಿದ ನಂತರ ತೀವ್ರ ಆತಂಕಗೊಂಡ ಮಹಿಳೆ ಇಂದು ಗುಡಿಬಂಡೆಯಲ್ಲಿ ಜಮೆ ಮಾಡಲು ಬಂದಿದ್ದರು. ಈ ವೇಳೆ ಕ್ಯೂನಲ್ಲಿ ನಿಂತಾಗ ಈಶ್ವರಮ್ಮ ಹಣ ಕಳೆದುಕೊಂಡಿದ್ದಾರೆ.
ಈ ಮಧ್ಯೆ ಕ್ಯೂನಲ್ಲಿದ್ದ ಮಹಿಳೆಯ ಹಣ ಯಾರಾದರೂ ಕಳ್ಳತನ ಮಾಡಿದ್ದಾರೋ ಅಥವಾ ಈಶ್ವರಮ್ಮನೇ ಕಳೆದುಕೊಂಡಿದ್ದಾಳೋ ಎಂಬುದರ ಬಗ್ಗೆ ಮಹಿಳೆ ಸ್ಪಷ್ಟವಾಗಿ ಗೊತ್ತಿಲ್ಲ ಎಂದು ಸರ್ಕಲ್ ಇನ್ಸ್ ಪೆಕ್ಟರ್ ಗೌತಮ್ ಅವರು ತಿಳಿಸಿದ್ದಾರೆ.
ಹಣ ಕಳೆದುಕೊಂಡ ನಂತರ ಮಹಿಳೆ ಪೊಲೀಸರಿಗೆ ದೂರು ನೀಡದೆ ನೇರವಾಗಿ ಮನೆಗೆ ಬಂದು ನೇಣಿಗೆ ಶರಣಾಗಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!