ಬೆಂಗಳೂರು: 10 ಲಕ್ಷ ಮೌಲ್ಯದ ಹಶೀಶ್ ವಶ, ಓರ್ವನ ಬಂಧನ
ವಿದೇಶಿ ಪ್ರಜೆಯನ್ನು ಬಂಧಿಸಿರುವ ಎನ್ ಸಿಬಿ ಅಧಿಕಾರಿಗಳು 10 ಲಕ್ಷ ಮೌಲ್ಯದ 1.9 ಕೆಜಿ ಹಶೀಶ್ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದ್ದಾರೆ...
ಬೆಂಗಳೂರು: ವಿದೇಶಿ ಪ್ರಜೆಯನ್ನು ಬಂಧಿಸಿರುವ ಎನ್ ಸಿಬಿ ಅಧಿಕಾರಿಗಳು 10 ಲಕ್ಷ ಮೌಲ್ಯದ 1.9 ಕೆಜಿ ಹಶೀಶ್ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದ್ದಾರೆ.
500 ಗ್ರಾಂಗಳ ಬ್ರಾಂಡೆಡ್ ಟೀ ಪೊಟ್ಟಣಗಳಲ್ಲಿ ಮಾದಕ ದ್ರವ್ಯವನ್ನು ಪ್ಯಾಕ್ ಮಾಡಲಾಗಿತ್ತು. ಈ ಪ್ಯಾಕ್ ಗಳನ್ನು ಮಾಲ್ಡೀವ್ಸ್ ದೇಶಕ್ಕೆ ಕಳುಹಿಸಬೇಕಾಗಿತ್ತು. ಆದರೆ ಕೊರಿಯರ್ ಕಂಪನಿಗೆ ಅನುಮಾನ ಬಂದು ತೆರೆದು ನೋಡಿದ್ದಾರೆ. ಈ ಸಂಬಂಧ ಎನ್ ಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಈ ಮಾಹಿತಿ ಆಧಾರದ ಮೇಲೆ 28 ವರ್ಷದ ವ್ಯಕ್ತಿಯನ್ನು ಪೋಲೀಸರು ಬಂಧಿಸಿದ್ದಾರೆ. ಈ ಹಶೀಶ್ ಗಾಂಜಾ ಗಿಡಗಳಿಂದ ಪಡೆಯಲಾಗುತ್ತದೆ. ಇದು ದೇಹಕ್ಕೆ ಸೇರುವುದರಿಂದ ವ್ಯಕ್ತಿಯ ಮೆದುಳಿನ ನರಗಳು ದುರ್ಬಲಗೊಳ್ಳುತ್ತವೆ. ಜೊತೆಗೆ ಆರೋಗ್ಯದ ಮೇಲೂ ಗಂಬೀರ ಪರಿಣಾಮಗಳಾಗುತ್ತವೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.