ಮಂಗಳೂರು: ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದಗೌಡ ಅವರ ಸಹೋದರ ಡಿ.ವಿ ಭಾಸ್ಕರ ಗೌಡ ನಿನ್ನೆ ಮಂಗಳೂರಿನಲ್ಲಿ ನಿಧನರಾಗಿದ್ದಾರೆ.
ಹಲವು ದಿನಗಳಿಂದ ಜ್ಯಾಂಡೀಸ್ ನಿಂದ ಬಳಲುತ್ತಿದ್ದ ಭಾಸ್ಕರ್ ಗೌಡ ಚಿಕಿತ್ಸೆ ಫಲಿಸದೇ ನಿನ್ನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಭಾಸ್ಕರ ಗೌಡ ಅವರ ಹೆಂಡತಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ. ದಿವಂಗತ ವೆಂಕಟಪ್ಪ ಗೌಡ ಹಾಗೂ ಕಮಲ ಅವರ ಆರು ಮಕ್ಕಳಲ್ಲಿ ಭಾಸ್ಕರ್ ಗೌಡ ಕೂಡ ಒಬ್ಬರು.
ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದಲ್ಲಿ ಇಂದು ಭಾಸ್ಕರ್ ಗೌಡ ಅವರ ಅಂತಿಮ ವಿಧಿವಿಧಾನಗಳು ನೆರವೇರಲಿವೆ.