ರಾಜ್ಯ

2022ರ ವೇಳೆಗೆ ಇಂಧನ ಆಮದು ಶೇಕಡಾ 10ರಷ್ಟು ಕಡಿಮೆ ಮಾಡಲು ಕ್ರಮ: ಧರ್ಮೇಂದ್ರ ಪ್ರಧಾನ್

Sumana Upadhyaya
ಬೆಂಗಳೂರು: 2022ರ ವೇಳೆಗೆ ತೈಲ ಮತ್ತು ನೈಸರ್ಗಿಕ ಅನಿಲ ಬಳಕೆ ಮೇಲಿನ ಅವಲಂಬನೆಯನ್ನು ಶೇಕಡಾ 10ರಷ್ಟು ಕಡಿಮೆಗೊಳಿಸುವ ಗುರಿಯನ್ನು ಭಾರತ ಹೊಂದಿದೆ ಎಂದು ಕೇಂದ್ರ ಪೆಟ್ರೋಲಿಯಂ ಖಾತೆ ರಾಜ್ಯ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಡಿಸ್ಕವರ್ಡ್ ಸ್ಮಾಲ್ ಫೀಲ್ಡ್ ಬಿಡ್ ರೌಂಡ್ 2016 ಕಾರ್ಯಕ್ರಮದಲ್ಲಿ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇನ್ನು5-6 ವರ್ಷಗಳಲ್ಲಿ ದೇಶೀಯವಾಗಿ ತೈಲ ಮತ್ತು ಅನಿಲದ ಉತ್ಪಾದನೆಯನ್ನು ಹೆಚ್ಚಿಸಿ ವಿದೇಶಗಳಿಂದ ಇಂಧನವನ್ನು ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಹಲವು ಸುಧಾರಣಾ ಕ್ರಮಗಳನ್ನು ತೈಲ ಮತ್ತು ಅನಿಲ ವಲಯಗಳಲ್ಲಿ ತೆಗೆದುಕೊಂಡಿದೆ. ಹೊಸ ದೇಶೀಯ ಅನಿಲ ಬೆಲೆ ಮಾರ್ಗಸೂಚಿ, ಹೈಡ್ರೋಕಾರ್ಬನ್ ಪರಿಶೋಧನೆ ಮತ್ತು ಪರವಾನಗಿ ನೀತಿಯ ಉದಾರೀಕರಣ ಮೊದಲಾದ ಉಪಕ್ರಮಗಳನ್ನು ಅವರು ವಿವರಿಸಿದರು.
ಡಿಸ್ಕವರ್ಡ್ ಸ್ಮಾಲ್ ಫೀಲ್ಡ್ಸ್ ಬಿಡ್ ಯೋಜನೆಯನ್ನು ಹೆಲ್ಪ್ ವಿಸ್ತಾರ ನೀತಿಯಡಿ ಪರಿಚಯಿಸಲಾಗುತ್ತಿದ್ದು, ತೈಲ ಮತ್ತು ಅನಿಲ ನಿಕ್ಷೇಪಗಳು ತೆರವು ಮತ್ತು ಪರಿಶೋಧನೆಗೆ 9 ಸಂಚಿತ ಶಿಲೆಗಳು ಮತ್ತು 67 ನಿಕ್ಷೇಪಗಳು ಮತ್ತು 46 ಗುತ್ತಿಗೆಗಳನ್ನು ಒಳಗೊಂಡಿವೆ. ಅಲ್ಲಿಂದ ತೈಲ ಮತ್ತು ಅನಿಲಗಳನ್ನು ಹೊರತೆಗೆಯಲಾಗುತ್ತದೆ ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ.
67 ನಿಕ್ಷೇಪಗಳಲ್ಲಿ 17 ದಕ್ಷಿಣ ಭಾರತದಲ್ಲಿದ್ದು, 8 ಆಂಧ್ರ ಪ್ರದೇಶ, 2 ತಮಿಳು ನಾಡು ಮತ್ತು 7 ಕರ್ನಾಟಕದ ಕೋಲಾರ ಜಿಲ್ಲೆಗಳಲ್ಲಿವೆ.
SCROLL FOR NEXT