ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆದ ಗುರುವಂದನಮ್ ಕಾರ್ಯಕ್ರಮದಲ್ಲಿ ಉತ್ತರಾಮ್ನಾಯ ಜ್ಯೋತಿಷ್ಪೀಠ ಹಾಗೂ ಪಶ್ಛಿಮಾಮ್ನಾಯ ಪೀಠಾಧಿಪತಿಗಳಾದ ಸ್ವರೂಪಾನಂದ ಸರಸ್ವತಿ ಸ್ವಾಮೀಜಿ 
ರಾಜ್ಯ

ಭ್ರಷ್ಟಾಚಾರ, ಸ್ತ್ರೀದೌರ್ಜನ್ಯ ತಡೆಗೆ ಶಿಕ್ಷಣದಲ್ಲಿ ರಾಮಾಯಣ, ಮಹಾಭಾರತ ಅಳವಡಿಸಿ: ಸ್ವರೂಪಾನಂದ ಸ್ವಾಮೀಜಿ

ದೇಶದಲ್ಲಿ ದಿನದಿಂದ ಹೆಚ್ಚುತ್ತಿರುವ ಸ್ತ್ರೀಪೀಡನೆ, ಭ್ರಷ್ಟಾಚಾರವನ್ನು ತಡೆಗಟ್ಟಲು, ಧಾರ್ಮಿಕ, ಆಧ್ಯಾತ್ಮಿಕ ಮೌಲ್ಯಗಳನ್ನು ಹೊಂದಿರುವ ರಾಮಾಯಣ, ಮಹಾಭಾರತವನ್ನು ಶಿಕ್ಷಣದ ಪಠ್ಯಗಳಲ್ಲಿ ಅಳವಡಿಸಬೇಕೆಂದು..

ಬೆಂಗಳೂರು: ದೇಶದಲ್ಲಿ ದಿನದಿಂದ ಹೆಚ್ಚುತ್ತಿರುವ ಸ್ತ್ರೀಪೀಡನೆ, ಭ್ರಷ್ಟಾಚಾರವನ್ನು ತಡೆಗಟ್ಟಲು, ಧಾರ್ಮಿಕ, ಆಧ್ಯಾತ್ಮಿಕ ಮೌಲ್ಯಗಳನ್ನು ಹೊಂದಿರುವ ರಾಮಾಯಣ, ಮಹಾಭಾರತವನ್ನು ಶಿಕ್ಷಣದ ಪಠ್ಯಗಳಲ್ಲಿ ಅಳವಡಿಸಬೇಕೆಂದು ಉತ್ತರಾಮ್ನಾಯ ಜ್ಯೋತಿಷ್ಪೀಠ ಹಾಗೂ ಪಶ್ಛಿಮಾಮ್ನಾಯ ಪೀಠಾಧಿಪತಿಗಳಾಗಿರುವ ಜಗದ್ಗುರು ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಸ್ವಾಮಿಗಳು ಕರೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ನವರಾತ್ರಿ ಆಚರಿಸುತ್ತಿರುವ ಹಿನ್ನೆಲೆಯಲ್ಲಿ, ನಗರದ ಜನತೆ ಮಲ್ಲೇಶ್ವರಂ ನ ಚೌಡಯ್ಯ ಮೆಮೋರಿಯಲ್ ಸ್ಮಾರಕ ಭವನದಲ್ಲಿ ಆಯೋಜಿಸಲಾಗಿದ್ದ ಗುರುವಂದನಮ್ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಸ್ವರೂಪಾನಂದ ಸರಸ್ವತಿ ಸ್ವಾಮಿಗಳು, ಶಾಲೆಗಳಲ್ಲಿ ಧಾರ್ಮಿಕ ಮೌಲ್ಯಗಳುಳ್ಳ ಶಿಕ್ಷಣ ಕ್ಷೀಣಿಸುತ್ತಿದ್ದು, ಜಾತ್ಯಾತೀತ ಶಿಕ್ಷಣ ಹೆಚ್ಚುತ್ತಿದೆ ಪರಿಣಾಮವಾಗಿ ಭ್ರಷ್ಟಾಚಾರ, ಸ್ತ್ರೀಪೀಡನೆಗಳಂತಹ ಅನಾಚಾರಗಳು ನಡೆಯುತ್ತಿದೆ. ಇವುಗಳನ್ನು ತಡೆಗಟ್ಟಲು ಶಾಲಾ ಶಿಕ್ಷಣ ಪಠ್ಯಗಳಲ್ಲಿ ರಾಮಾಯಣ, ಮಹಾಭಾರತವನ್ನು ಅವಳಡಿಸಬೇಕು, ಈ ಮೂಲಕ ಇಂದಿನ ಯುವಜನತೆಯಲ್ಲಿ ಧರ್ಮದ ಪ್ರಜ್ಞೆ ಮೂಡಿಸಬೇಕು ಎಂದು ಕರೆ ನೀಡಿದ್ದಾರೆ.

