ರಾಜ್ಯ

ಅಪರೂಪದ ಗ್ವಿಲೆನ್-ಬಾರ್ (ಜಿಬಿ) ಸಿಂಡ್ರೋಮ್ ನಿಂದ ಬಳಲುತ್ತಿರುವ ಪುತ್ತೂರಿನ ಹುಡುಗಿ ನಿಶ್ಮಿತಾ

Sumana Upadhyaya
ಮಂಗಳೂರು: ಇಲ್ಲಿನ ವೆನ್ ಲಾಕ್ ಆಸ್ಪತ್ರೆಯ ಪ್ರಾದೇಶಿಕ ಸುಧಾರಿತ ಮಕ್ಕಳ ನಿಗಾ ಘಟಕದ ಒಳಗೆ ತನ್ನ 16 ವರ್ಷದ ಮಗಳು ನಿಶ್ಮಿತಾ ಗ್ವಿಲೆನ್-ಬಾರ್ (ಜಿಬಿ) ಸಿಂಡ್ರೋಮ್ ಕಾಯಿಲೆಯಿಂದ ಗುಣಮುಖವಾಗಬಹುದೇ ಎಂದು ಬಾಲಕ್ಕ ಚಿಂತಿಸುತ್ತಿದ್ದರು.
ನಿಶ್ಮಿತಾ ವಾರದ ಹಿಂದೆ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಯಿಂದ ವೆನ್ಲಾಕ್ ಗೆ ದಾಖಲಾಗಿದ್ದಳು. ಆಕೆಗೆ ಜಿಬಿ ಸಿಂಡ್ರೋಮ್ ಎಂಬ ಸ್ವರಕ್ಷಿತ ಕಾಯಿಲೆ ಎಂದು ಗೊತ್ತಾಯಿತು. ಮಂಗಳೂರಿನ ಪುತ್ತೂರು ತಾಲ್ಲೂಕಿನ ಆಲಂಕಾರು ಗ್ರಾಮದ ಬಾಲಕ್ಕನ ಮೂವರು ಮಕ್ಕಳಲ್ಲಿ ನಿಶ್ಮಿತಾ ಚಿಕ್ಕವಳು. ಕೆಲವು ವಾರಗಳ ಹಿಂದೆ ಫ್ಲೂ ಜ್ವರ ಎಂದು ಕೆಲವು ವಾರಗಳ ಹಿಂದೆ ಹಾಸಿಗೆ ಹಿಡಿದಿದ್ದಳು. ಬಾಲಕ್ಕ ಮತ್ತು ಆಕೆಯ ಪತಿ ಪದ್ಮನಾಭ ಕೂಲಿ ಕೆಲಸ ಮಾಡುತ್ತಿದ್ದು, ಆರಂಭದಲ್ಲಿ ಆಯುರ್ವೇದ ಚಿಕಿತ್ಸೆಗೆ ಒಲವು ತೋರಿಸಿದರು. ಆದರೆ ಕೆಲವು ದಿನಗಳ ನಂತರ ನಿಶ್ಮಿತಾಳ ದೇಹ ಉಬ್ಬಿಕೊಳ್ಳಲು ಪ್ರಾರಂಭವಾಯಿತು. ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿವ ವೈದ್ಯರು ನಮ್ಮ ಆಸ್ಪತ್ರೆಗೆ ದಾಖಲಾಗುವಂತೆ ಹೇಳಿದರು ಎನ್ನುತ್ತಾರೆ ವೆನ್ ಲಾಕ್ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ.ರಾಜೇಶ್ವರಿ ದೇವಿ.
ಮಕ್ಕಳ ತಜ್ಞ ಡಾ.ಬಾಲಕೃಷ್ಣ ರಾವ್ ಹೇಳುವ ಪ್ರಕಾರ, ಜಿಬಿ ಸಿಂಡ್ರೋಮ್ ಒಂದು ಅಪರೂಪದ ಕಾಯಿಲೆಯಾಗಿದ್ದು, ದೇಹದ ಸ್ವರಕ್ಷಕ ವ್ಯವಸ್ಥೆ ನರಮಂಡಲದ ಮೇಲೆ ದಾಳಿ ನಡೆಸಿ ಮೂಳೆಗಳು ದುರ್ಬಲಗೊಂಡು ಪಾರ್ಶ್ವವಾಯು ಪೀಡಿತರಾಗುತ್ತಾರೆ. ಇದಕ್ಕೆ ಗೊತ್ತಿರುವ ಔಷಧವಿಲ್ಲ ಎನ್ನುತ್ತಾರೆ.
ರಕ್ತವನ್ನು ರೋಗಿಯ ದೇಹದಿಂದ ಬದಲಾಯಿಸುವ ಚಿಕಿತ್ಸೆಯನ್ನು ವೈದ್ಯರು ಮಾಡುತ್ತಿದ್ದಾರೆ. ಇದಕ್ಕೆ ಬಹಳ ವೆಚ್ಚವಿದ್ದು ಸಾರ್ವಜನಿಕರು ನೆರವಿಗೆ ಬರಬೇಕೆಂದು ಆಸ್ಪತ್ರೆಯ ಡಾ.ಬಾಳಿಗ ಕೇಳಿಕೊಂಡಿದ್ದಾರೆ. ದಾನಿಗಳು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯ ದೂರವಾಣಿ ಸಂಖ್ಯೆ 0824-2442744, 2413205, 2204471, 2204472 ಸಂಖ್ಯೆಗಳನ್ನು ಸಂಪರ್ಕಿಸಬಹುದು.
SCROLL FOR NEXT