ಅಧರ್ಮ ಹೆಚ್ಚುತ್ತಿರುವುದರ ಪರಿಣಾಮವಾಗಿ ಇಂದಿನ ಮಕ್ಕಳು ಕಲುಷಿತ ಆಹಾರ, ಕಲುಷಿತ ಹಾಲನ್ನು ಸೇವನೆ ಮಾಡುತ್ತಿದ್ದಾರೆ. ಭೂಮಿಯ ಫಲವತ್ತತೆಯನ್ನು ಹೆಚ್ಚಿಸಲು ಗಂಜಲವನ್ನು ಬಳಕೆ ಮಾಡುವುದರ ಬದಲು ಯೂರಿಯಾ ಬಳಕೆ ಮಾಡಲಾಗುತ್ತಿದೆ. ಇಂದು ನಾವು ಶುದ್ಧ ಹಾಲನ್ನು ಸೇವಿಸುವ ಬದಲು ಯೂರಿಯಾ ಸೇವಿಸುತ್ತಿದ್ದೇವೆ. ಭೂಮಿ ತನ್ನ ಫಲವತ್ತತೆ ಕಳೆದುಕೊಳ್ಳುತ್ತಿದೆ ಎಂದು ಸ್ವರೂಪಾನಂದ ಸರಸ್ವತಿ ಸ್ವಾಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನು ಗೋಹತ್ಯೆ ಬಗ್ಗೆಯೂ ಮಾತನಾಡಿರುವ ಸ್ವರೂಪಾನಂದ ಸರಸ್ವತಿ ಸ್ವಾಮಿಗಳು, ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿಯಾಗಿದ್ದಾಗ ಗೋಹತ್ಯೆ ನಡೆಯುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಅವರು ಪ್ರಧಾನಿಯಾದ ನಂತರವಾದರೂ ಗೋಹತ್ಯೆ ನಿಲ್ಲುತ್ತದೆ ಎಂಬ ವಿಶ್ವಾಸವಿತ್ತು. ಆದರೆ ಈಗ ಅದು ಹುಸಿಯಾಗಿದೆ. ಮೋದಿ ಪ್ರಧಾನಿಯಾದ ಬಳಿಕವೂ ಸಹ ಭಾರತ ಗೋಮಾಂಸ ರಫ್ತು ಮಾಡುವ ದೇಶಗಳಲ್ಲಿ ಮುಂಚೂಣಿಯಲ್ಲಿದೆ. ಗೋವು ಕೇವಲ ಹಿಂದೂಗಳಿಗೆ ಮಾತ್ರವಲ್ಲದೆ ಎಲ್ಲಾ ಮತಿಯರಿಗೂ ಪೂಜನೀಯ, ಅದನ್ನು ರಕ್ಷಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದು ಹೇಳಿದ್ದಾರೆ.

ಸಾಯಿಯನ್ನು ಪೂಜಿಸುವುದು ಬಿಡಿ ಸುದರ್ಶನವನ್ನು ಪೂಜಿಸಿ: ಸನಾತನ ಧರ್ಮ ವಿನಾಶವಿಲ್ಲದ್ದು, ಋಷಿಮುನಿಗಳು ಕಂಡುಕೊಂಡ ವೇದಗಳು ಅವಿನಾಶಿ. ವೇದಗಳ ಆಧಾರದಲ್ಲಿ ರೂಪುಗೊಂಡಿರುವ ಸನಾತನ ಧರ್ಮದ ಮೇಲಿನ ನಂಬಿಕೆಗಳಿಗೆ ಇತ್ತೀಚಿನ ದಿನಗಳಲ್ಲಿ ಘಾಸಿ ಉಂಟು ಮಾಡಲಾಗುತ್ತಿದ್ದು, ಪೂಜೆಗೆ ಅರ್ಹರಲ್ಲದವರನ್ನೂ ಪೂಜಿಸಲಾಗುತ್ತಿದೆ. ಕಷ್ಟ ಎದುರಾದಾಗ ದೇವರ ಮೊರೆಹೊಗ್ಗುತ್ತಿದ್ದ ಜನರು ಇತ್ತೀಚಿನ ದಿನಗಳಲ್ಲಿ ನಿರ್ಮಲ್ ಬಾಬಾ, ಸಾಯಿ ಬಾಬಾ ಮೊರೆ ಹೋಗುತ್ತಿದ್ದಾರೆ.ವಿಶ್ವರೂಪವನ್ನು ತೋರಿದ್ದ ಶ್ರೀ ಕೃಷ್ಣನ ಸ್ಥಾನವನ್ನು ಸಾಯಿಬಾಬಾಯಿಂದ ಅತಿಕ್ರಮಣವಾಗಿದೆ. ಗಾಯತ್ರಿ ಮಂತ್ರವನ್ನು ಧಿಯೋ ಸಾಯಿ ಪ್ರಚೋದಯಾತ್ ಎಂದು ಬದಲಾವಣೆ ಮಾಡಲಾಗಿದೆ, ಇಂತಹ ಅಪಚಾರಗಳು ನಿಲ್ಲಬೇಕು, ಸಾಯಿಯನ್ನು ಪೂಜಿಸುವ ಬದಲು ಸುದರ್ಶನನನ್ನು ಪೂಜಿಸಿ ಎಂದು ಸ್ವರೂಪಾನಂದ ಸರಸ್ವತಿ ಕರೆ ನೀಡಿದ್ದಾರೆ.

ಗುರು ವಂದನಮ್ ಕಾರ್ಯಕ್ರಮದಲ್ಲಿ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಎಸ್.ಕೆ ಮುಖರ್ಜಿ, ಶಾಸಕ ಡಿ ಸುಧಾಕರ್ ಜಗದ್ಗುರುಗಳ ಪಾದಪೂಜೆ ನೆರವೇರಿಸಿದರು, ಇದಕ್ಕೂ ಮುನ್ನ ಗೋವಿಂದಾನಂದ ಸರಸ್ವತಿ ಸ್ವಾಮಿಗಳ ನೇತೃತ್ವದಲ್ಲಿ ಸ್ವರೂಪಾನಂದ ಸರಸ್ವತಿ ಸ್ವಾಮಿಗಳಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಕೇಂದ್ರ ಸಚಿವ ಕೆಹೆಚ್ ಮುನಿಯಪ್ಪ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕೆಹೆಚ್ ವೆಂಕಟನಾರಾಯಣ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ ವೆಂಕಟೇಶ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!